ಚಿಕ್ಕಮಕ್ಕಳಿಗಾಗಿ ಶಿಶುವಿಹಾರ ಕ್ರೀಡಾಂಗಣ ಉದ್ಘಾಟನೆ

| Published : Feb 01 2024, 02:00 AM IST

ಸಾರಾಂಶ

ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಚಿಕ್ಕಮಕ್ಕಳಿಗಾಗಿ ಶಿಶುವಿಹಾರ ಕ್ರೀಡಾಂಗಣ ಹಾಗೂ ಕ್ರೀಡೋಪಕರಣಗಳ ಉದ್ಘಾಟನೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಮಹೇಶ ಶಹಾ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಚಿಕ್ಕಮಕ್ಕಳಿಗಾಗಿ ಶಿಶುವಿಹಾರ ಕ್ರೀಡಾಂಗಣ ಹಾಗೂ ಕ್ರೀಡೋಪಕರಣಗಳ ಉದ್ಘಾಟನೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಮಹೇಶ ಶಹಾ ನೆರವೇರಿಸಿದರು.

ಮಹೇಶ ಡಿ.ಶಹಾ ಉದ್ಘಾಟಿಸಿ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರಬೇಕಾದರೇ ಮಕ್ಕಳು ಅಧ್ಯಯನದ ಜೊತೆಗೆ ವಿವಿಧ ಆಟಗಳಲ್ಲಿ ಭಾಗವಹಿಸಿದಾಗ ಕಲಿಕೆ ಫಲಪ್ರದವಾಗುತ್ತದೆ. ಅದಕ್ಕಾಗಿ ಶಿಶುವಿಹಾರದ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಮಾತನಾಡಿ, ಈ ಶಿಶು ವಿಹಾರದ ಕ್ರೀಡಾಂಗಣವು ಮಕ್ಕಳ ಕಲಿಕೆಗೆ ಉತ್ತೇಜನಕಾರಿಯಾಗಿದ್ದು, ಮಕ್ಕಳ ಸಂತಸ ಭರಿತರಾಗಿ ಕಲಿಯಲು ಅನುಕೂಲವಾಗುತ್ತದೆ ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಸಿ.ಆರ್.ಶಹಾ, ನಿರಂಜನ್ ಶಹಾ, ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್, ಫುಲಚಂದ ಕಸ್ತೂರಚಂದ ದೋಶಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲೆ ಪರವೀನ ಜಮಾದಾರ್, ಶಾಲಾ ವಿಭಾಗದ ಪ್ರಾಂಶುಪಾಲ ಪ್ರಕಾಶ್ ಪಾಟೀಲ್, ಎಲ್ಲ ಸಿಬ್ಬಂದಿ ವರ್ಗದವರು ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್‌ ಗೈಡ್ಸ್, ಕಬ್ಸ್, ಬುಲ್ ಬುಲ್ ವಿಭಾಗದ ಮಕ್ಕಳು ಹಾಗೂ ಪಾಲಕರು ಭಾಗವಹಿಸಿದ್ದರು.