ಸಾರಾಂಶ
- ಶ್ರೀ ಶೃಂಗೇರಿ ಜಗದ್ಗುರು ಷ್ಕೀ ವಿಧುಶೇಖರ ಭಾರತಿ ಸ್ವಾವೀಜಿಯಿಂದ 20 ರಂದು ಮಹಾ ಕುಂಭಾಭಿಷೇಕ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಗಣೇಶ, ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಆದಿಶಂಕರರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಮುಖಮಂಟಪ, ವಿಶಾಲವಾದ ಪ್ರಾಕಾರ ಹಾಗೂ ಮೂರು ವಿಮಾನ ಗೋಪುರಗಳ ಮಹಾ ಕುಂಭಾಬಿಷೇಕವನ್ನು ಮಾ.20 ರಂದು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪೂರ್ಣಾನುಗ್ರಹದಿಂದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ನೆರವೇರಿಸಲಿದ್ದಾರೆ.
ನೂತನವಾಗಿ ನಿರ್ಮಾಣವಾಗಿರುವ ವಿಶಾಲ ಮುಖಮಂಟಪ, ದೇವಸ್ಥಾನದ ಪ್ರಾಂಗಣ, ಮೂರು ವಿಮಾನ ಗೋಪುರಗಳು ಸೂಕ್ಷ್ಮವಾದ ಕುಸುರಿ ಕೆಲಸಗಳಿಂದ ಕೂಡಿದ್ದು ಅತ್ಯಾಕರ್ಷಣೀಯವಾಗಿದೆ. ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣ ಮತ್ತು ತಾಲೂಕು ಜಿಲ್ಲೆಯಲ್ಲೇ ಬಹಳ ಅನಾದಿ ಕಾಲದಿಂದಲೂ ಶ್ರೀ ಶೃಂಗೇರಿ ಮಹಾ ಸಂಸ್ಥಾನ ಆಪಾರ ಸಂಖ್ಯೆಯ ಭಕ್ತರು ಮತ್ತು ಶಿಷ್ಯ ಸಮೂಹ ಹೊಂದಿದ ಪ್ರಮುಖ ಕ್ಷೇತ್ರ. ಶ್ರೀ ಶೃಂಗೇರಿ ಮಠಕ್ಕೂ ತರೀಕೆರೆ ಭಕ್ತ ಜನತೆಗೂ ನಡುವೆ ಬಹು ಅಪ್ಯಾಯಮಾನ ಮತ್ತು ಅವಿನಾಭಾವ ಸಂಭಂದವೂ ಇದೆ. ಶ್ರೀ ಮಠದ ಜಗದ್ಗುರು ಭಕ್ತಜನತೆಯನ್ನು ಆನುಗ್ರಹಿಸಿ ಆಶೀರ್ವದಿಸುವ ಭವ್ಯ ಇತಿಹಾಸ ಹೊಂದಿದೆ. ಧರ್ಮ ಶಾಸ್ತ್ರ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಸಾಮಾಜಿಕ ರೀತಿ ನೀತಿಗಳು, ಪೂಜೆ ಪುನಸ್ಕಾರ ಹಾಗೂ ಅನೇಕ ಧರ್ಮ ಜಿಜ್ಞಾಸೆಗಳಿಗೆ ಕಾಲದಿಂದ ಕಾಲಕ್ಕೆ ಶ್ರೀ ಶೃಂಗೇರಿ ಶ್ರೀಗಳು ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾಬದಿದ್ದಾರೆ.ಧಾರ್ಮಿಕ ಕ್ಷೇತ್ರ:ಸುಮಾರು 45 ವರ್ಷಗಳ ಮೊದಲು ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ದುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿ, ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರೊಡನೆ ತರೀಕೆರೆ ಪಟ್ಚಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಹಾಸ್ವಾಮಿಗಳ ಸಂಕಲ್ಪದಂತೆ ಇದೇ ಸ್ಥಳದಲ್ಲಿ ಶ್ರೀ ಶೃಂಗೇರಿ ಶಾರದಾ ಸಭಾಭವನ ನಿರ್ಮಾಣ ಮಾಡಿಸಿ, ಶ್ರೀಗಳ ಸನ್ನಿಧಾನದಲ್ಲೆ ಶ್ರೀ ಭಾರತೀ ತೀರ್ಥ ಸ್ವಾಮಿಗಳ ಅಮೃತಹಸ್ತದಿಂದ 1988ರಲ್ಲಿ ಉದ್ಘಾಟನೆ ನೆರವೇರಿಸಿದ್ದರು. ನಂತರ 1990ರಲ್ಲಿ ಈ ದೇವಸ್ಥಾನವನ್ನು ಶ್ರೀ ಮಠದ ಧರ್ಮಾಧಿಕಾರಿ ಕೀರ್ತಿ ಶೇಷರಾದ ಕೆ.