ಚೌಡೇಶ್ವರಿ ದೇವಾಲಯ ಉದ್ಘಾಟನೆ, ದೇವಿ ಪ್ರತಿಷ್ಠಾಪನೆ ಕಾರ್‍ಯ

| Published : Apr 11 2024, 12:48 AM IST

ಚೌಡೇಶ್ವರಿ ದೇವಾಲಯ ಉದ್ಘಾಟನೆ, ದೇವಿ ಪ್ರತಿಷ್ಠಾಪನೆ ಕಾರ್‍ಯ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ಜೇಡಿಕಟ್ಟೆ ಹೊಸೂರಿನ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಧಾರ್ಮಿಕ ಟ್ರಸ್ಟ್ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಉದ್ಘಾಟನೆ ಹಾಗೂ ದೇವಿ ಪ್ರತಿಷ್ಠಾಪನಾ ಕಾರ್ಯ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಭದ್ರಾವತಿಜೇಡಿಕಟ್ಟೆ ಹೊಸೂರಿನ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಧಾರ್ಮಿಕ ಟ್ರಸ್ಟ್ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಉದ್ಘಾಟನೆ ಹಾಗೂ ದೇವಿ ಪ್ರತಿಷ್ಠಾಪನಾ ಕಾರ್ಯ ವಿಜೃಂಭಣೆಯಿಂದ ನೆರವೇರಿತು.ಕಳೆದ ಸುಮಾರು 10 ವರ್ಷಗಳಿಂದ ಟ್ರಸ್ಟ್ ವತಿಯಿಂದ ವಿವಿಧ ದೇವಸ್ಥಾನಗಳ ನಿರ್ಮಾಣ, ದೇವರುಗಳ ಪ್ರತಿಷ್ಠಾಪನೆ ಸೇರಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದು, ಬಿಳಿಕಿ ಹಿರೇಮಠದ ಶ್ರೀ ರಾಜೋಟೇಶ್ವರ ಶಿವಾರ್ಚಾಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿ ಪ್ರತಿಷ್ಠಾಪನೆ ನಡೆಯಿತು. ಈ ಸಂಬಂಧ ಗಣಹೋಮ, ವಾಸ್ತುಹೋಮ, ನೂರಾರು ಮಹಿಳೆಯರಿಂದ ಕಳಸ ಮೆರವಣಿಗೆ ಹಾಗೂ ಗೋಣಿಬೀಡಿನ ಶಿವರಾಜ್ ಸಂಗಡಿಗರಿಂದ ವೀರಗಾಸೆ, ಗ್ರಾಮದ ಯುವಕರಿಂದ ಡೊಳ್ಳು ಕುಣಿತ ಮತ್ತು ನಾದಸ್ವರದೊಂದಿಗೆ ವಿವಿಧ ದೇವರುಗಳ ಉತ್ಸವ ಮೆರವಣಿಗೆ, ದೇವಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಸೇರಿ ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿದವು. ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯರು ಆಶೀರ್ವಚನ ನೀಡಿ, ಧಾರ್ಮಿಕ ಆಚರಣೆಗಳು ಹೆಚ್ಚಾಗಿ ನಡೆಯಬೇಕು. ಇದರಿಂದಾಗಿ ಮಳೆ-ಬೆಳೆ ಸಮೃದ್ಧಿಯಾಗುವ ಜೊತೆಗೆ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಧಾರ್ಮಿಕ ಆಚರಣೆಗಳನ್ನು ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಆಚರಿಸಬೇಕೆಂದರು. ದೇವಸ್ಥಾನದ ಅರ್ಚಕರಾದ ತಿಪ್ಪೇಶಿ(ರುದ್ರೇಶ್), ಆನಂದಸ್ವಾಮಿ, ಅಭಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎಸ್. ವಾಗೀಶ್, ಉಪಾಧ್ಯಕ್ಷ ಶಿವಣ್ಣ(ಹೋಟೆಲ್), ಗೌರವ ಸಲಹೆಗಾರ ಜುಂಜಯ್ಯ, ಬಾಬುರಾವ್, ಸಲಹೆಗಾರರಾದ ಎಂ. ಶಿವಕುಮಾರ್, ಪ್ರಕಾಶ್, ಮೇಘನಾಥನ್, ಧನರಾಜ್, ದೇವರಾಜ್, ರಾಮಲಿಂಗಂ ಹಾಗು ನಾಗರತ್ನ ಸಿದ್ದಲಿಂಗಯ್ಯ, ಶಾರದಾಬಾಯಿ, ಜೆ. ಮೀನಾಕ್ಷಿ, ರತ್ನಮ್ಮ ಸೇರಿ ಟ್ರಸ್ಟ್ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.