ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಎಸ್.ಎಲ್.ಆರ್. ಮೆಟಾಲಿಕ್ಸ್ ಲಿ. ಕಂಪನಿಯು ಸಿಎಸ್‌ಆರ್ ಅನುದಾನದಲ್ಲಿ ಹಲವಾರು ಸೌಲಭ್ಯ ಕೊಡಲು ಸದಾ ಸಿದ್ಧವಿರುತ್ತದೆ. ಸೌಲಭ್ಯಗಳನ್ನು ಪ್ರತಿಯೊಬ್ಬರು ಸರಿಯಾಗಿ ಸದುಪಯೋಗಪಡಿಸಿಕೊಂಡು ಅವುಗಳನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕಂಪನಿಯ ಸಿ.ಎಫ್.ಓ ಶಿವದತ್ತ ಹೇಳಿದರು.ಇಲ್ಲಿನ ಅಂಬೇಡ್ಕರ್ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಎಲ್ಆರ್ ಮೆಟಾಲಿಕ್ಸ್ ಲಿ. ಕಂಪನಿ ಸಿಎಸ್ಆರ್ ವಿದ್ಯಾರ್ಥಿ ಮಿತ್ರ ಯೋಜನೆಯಲ್ಲಿ 202425ನೇ ಸಾಲಿನಲ್ಲಿ ಸುಮಾರು ₹18 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 2 ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಎಸ್ಆರ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಮಾತನಾಡಿದರು.ತಹಶೀಲ್ದಾರ್ ಶೃತಿ ಎಂ. ಮಳ್ಳಪ್ಪಗೌಡರ್ ನೂತನ ಶಾಲಾ ಕೊಠಡಿ ಉದ್ಘಾಟಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಗೇರಿ ಹನುಮಂತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ನಾಡಕಚೇರಿಯ ಉಪ ತಹಸಿಲ್ದಾರ್ ಶ್ರೀಧರ ಹುರುಕಡ್ಲಿ, ನಾಡಕಚೇರಿ ಅಧಿಕಾರಿಗಳಾದ ನಾಗೇಶ, ಎಸ್‌ಡಿಎಂಸಿ ಉಪಾಧ್ಯಕ್ಷೆ ಎಲ್. ಜಾನಕಿ, ಪಪಂ ಸದಸ್ಯ ಮರಡಿ ಸುರೇಶ, ಶಿಕ್ಷಣ ಸಂಯೋಜಕ ಎಂ. ರಾಜು, ಸಿಆರ್‌ಪಿ ಕರಿಬಸಪ್ಪ, ಎಸ್ಎಲ್ಆರ್ ಕಂಪನಿಯ ಮಾರುತಿ ಗೋಷಿ, ಶಿವಕುಮಾರ್, ಗಾಳೆಪ್ಪ, ವಾಲಾಪುರ ರಾಜ, ಶಿವು, ಅಂಜಿನಿ, ಮುಖ್ಯ ಶಿಕ್ಷಕರಾದ ಸಿ. ವೆಂಕಟೇಶ್, ಸಿ. ರಂಗಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹಲಗಿ ನಾಗರಾಜ, ಗುತ್ತಿಗೆದಾರ ಅಯ್ಯನಹಳ್ಳಿ ಅಂಬರೀಶ, ಸ್ಥಳೀಯ ಮುಖಂಡರಾದ ಎಂ. ವಿರೂಪಾಕ್ಷ, ಎಂ ಮಂಜುನಾಥ, ಸೋಮನಾಥ, ಎಲ್. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.