ಸಾರಾಂಶ
ಮಣಿಪಾಲ ಮಾತೃ್ ಅಮೃತ್ ಮಿಲ್ಕ್ ಬ್ಯಾಂಕ್ ಮಣಿಪಾಲ್ ಫೌಂಡೇಶನ್‌ನ ಯೋಜನೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ನವಜಾತ ಶಿಶುಶಾಸ್ತ್ರ ವಿಭಾಗ (1ನೇ ಮಹಡಿ, ಮಹಿಳೆಯರು ಮತ್ತು ಮಕ್ಕಳ ಬ್ಲಾಕ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ)ವನ್ನು ಇದಕ್ಕಾಗಿ ಸಂಪರ್ಕಿಸಬಹುದು.
ಕನ್ನಡಪ್ರಭ ವಾರ್ತೆ ಮಣಿಪಾಲ
ಉಡುಪಿಯ ಮೊದಲ ಮಾನವ ಎದೆಹಾಲು ನಿಧಿ (ಹ್ಯೂಮನ್ ಬ್ರೆಸ್ಟ್ ಮಿಲ್ಕ್ ಬ್ಯಾಂಕ್) ‘ಮಣಿಪಾಲ ಮಾತೃ್ - ಅಮೃತ್ ಮಿಲ್ಕ್ ಬ್ಯಾಂಕ್’ ಅನ್ನು ಮಂಗಳವಾರ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ, ಔಷಧವಿದ್ದಂತೆ. ನವಜಾತ ಶಿಶುಗಳು ತಮ್ಮ ಆರಂಭಿಕ ದಿನಗಳಲ್ಲಿ ಎದೆಹಾಲನ್ನು ಪಡೆಯುವುದರಿಂದ ಅವುಗಳ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್, ಶೈಕ್ಷಣಿಕ ಕರಪತ್ರವನ್ನು ಬಿಡುಗಡೆ ಮಾಡಿದರು. ಕೆ.ಎಂ.ಸಿ. ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ನವಜಾತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶೀಲಾ ಎಸ್. ಮಥಾಯಿ ಉಪಸ್ಥಿತರಿದ್ದರು. ಡಾ.ಶ್ರುತಿ ಕೆ.ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.ಮಣಿಪಾಲ ಮಾತೃ್ ಅಮೃತ್ ಮಿಲ್ಕ್ ಬ್ಯಾಂಕ್ ಮಣಿಪಾಲ್ ಫೌಂಡೇಶನ್‌ನ ಯೋಜನೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ಆರೋಗ್ಯವಂತ ಹಾಲುಣಿಸುವ ತಾಯಂದಿರು ತಮ್ಮ ಶಿಶುಗಳೊಂದಿಗೆ ದಾಖಲಾದವರು ಅಥವಾ ತಮ್ಮ ಶಿಶುಗಳ ವಾಡಿಕೆಯ ತಪಾಸಣೆಗಾಗಿ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಹಾಜರಾಗುವ ತಾಯಂದಿರು ಮಾನವ ಹಾಲನ್ನು ದಾನ ಮಾಡಬಹುದು. ನವಜಾತ ಶಿಶುಶಾಸ್ತ್ರ ವಿಭಾಗ (1ನೇ ಮಹಡಿ, ಮಹಿಳೆಯರು ಮತ್ತು ಮಕ್ಕಳ ಬ್ಲಾಕ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ)ವನ್ನು ಇದಕ್ಕಾಗಿ ಸಂಪರ್ಕಿಸಬಹುದು.