ಸಾರಾಂಶ
ಪತ್ರಕರ್ತರು ಬರೆಯುವ ಎಲ್ಲ ಸುದ್ದಿಗಳು ವಸ್ತುನಿಷ್ಠವಾಗಿ ವಾಸ್ತವವಾಗಿ ಇರಬೇಕು ಎಂದು ಸ್ವಾಮಿ ಪರಹಿತಾನಂದ ಜೀ ಹೇಳಿದರು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಪತ್ರಕರ್ತರು ಬರೆಯುವ ಎಲ್ಲ ಸುದ್ದಿಗಳು ವಸ್ತುನಿಷ್ಠವಾಗಿ, ವಾಸ್ತವವಾಗಿ ಇರಬೇಕು ಎಂದು ಪೊನ್ನಂಪೇಟೆಯ ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದ ಜೀ ಹೇಳಿದರು.ಕಾನೂರು ರಸ್ತೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಪೊನ್ನಂಪೇಟೆ ತಾಲೂಕು ಘಟಕದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಹರಿತವಾದ ವಸ್ತು ಖಡ್ಗ, ಆದರೆ ಪತ್ರಕರ್ತನ ಲೇಖನಿ ಅದಕ್ಕಿಂತ ಹರಿತವಾದದ್ದು ಎಂದು ಅವರು ಹೇಳಿದರು.ಆಶ್ರಮದ ವತಿಯಿಂದ ಸಂಘದ ಕಚೇರಿಗೆ ನೀಡಲಾದ ಕಂಪ್ಯೂಟರನ್ನು ಸಂಘದ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ಅವರಿಗೆ ಹಸ್ತಾಂತರಿಸಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿದ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಇಂದು ಬಾಡಿಗೆ ಕಚೇರಿ ಹೊಂದಿ ಆರಂಭವಾದ ಸಂಘ ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದುವಂತಾಗಲಿ ಎಂದು ಹಾರೈಸಿದರು. ತಾಲೂಕು ಸಂಘದ ಕ್ಷೇಮ ನಿಧಿಗೆ 10 ಸಾವಿರ ರುಪಾಯಿ ದೇಣಿಗೆ ನೀಡಿದರು.ಕಟ್ಟಡದ ಮಾಲೀಕ ಚೆಪ್ಪುಡೀರ ಹ್ಯಾರಿ ದೇವಯ್ಯ, ಗೌರವ ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿದರು.
ದಾನಿಗಳಾದ ಚೆಪ್ಪುಡೀರ ರಾಕೇಶ್ ದೇವಯ್ಯ, ಪ್ರ.ಕಾ.ವಿನೋದ್ ಮೂಡಗದ್ದೆ, ಪತ್ರಕರ್ತ ಟಿ.ಎಲ್.ಶ್ರೀನಿವಾಸ್, ಉಪಾಧ್ಯಕ್ಷ ಚಮ್ಮಟೀರ ಪ್ರವೀಣ್, ಚೆಪ್ಪುಡೀರ ರೋಷನ್, ಚಂಪಾ ಗಗನ ಮತ್ತಿತರರಿದ್ದರು.