ಏರಿಕಾಡು ಗ್ರಾಮದಲ್ಲಿ ರೈತ ಸಂಘ ಗ್ರಾಮ ಘಟಕ ಉದ್ಘಾಟನೆ

| Published : Feb 05 2024, 01:47 AM IST

ಸಾರಾಂಶ

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಗಡಿ ಗ್ರಾಮಗಳು ಅಭಿವೃದ್ಧಿಯಾಗದೆ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಗಡಿ ಗ್ರಾಮಗಳು ಅಭಿವೃದ್ಧಿಯಾಗದೆ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ತಿಳಿಸಿದರು.ಹನೂರು ಏರಿಕಾಡು ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಜನಪ್ರತಿನಿಧಿಗಳಿಗೆ ಚುನಾವಣಾ ಸಂದರ್ಭದಲ್ಲಿ ಮತ ನೀಡುವ ಬದಲು ಅಭಿವೃದ್ಧಿ ಮಾಡುವ ನಾಯಕರಿಗೆ ಸ್ಪಂದಿಸಬೇಕು ಎಂದರು. ಗ್ರಾಮಗಳು ಅಭಿವೃದ್ಧಿಯಾಗದೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ವಿದ್ಯಾವಂತರು ಇರುವ ಗ್ರಾಮಗಳಲ್ಲಿ ರೈತರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ಭಾಗ್ಯಗಳನ್ನು ನೀಡುವ ಬದಲು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಕೆಲಸವಾಗಬೇಕಿದೆ ಎಂದರು.

ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಈ ಭಾಗದಲ್ಲಿ ರಸ್ತೆಗಳು ಸರಿ ಇಲ್ಲ. ಹೀಗಾಗಿ ಸಾರಿಗೆ ವಾಹನಗಳು ಸಹ ಬರುವುದಿಲ್ಲ. ಜೊತೆಗೆ ಆರೋಗ್ಯ ಸಮಸ್ಯೆಗಳಿಗೂ ಸಹ ಕಿಮೀ ಗಟ್ಟಲೆ ಜನತೆ ಹೋಗಿ ಬರಬೇಕಾಗಿದೆ ಎಂದರು. ರೈತರಿಗೆ ಹಾಲಿನ ಡೈರಿ ಮತ್ತು ಕಡು ಬಡವರೇ ಹೆಚ್ಚಾಗಿರುವ ಈ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ಒಂದನ್ನು ತೆರೆದು ಜನಪ್ರತಿನಿಧಿ ಅಧಿಕಾರಿಗಳು ಈ ಭಾಗದಲ್ಲಿ ಬಂದು ಜನರಿಗೆ ಸ್ಪಂದಿಸದ ಕಾರಣ ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಸರ್ಕಾರದ ಹಾಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಾಗಿದೆ. ವ್ಯಾಪ್ತಿಯಲ್ಲಿ ಬರುವ ಮೂಲಭೂತ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಅಧಿಕಾರಿಗಳಿಗೆ ನೀಡಬೇಕಾಗಿದೆ ಎಂದರು.ಇದೇ ವೇಳೆಯಲ್ಲಿ ಶಿವಮಲ್ಲು, ರಾಜಣ್ಣ, ಅರ್ಪಿತರಾಜು, ಪುಟ್ಟಣ್ಣ, ನಾಗರಾಜ್, ಜೋಸೆಫ್, ರಾಜು ಏರಿಕಾಡು ಗ್ರಾಮ ಘಟಕ ಅಧ್ಯಕ್ಷ ಡೇವಿಡ್ ಅಂತೋನಿ, ಉಪಾಧ್ಯಕ್ಷ ಮರಿಯ ಜೋಸೆಫ್, ಕಾರ್ಯದರ್ಶಿ ಅರುಣ್ ಕುಮಾರ್, ಗೌರವಾಧ್ಯಕ್ಷ ದ್ರಾವಿಡ್ ಇನ್ನಿತರರು ಇದ್ದರು.