ಸರ್ಕಾರಿ ಬಾಲಕಿಯರ ಕಾಲೇಜು ಮತ್ತು ಬಾಲಕರ ಪ್ರೌಢಶಾಲೆಗೆ 25 ಕಂಪ್ಯೂಟರ್‌ಗಳನ್ನು ಸಂಸ್ಥೆಯಿಂದ ಒದಗಿಸುವುದು, ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆ ಬರೆಯಲು ಕೋರ್ಸ್

ನ್ಯಾಮತಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಆವರಣದಲ್ಲಿ ಜು.3ರಂದು ಗುರುಶಿಷ್ಯ ಸಂಗಮ ಪಬ್ಲಿಕ್‌ ಚಾರಿಟಬಲ್‌ ಟ್ರಸ್ಟ್‌ ಅಧಿಕೃತ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ ಹೇಳಿದರು.

ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿಗೆ ಶೈಕ್ಷಣಿಕ ವರ್ಷದ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಉಭಯ ಶಾಲಾಭಿವೃದ್ಧಿ ಅಧ್ಯಕ್ಷರು ಮತ್ತು ಸದಸ್ಯರ ಒಪ್ಪಿಗೆ ಪಡೆಯಲಾಯಿತು ಎಂದು ಹೇಳಿದರು.

ಸರ್ಕಾರಿ ಬಾಲಕಿಯರ ಕಾಲೇಜು ಮತ್ತು ಬಾಲಕರ ಪ್ರೌಢಶಾಲೆಗೆ 25 ಕಂಪ್ಯೂಟರ್‌ಗಳನ್ನು ಸಂಸ್ಥೆಯಿಂದ ಒದಗಿಸುವುದು, ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆ ಬರೆಯಲು ಕೋರ್ಸ್ ನಡೆಸುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಬಾಲಕಿಯರ, ಬಾಲಕರ ಪ್ರೌಢಶಾಲೆ ಮತ್ತು ಪಿಯುಸಿ ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದರು.

ಸಭೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಬಿ.ಎಂ. ರೆಣುಕಯ್ಯ, ಖಜಾಂಚಿ ಜಿ.ಶಿವಪ್ಪ, ಎಂ.ಶಿವರುದ್ರಪ್ಪಗೌಡ, ಬಿ.ಚನ್ನಬಸಪ್ಪ, ಓಂಕಾರಪ್ಪ, ಆರ್‌.ಎಸ್‌. ರುದ್ರಪ್ಪ, ಎಂ.ಎಚ್‌. ಕುಮಾರ್‌, ಎಸ್‌.ಆರ್‌. ಬಸವರಾಜಪ್ಪ, ಸಿ.ಜಿ. ಮರುಳಸಿದ್ದಪ್ಪ, ಸರ್ಕಾರಿ ಬಾಲಕಿಯರ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮಾ, ಬಾಲಕರ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕರಿಬಸಪ್ಪ, ಸದಸ್ಯರು, ಪ್ರಾಂಶುಪಾಲ ಭೀಮಕುಮಾರ, ಉಪಪ್ರಾಚಾರ್ಯ ಗಿರಿಜಮ್ಮ, ಮುಖ್ಯೋಪಾದ್ಯಾಯ ಸಿದ್ದೇಶಪ್ಪ ಮತ್ತಿತರರಿದ್ದರು.