ತಾಲೂಕಿನಲ್ಲಿ 50 ಕೆರೆಗಳನ್ನು ಪುನರ್ ಅಭಿವೃದ್ದಿ ಮಾಡುತ್ತಿದ್ದು, ಈ ಭಾಗದಲ್ಲಿ 130 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಬಳಿ ಈಗಾಗಲೇ ಚರ್ಚಿಸಿದ್ದೇನೆ. ಇದರ ಜೊತೆಗೆ ತಾಲೂಕಿನ 54 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದ್ದು, ಮುಂದಿನ ದಿನಗಳಲ್ಲಿ ಸಹ ರೈತರಿಗೆ, ಕೂಲಿಕಾರ್ಮಿಕರಿಗೆ ಹಾಗೂ ಕೃಷಿಕರಿಗೆ ಅಗತ್ಯ ಬೇಕಾದ ಎಲ್ಲ ಮೂಲ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರು ನನಗೆ ಹೆಚ್ಚು ಮತ ನೀಡಿ ಆಯ್ಕೆ ಮಾಡಿದ್ದು, ನಿಮ್ಮ ಋಣ ತೀರಿಸಿಲು ನನಗೆ ಕೊಟ್ಟಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಜನರ ಅಭಿವೃದ್ಧಿಗೆ ಬಳಸುತ್ತೇನೆ ರಾಜಣ್ಣ ಭರವಸೆ ನೀಡಿದರು.

ಕನ್ನಡಪ್ರಭವಾರ್ತೆ, ಮಧುಗಿರಿ

ಸಹಕಾರಿ ಸಂಘಗಳ ಮೂಲಕ ಕೃಷಿಕರ ಹಾಗೂ ಕೂಲಿ ಕಾರ್ಮಿಕರ ಅಭ್ಯುದಯ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೊಡಿಗೇನಹಳ್ಳಿ ಹೋಬಳಿಯಲ್ಲಿ ಮೂರು ವಿ.ಎಸ್.ಎಸ್.ಎನ್ ನೂತನ ಕಟ್ಟಡಗಳ ಜನಾರ್ಪಣೆ ಜೊತೆಗೆ 1 ಕೋಟಿ ರು. ಕೆಸಿಸಿ ಸಾಲ ರೈತರಿಗೆ ವಿತರಿಸಲಾಗುತ್ತಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.

ಶುಕ್ರವಾರ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಡಗತ್ತೂರು, ಸಿಂಗನಹಳ್ಳಿ ಹಾಗೂ ಕೊಡಿಗೇನಹಳ್ಳಿಯಲ್ಲಿ ನೂತನ ವಿ.ಎಸ್.ಎಸ್.ಎನ್. ಕಟ್ಟಡಗಳ ಉದ್ಘಾಟನೆ ಮತ್ತು ತೆರಿಯೂರಿನಲ್ಲಿ ನೂತನ ವಿ.ಎಸ್.ಎಸ್.ಎನ್. ಆರಂಭಕ್ಕೆ ಚಾಲನೆ, ಪಶು ಆಸ್ಪತ್ರೆಗೆ ಗುದ್ದಲಿ ಪೂಜೆ ಮತ್ತು ನೂತನ ಕೃಷಿ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಕೊಡಿಗೇನಹಳ್ಳಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ 400 ಕೋಟಿ ರು. ಸಾಲ ಮನ್ನಾ ಮಾಡಲಾಗಿತ್ತು. ಪ್ರಸ್ತುತ ನೀಡಿರುವ 170 ಕೋಟಿ ಜೊತೆಗೆ ಈಗ 1 ಕೋಟಿಯಷ್ಟು ಸಾಲ 4 ಸೊಸೈಟಿಗಳಿಗೆ ನೀಡುತ್ತಿದ್ದೇವೆ. ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ 7.30 ಲಕ್ಷ ಸಾಲ ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದ್ದೇವೆ. ನಾವು ನೀಡುವ ಸಾಲ ಸರ್ಕಾರದ ಹಣವಲ್ಲ. ಅದು ರೈತರಿಂದ ಠೇವಣಿ ಸಂಗ್ರಹಿಸಿದ ಹಣವಾಗಿದ್ದು, ಅದರ ಜೊತೆಗೆ ನಾವು ನಬಾರ್ಡ್ ನಿಂದ ಸಾಲ ಪಡೆದು ರೈತರ ಜೀವನ ಮಟ್ಟ ಸುಧಾರಣೆ ಮತ್ತು ಆರ್ಥಿಕವಾಗಿ ಮೇಲೆತ್ತುವ ಸಲುವಾಗಿ ಸಾಲ ನೀಡುತ್ತಿದ್ದೇವೆ. ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ರಾಜಣ್ಣ ತಿಳಿಸಿದರು.

ತಾಲೂಕಿನಲ್ಲಿ 50 ಕೆರೆಗಳನ್ನು ಪುನರ್ ಅಭಿವೃದ್ದಿ ಮಾಡುತ್ತಿದ್ದು, ಈ ಭಾಗದಲ್ಲಿ 130 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಬಳಿ ಈಗಾಗಲೇ ಚರ್ಚಿಸಿದ್ದೇನೆ. ಇದರ ಜೊತೆಗೆ ತಾಲೂಕಿನ 54 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದ್ದು, ಮುಂದಿನ ದಿನಗಳಲ್ಲಿ ಸಹ ರೈತರಿಗೆ, ಕೂಲಿಕಾರ್ಮಿಕರಿಗೆ ಹಾಗೂ ಕೃಷಿಕರಿಗೆ ಅಗತ್ಯ ಬೇಕಾದ ಎಲ್ಲ ಮೂಲ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರು ನನಗೆ ಹೆಚ್ಚು ಮತ ನೀಡಿ ಆಯ್ಕೆ ಮಾಡಿದ್ದು, ನಿಮ್ಮ ಋಣ ತೀರಿಸಿಲು ನನಗೆ ಕೊಟ್ಟಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಜನರ ಅಭಿವೃದ್ಧಿಗೆ ಬಳಸುತ್ತೇನೆ ರಾಜಣ್ಣ ಭರವಸೆ ನೀಡಿದರು.

