ಮೂರು ಕಾವೇರಿಯ ಸರ್ವ ಧರ್ಮ ಸಂಗಮದಲ್ಲಿ ನೂತನ ನರ್ಸರಿ, ಆರೋಗ್ಯ ಕೇಂದ್ರ ಉದ್ಘಾಟನೆ

| Published : Dec 17 2024, 01:02 AM IST

ಮೂರು ಕಾವೇರಿಯ ಸರ್ವ ಧರ್ಮ ಸಂಗಮದಲ್ಲಿ ನೂತನ ನರ್ಸರಿ, ಆರೋಗ್ಯ ಕೇಂದ್ರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ಕಾವೇರಿಯ ಸರ್ವ ಧರ್ಮ ಸಂಗಮದಲ್ಲಿ ನೂತನ ವಾಗಿ ಆರಂಭಗೊಂಡ ನರ್ಸರಿ ಹಾಗೂ ಆರೋಗ್ಯ ಕೇಂದ್ರವನ್ನು ಕಿನ್ನಿಗೋಳಿಯ ಚರ್ಚ್ ನ ಧರ್ಮಗುರು ರೆ. ಫಾ. ಜೊಕಿಮ್ ಫೆರ್ನಾಂಡಿಸ್ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಮಾದಕ ದ್ರವ್ಯಗಳಿಂದ ಮುಕ್ತರಾಗಲು ಪ್ರಯತ್ನಿಸುವ ಯುವಕರಿಗೆ ದಿನವಿಡೀ ಕೆಲಸದಲ್ಲಿ ತೊಡಗಿಸುವಂತೆ ಹಾಗೂ ಪ್ರಾಕೃತಿಕ ಸೊಬಗನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸುವಂತೆ ಮೂರು ಕಾವೇರಿಯ ಸರ್ವ ಧರ್ಮ ಸಂಗಮದಲ್ಲಿ ನೂತನ ನರ್ಸರಿ ಹಾಗೂ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಕಿನ್ನಿಗೋಳಿಯ ಚರ್ಚ್ ನ ಧರ್ಮಗುರು ರೆ. ಫಾ. ಜೊಕಿಮ್ ಫೆರ್ನಾಂಡಿಸ್ ಹೇಳಿದರು.

ಮೂರು ಕಾವೇರಿಯ ಸರ್ವ ಧರ್ಮ ಸಂಗಮದಲ್ಲಿ ನೂತನ ವಾಗಿ ಆರಂಭಗೊಂಡ ನರ್ಸರಿ ಹಾಗೂ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲಾ ಮಹಿಳಾ ಕಾಂಗ್ರೆಸಿನ ಅಧ್ಯಕ್ಷೆ ಶಾಲೆಟ್ ಪಿಂಟೊರವರು ಎಬಿಸಿಡಿ ಎಂಬ ಆರೋಗ್ಯಕ್ಕೆ ಸಂಬಂಧ ಪಟ್ಟ ನಾಲ್ಕು ಆಯಾಮಗಳನ್ನು ಉದ್ಘಾಟಿಸಿದರು. ಕೇಂದ್ರದ ಪ್ರಧಾನ ಟ್ರಸ್ಟಿ ಹೇಮಾಚಾರ್ಯ ಮಾತನಾಡಿ, ರೋಗಿಗಳನ್ನು ಆದಷ್ಟು ಬೇಗ ಆಸ್ಪತ್ರೆಗೆ ಕೊಂಡೊಯುವಲ್ಲಿ ಸಹಕಾರಿಯಾಗಲು ಅಂಬುಲೆನ್ಸ್ ಗಳ ನೆಟ್‌ವರ್ಕ್, ರಕ್ತ ಮತ್ತು ಪ್ರೈಟ್''''''''ಲೇಟ್ ಸಂಗ್ರಹ ವಿಧಾನ, ರೋಗಿಗಳ ಜೊತೆ ಆಸ್ಪತ್ರೆಯಲ್ಲಿ ನಿಲ್ಲುವವರ ತಂಡಗಳ ನಿರ್ಮಾಣದ ಬಗ್ಗೆ ಯೋಚಿಸಲಾಗಿದೆ ಎಂದು ತಿಳಿಸಿದರು. ಸಂಸ್ಥೆಯ ಟ್ರಸ್ಟಿ ಡಬ್ಯ್ಲೂ ಎಚ್‌ ಒ ದ ನಿವೃತ್ತ ಅಧಿಕಾರಿ ಡಾ. ಡೆರಿಕ್ ಲೋಬೊ, ಸಂಸ್ಥೆಯ ಪ್ರಬಂಧಕ ಡಾಸ್ಮಂಡ್ ಮಿನೆಜಸ್, ಟ್ರಸ್ಟಿ ಹಾಗೂ ಕೌನ್ಸಿಲರ್ ಇನಾ ಮಸ್ಕರೇನ್ಹಸ್, ಕೆನ್ಯೂಟ್ ಆಶಾ ಮಥಾಯಸ್, ಗೋವಾದ ಕೈರಾ ವಾಸ್, ಇಂಗ್ಲೆಂಡಿನ ಸಾನ್ನಿ ಕಾಸ್ತೆಲಿನೊ ಮತ್ತಿತರರಿದ್ದರು.