ಕರ್ನಾಟಕ ಏಕೀಕರಣ ಚಳವಳಿ, ಐತಿಹಾಸಿಕ ದಾಖಲೆ, ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ

| Published : Feb 04 2024, 01:31 AM IST

ಕರ್ನಾಟಕ ಏಕೀಕರಣ ಚಳವಳಿ, ಐತಿಹಾಸಿಕ ದಾಖಲೆ, ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಲಕೋಟಿಯ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರದಿಂದ ಪ್ರಾರಂಭಿಸಲಾಗಿರುವ ಮೂರು ದಿನಗಳ ಕರ್ನಾಟಕ ಏಕೀಕರಣ ಚಳುವಳಿ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು.

ಗದಗ: ಕರ್ನಾಟಕ ಪತ್ರಗಾರ ಇಲಾಖೆ, ಪ್ರಾದೇಶಿಕ ಪತ್ರಾಗಾರ ಇಲಾಖೆ ಧಾರವಾಡ ಹಾಗೂ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹುಲಕೋಟಿ ಇವರುಗಳ ಸಹಯೋಗದಲ್ಲಿ ಹುಲಕೋಟಿಯ ಕೆ.ಎಚ್.ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರದಿಂದ ಪ್ರಾರಂಭಿಸಲಾಗಿರುವ ಮೂರು ದಿನಗಳ ಕರ್ನಾಟಕ ಏಕೀಕರಣ ಚಳುವಳಿ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ಪತ್ರಾಗಾರ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ, ಹುಲಕೋಟಿಯ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ, ಧಾರವಾಡ ಪ್ರಾದೇಶಿಕ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಗದಗ ತಹಸೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ, ಜೆ.ಕೆ. ಜಮಾದಾರ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ಬಗ್ಗೆ ರಾಜ ಪ್ರಮುಖರ ಅಭಿಪ್ರಾಯ, ಕರ್ನಾಟಕ ಪ್ರಾಂತ್ಯ ರಚನೆಗೆ ನೆಹರೂರವರ ಬೆಂಬಲ, ಮುಂಬೈ ಶಾಸನ ಸಭೆಯಲ್ಲಿ ಕನ್ನಡ ಸದಸ್ಯರ ಗೈರು ಹಾಜರಿ, ಉಳುವವನಿಗೆ ಭೂಮಿ ಕೊಡಿಸುವ ಮಸೂದೆ ಪರಿಶೀಲನೆ, ಕರ್ನಾಟಕ ಕೀರ್ತಿ ಸ್ತಂಭ, ನವಭಾರತ- ಶಾಂತಿ ಮಾರ್ಗದಿಂದಲೇ ಏಕೀಕರಣ ಸಾಧನೆಯಾಗಬೇಕು, ಬೊಂಬಾಯಿ ಕನ್ನಡ ಶಾಲೆಯ ನೂತನ ಕಟ್ಟಡ, ಸರದಾರ ವೀರನಗೌಡರು ಶ್ರೀಮತಿ ನಾಗಮ್ಮನವರಿಗೆ ಬೆಳಗಾವಿ ಸೆಂಟ್ರಲ್ ಜೈಲಿನಿಂದ ಬರೆದ ಪತ್ರ, ಕೋರ್ಟುಗಳಲ್ಲಿ ಕನ್ನಡ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ನವಭಾರತ -ಕರ್ನಾಟಕ ಪ್ರಾಂತ್ಯ ರಚನೆ, ಕನ್ನಡದ ಉತ್ಸವ, ಬಿಜಾಪೂರ ನ್ಯಾಯಾಲಕ್ಕೆ ಬಾಬಾಸಾಹೇಬರ ಅವಿಸ್ಮರಣೀಯ ಭೇಟಿ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.