ನಬಾರ್ಡ್ ಅಧಿಕಾರಿ ಸಾಯಿಗಣೇಶ್ (ಆಂಧ್ರ ಪ್ರದೇಶ್) ಮಾತನಾಡಿ, ವಿಎಸ್‌ಎಸ್‌ಎನ್ ಸೊಸೈಟಿಗಳನ್ನು ರೈತರ, ಕೃಷಿಕರ ಬದುಕು ಹಸನು ಮಾಡಲು ಸೂಪರ್ ಮಾರ್ಕೆಟ್ ಗಳನ್ನಾಗಿ ರೂಪಿಸಬೇಕೆಂಬುದು ನಬಾರ್ಡ್ ಮೂಲ ಉದ್ದೇಶವಾಗಿದೆ. ಆ ಮೂಲಕ ನಮ್ಮ ರೈತರಿಗೆ ಸೂಪರ್ ಮಾರ್ಕೆಟ್ ಗಳಲ್ಲಿ ದೊರೆಯುವಂತಹ ಎಲ್ಲ ವಸ್ತುಗಳು ನಮ್ಮ ಸೊಸೈಟಿಗಳಲ್ಲೇ ಸಿಗಬೇಕು. ಈ ನಿಟ್ಟಿನಲ್ಲಿ ನಬಾರ್ಡ್ ಅಗತ್ಯ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸಬೇಕು ಎಂಬುದು ನಬಾರ್ಡ್ ಮಹಾದಾಸೆ ಎಂದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಜೆ.ಡಿ. ವೆಂಕಟೇಶ್, ಎಂ.ಪಿ. ಕಾಂತರಾಜು, ಕೆ.ವಿ. ವೆಂಕಟೇಶ್, ಸಂಜೀವಗೌಡ ಮಾತನಾಡಿದರು.

ಡಿಸಿಸಿ ಬ್ಯಾಂಕ್ ಸಲಹೆಗಾರ ರಮಣರೆಡ್ಡಿ, ನಿರ್ದೇಶಕರಾದ ಲಕ್ಷ್ಮಿನಾರಾಯಣ, ಬಿ. ನಾಗೇಶ್ ಬಾಬು, ನಾರಾಯಣಗೌಡ, ಡಿಸಿಸಿ ಬ್ಯಾಂಕ್ ಅಧಿಕಾರಿಗಳಾದ ಜಂಗಮಪ್ಪ, ಓಬಳೇಶ್, ಶ್ರೀನಾಥ್, ನಟರಾಜು, ಮೇಲ್ವೀಚಾರಕ ರಾಮಕೃಷ್ಣ, ಶಾಖಾ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ್, ಜಿ. ಪುಷ್ಪಲತಾ, ಜಿ.ಟಿ. ಆಶಾರಾಣಿ, ಸಿಇಒಗಳಾದ ಕಡಗತ್ಥೂರು ರಾಮಾಂಜಿನಯ್ಯ, ತೆರಿಯೂರು ನಾಗರಾಯ್ಯ, ಸಿಂಗನಹಳ್ಳಿ ಪ್ರಸಾದ್ ಬಾಬು, ಸುದ್ದೇಕುಂಟೆ ನಾಗರಾಜು, ಕೊಡಿಗೇನಹಳ್ಳಿ ಕೆ.ಜೆ. ಶ್ರೀನಿವಾಸ್, ಮುಖಂಡರಾದ ಕೆ.ಟಿ, ತಿಮ್ಮಾರೆಡ್ಡಿ, ಲಕ್ಷ್ಮಿನರಸೇಗೌಡ, ಎಚ್.ಎಮ್.ಆರ್, ಶಾಮೀರ್, ಗೋಪಾಲರೆಡ್ಡಿ, ನಾಸೀರ್ ಉದ್ದೀನ್, ವಕೀಲ ಸಂಜೀವಮೂರ್ತಿ, ಚಲಪತಿ ಇದ್ದರು.

-----

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಜನಾಕರ್ಷಣೆಯ ಹೋಬಳಿಯಾಗಿ ಹೊರ ಹೊಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಿಗೇನಹಳ್ಳಿ ಭಾಗದಲ್ಲಿ ದ್ವಿರಥ ರಸ್ತೆ, ನಾಡಕಚೇರಿ ಮತ್ತು ರೈತ ಸಂಪರ್ಕ ಕೇಂದ್ರ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಕೊಡಿಗೇನಹಳ್ಳಿ ತಾಲೂಕು ಕೇಂದ್ರವಾಗ ಬೇಕು ಎಂಬ ಜನಾಭಿಪ್ರಾಯಕ್ಕ ಪೂರಕವಾದಿ ಎಲ್ಲ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ.

ಕೆ.ಎನ್‌. ರಾಜಣ್ಣ , ಶಾಸಕರು, ಮಧುಗಿರಿ