ಸಾರಾಂಶ
ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗಾಣಕಲ್ ನಟರಾಜು ಸೋಮವಾರ ಅಧಿಕಾರ ಸ್ವೀಕರಿಸಿದರು.
ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗಾಣಕಲ್ ನಟರಾಜು ಸೋಮವಾರ ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನ ಆಲಿ ಆಸ್ಕರ್ ರಸ್ತೆಯಲ್ಲಿರುವ ಬಿಡಿಎ ಕಚೇರಿ ಸಭಾಂಗಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗಾಣಕಲ್ ನಟರಾಜು ಮತ್ತು ಸಮಿತಿ ಸದಸ್ಯರಾದ ಅಬ್ಬನಕುಪ್ಪೆರಮೇಶ್, ಸಿ.ಎಚ್.ಪುಟ್ಟಯ್ಯ, ನರಸಿಂಹಯ್ಯ, ಕಲ್ಯಾಣಕುಮಾರಿ ಅವರ ಜೊತೆಗೆ ಅಧಿಕಾರ ಸ್ವೀಕಾರ ಮಾಡಿದರು.ಮಹಾನಗರ ಅಪರ ಆಯುಕ್ತರಾದ ಮಾರುತಿಪ್ರಸನ್ನ ಮತ್ತು ಪ್ರಾಧಿಕಾರದ ಅಧಿಕಾರಿಗಳು ಹೂಗುಚ್ಚ ನೀಡಿ ಅಭಿನಂದಿಸಿದರು.
ಸಂಸದ ಡಿ.ಕೆ.ಸುರೇಶ್, ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಕೆ.ರಾಜು, ಬಿಎಂಐಸಿಪಿ ಅದ್ಯಕ್ಷ ರಘುನಂದನ್ ರಾಮಣ್ಣ, ಬಮೂಲ್ ನಿರ್ದೇಶಕ ಪಿ.ನಾಗರಾಜು, ಕಾಂಗ್ರೆಸ್ ಮುಖಂಡರಾದ ಕುಸುಮ ಹನುಮಂತರಾಯಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾಮುನಿರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರುಪ್ರಸಾದ್, ನಗರ ಘಟಕ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ತಾಪಂ ಮಾಜಿ ಸದಸ್ಯರಾದ ಮಹೀಪತಿ, ಎಚ್.ಸಿ.ರಾಜಣ್ಣ, ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮೀಸೆನವೀನ್, ಮುಖಂಡರಾದ ಪುಟ್ಟೀರಮ್ಮನದೊಡ್ಡಿ ಸ್ವಾಮಿ, ಶೇಷಗಿರಿಹಳ್ಳಿಶಿವಣ್ಣ, ಸತೀಶ್, ಮಾಯಗಾನಹಳ್ಳಿ ಲೋಕೇಶ್, ಷಡಕ್ಷರಿದೇವ, ಸುನಿಲ್, ಹೇಮಂತ್‌ಕುಮಾರ್, ಪೆಪ್ಸಿಉಮೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಆರ್.ಮಲ್ಲೇಶ್, ಯು.ನರಸಿಂಹಯ್ಯ ಮುಖಂಡರು, ಕಾರ್ಯಕರ್ತರು ಶುಭ ಕೋರಿದರು.11ಕೆಆರ್ ಎಂಎನ್ 7.ಜೆಪಿಜಿಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗಾಣಕಲ್ ನಟರಾಜು ಸೋಮವಾರ ಅಧಿಕಾರ ಸ್ವೀಕರಿಸಿದರು.