ಸಾರಾಂಶ
ತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಯಂದು ಮಾಜಿ ಸೈನಿಕರಿಗೆ ಪ್ರಾತಿನಿಧ್ಯ ನೀಡಬೇಕು. ದೇಶದ ಗಡಿ ರಕ್ಷಿಸಿದ ಸೈನಿಕರು ನಿವೃತ್ತಿಯ ನಂತರ ಗ್ರಾಮದಲ್ಲಿ ಶಿಸ್ತು ಕಲಿಸುವ ಮೂಲಕ ಜನರಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳಿಸಬೇಕು
ಕನ್ನಡಪ್ರಭ ವಾರ್ತೆ ಅಥಣಿ
ತಮ್ಮ ಪ್ರಾಣ ಲೆಕ್ಕಿಸದೆ ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಂದ ಇಂದು ರಾಷ್ಟ್ರದ ಜನ ನೆಮ್ಮದಿಯಿಂದ ಇದ್ದಾರೆ. ಆದರೆ, ಇಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಭ್ರಷ್ಟಾಚಾರ, ಅನಾಚಾರ ಮಾಡಿ ದೇಶ ಅಧಃಪತನದತ್ತ ತಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು. ತೆಲಸಂಗ ಗ್ರಾಮದ ನಿವೃತ್ತ ಸೈನಿಕ ಕ್ಷೇಮಾಭಿವೃದ್ಧಿ ಸಂಘದಿಂದ ನೂತನ ಸೈನಿಕರ ಭವನ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಯಂದು ಮಾಜಿ ಸೈನಿಕರಿಗೆ ಪ್ರಾತಿನಿಧ್ಯ ನೀಡಬೇಕು. ದೇಶದ ಗಡಿ ರಕ್ಷಿಸಿದ ಸೈನಿಕರು ನಿವೃತ್ತಿಯ ನಂತರ ಗ್ರಾಮದಲ್ಲಿ ಶಿಸ್ತು ಕಲಿಸುವ ಮೂಲಕ ಜನರಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳಿಸಬೇಕು ಎಂದರು.ನಿವೃತ್ತ ಸೇನಾಧಿಕಾರಿ ಕರ್ನಲ್ ಬಿ.ಎಸ್.ಹಿಪ್ಪರಗಿ ಮಾತನಾಡಿ, ಸರ್ಕಾರದ ಮೇಲೆ ಸೈನಿಕರನ್ನು ಮಾತ್ರವಲ್ಲ ಇಡಿ ದೇಶದ ಜನರನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ . ಇದನ್ನು ಅರ್ಥಮಾಡಿಕೊಳ್ಳೋಣ. ನಾವು ದೇಶ ಸೇವೆ ಮಾಡಿದ್ದೇವೆ. ನಾವೇ ಶ್ರೇಷ್ಠ ಎನ್ನುವ ಭಾವನೆ ಬೇಡ ಎಂದರು. ಕುಂಬಾರ ಗುರುಪೀಠದ ಬಸವಗುಂಡಯ್ಯಾ ಸ್ವಾಮೀಜಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಾಬು ಅರಟಾಳ, ನ್ಯಾಯವಾದಿ ಅಮೋಘ ಖೊಬ್ರಿ, ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ಗ್ರಾಪಂ ಉಪಾಧ್ಯಕ್ಷೆ ಮಿನಾಕ್ಷಿ ಬಾಣಿ, ಕಾಶೀನಾಥ ಕುಂಬಾರಕರ, ಅರವಿಂದ ಉಂಡೋಡಿ, ಶಿವಪ್ಪಾ ಚೌಗಲೆ, ಬೀಸಲಪ್ಪ ತಾಂವಶಿ, ಶ್ರೀಮಂತ ಸೊಂದಕರ, ಅಣ್ಣಾಸಾಬ ಸಾವಳಗಿ, ಶಿವಮಲ್ಲಪ್ಪಾ ಕೊಳಲಿ, ಗಂಗಪ್ಪಾ ಗಂಗಾದರ, ಮಾರುತಿ ಚವ್ಹಾಣ, ಸುಭಾಸ ಮೋರೆ ಸೇರಿದಂತೆ ನೂರಾರು ಜನ ನಿವೃತ್ತ ಸೈನಿಕರು ಇದ್ದರು. ಗ್ಯಾನು ನಲವಡೆ ಸ್ವಾಗತಿಸಿದರು. ಗಪೂರ ಮುಲ್ಲಾ ನಿರೂಪಿಸಿದರು. ಧರೆಪ್ಪಾ ಮಾಳಿ ವಂದಿಸಿದರು.