ರಾಮ ಐಯ್ಯರ್ ಮತ್ತು ಸಹೋದರರು ಅವರ ಮಾತೃಶ್ರೀ ಲಕ್ಷ್ಮಮ್ಮ ಮತ್ತು ಕೃಷ್ಣ ಐಯ್ಯರ್ ಸ್ಮರಣಾರ್ಥ ಸಮರ್ಪಿಸಿದ್ದಾರೆ. ಶ್ರೀ ಗಣೇಶ, ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಆದಿಶಂಕರರ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿ ಕುಂಭಾಬಿಷೇಕ ನೆರವೇರಿಸಿದ್ದರು.ದೇವಸ್ಥಾನಕ್ಕೆ ವಿಶಾಲ ಪ್ರಾಕಾರ, ಮೂರು ವಿಮಾನಗೋಪುರ, ಮುಖ್ಯದ್ವಾರಗಳನ್ನು ನಿರ್ಮಾಣ ಮಾಡುವುದೆಂದು ಶ್ರೀ ಶೃಂಗೇರಿ ಮಹಾಪೀಠದ ಉಭಯ ಶ್ರೀಗಳವರಲ್ಲಿ ಅರಿಕೆ ಮಾಡಿದಾಗ ಶ್ರೀಗಳು ಸಂತೋಷದಿಂದ ಸಮ್ಮತಿಸಿ ಅನುಗ್ರಹಿಸಿದ್ದು ಅಪರೂಪದ ಸಂದರ್ಭ. ಇದೀಗ ಈ ನೂತನ ಮುಖಮಂಟಪ, ದೇವಸ್ಥಾನದ ಪ್ರಾಂಗಣ, ಮೂರು ವಿಮಾನ ಗೋಪುರಗಳು ಮತ್ತು ಮಹಾ ಕುಂಭಾಭಿಷೇಕಕ್ಕೆ ತರೀಕೆರೆ ಪಟ್ಟಣ ಸಕಲ ರೀತಿಯಲ್ಲಿ ಸಜ್ಜಾಗಿದೆ.
ತರೀಕೆರೆ ಪಟ್ಟಣದ ಶ್ರೀ ಗಣೇಶ, ಶ್ರೀ ಶಾರದಾಂಬೆ ಮತ್ತು ಶ್ರೀ ಆದಿಶಂಕರ ದೇವಸ್ಥಾನ ಜಾಗದಲ್ಲಿ ಮುಖಮಂಟಪ, ಮುಖ್ಯದ್ವಾರ ಬಹಳ ಚೆನ್ನಾಗಿ ಮೂಡಿಬಂದಿರುವುದು ಸಂತೋಷ ತಂದಿದೆ ಎಂದು ಹಿರಿಯರಾದ ಡಿ.ಶಂಕರನಾರಾಯಣ ಹೇಳಿದ್ದಾರೆ.- ಕೋಟ್ಃ --
ತರೀಕೆರೆ ಶ್ರೀ ಶೃಂಗೇರಿ ಶಂಕರಮಠದ ಶ್ರೀ ಗಣೇಶ, ಶ್ರೀಶಾರದಾಪರಮೇಶ್ವರಿ ಮತ್ತು ಶ್ರೀ ಆದಿಶಂಕರರ ದೇವಸ್ಥಾನ, ಶ್ರೀ ಶಾರದ ಸಭಾ ಭವನದ ಒಳಭಾಗದಲ್ಲಿತ್ತು, ಇದನ್ನು ಮನಗಂಡ ಶ್ರೀಗಳವರು ದೇವಸ್ಥಾನಕ್ಕೆ ವಿಶಾಲವಾದ ಅಚ್ಚುಕಟ್ಟಾದ ಪ್ರಾಂಗಣ ಮತ್ತು ಮುಖ್ಯದ್ವಾರ ನಿರ್ಮಾಣ ಮಾಡಲು ಅನುಗ್ರಹಿಸಿರುವುದು ಸಂತೋಷ ತಂದಿದೆ.ಎನ್.ಮಂಜುನಾಥ್, ಮಾಜಿ ಅಧ್ಯಕ್ಷ, ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ-- ಕೋಟ್ಃ ---
ಶ್ರೀ ಶೃಂಗೇರಿ ಮಠದ ಶಾಖೆ ತರೀಕೆರೆ ಪಟ್ಟಣ ಮತ್ತು ತಾಲೂಕಿನ ಮಹಾ ಜನತೆ ಜೊತೆ ಜೊತೆಗೆ ಬೆಳೆದು ಬಂದು ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನೂತನವಾಗಿ ನಿರ್ಮಾಣವಾದ ವಿಶಾಲವಾದ ಮುಖಮಂಟಪ, ವಿಮಾನಗೋಪುರಗಳು ಶ್ರೀ ಮಠದ ಧಾರ್ಮಿಕ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.ಎ.ವಿ.ನಾಗಭೂಷಣ್, ಕಾರ್ಯಾಧ್ಯಕ್ಷ, ಅಂಚೆ ಪ್ರತಿಷ್ಠಾನ
18ಕೆಟಿಆರ್.ಕೆ.1ಃತರೀಕೆರೆ ಶ್ರೀ ಶಂಕರ ಮಠದ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣೇಶ, ಶ್ರೀಶಾರದಾ ಅಮ್ಮನವರ ದೇವಸ್ಥಾನ