ಶ್ರೀರಾಮ, ಲಕ್ಷ್ಮಣ, ಸೀತಾ ವೇಷ ಧರಿಸಿ ಮಕ್ಕಳಿಂದ ಮನೆ-ಮನೆಗೆ ಮಂತ್ರಾಕ್ಷತೆ

| Published : Jan 13 2024, 01:30 AM IST

ಶ್ರೀರಾಮ, ಲಕ್ಷ್ಮಣ, ಸೀತಾ ವೇಷ ಧರಿಸಿ ಮಕ್ಕಳಿಂದ ಮನೆ-ಮನೆಗೆ ಮಂತ್ರಾಕ್ಷತೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನವಾಗಿ ಕಳುಹಿಸಿಕೊಟ್ಟಿರುವ ಶ್ರೀರಾಮನ ಚಿತ್ರಪಟ, ಆಮಂತ್ರಣ ಪತ್ರಿಕೆ ಹಾಗೂ ಮಂತ್ರಾಕ್ಷತೆಯನ್ನು ಮನೆ-ಮನೆಗೆ ಮುಟ್ಟಿಸಲಾಯಿತು.

ಮುಂಡಗೋಡ:

ಪ್ರಭು ಶ್ರೀರಾಮ, ಲಕ್ಷ್ಮಣ, ಸೀತಾ ಮತ್ತು ಹನುಮ ವೇಷ ಧರಿಸಿದ ಮಕ್ಕಳನ್ನು ತೆರೆದಿಟ್ಟ ವಾಹನದಲ್ಲಿ ಶ್ರೀರಾಮನ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಮಂತ್ರಾಕ್ಷತೆಯನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ರಮ ಶುಕ್ರವಾರ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯಿತು.ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನವಾಗಿ ಕಳುಹಿಸಿಕೊಟ್ಟಿರುವ ಶ್ರೀರಾಮನ ಚಿತ್ರಪಟ, ಆಮಂತ್ರಣ ಪತ್ರಿಕೆ ಹಾಗೂ ಮಂತ್ರಾಕ್ಷತೆಯನ್ನು ಶುಕ್ರವಾರ ಬೆಳಗ್ಗೆ ಗ್ರಾಮದ ಹಿರಿಯರು, ಯುವಕರು, ಮಡಿವಂತಿಕೆಯಿಂದ ಮಂತ್ರಾಕ್ಷತೆಯನ್ನು ಮನೆ-ಮನೆಗೆ ಮುಟ್ಟಿಸುವ ಕಾರ್ಯ ಮಾಡಿದರು.ಮಕ್ಕಳ ವಿವಿಧ ವೇಷ ಧರಿಸಿ ಗಮನ ಸೆಳೆದರೆ ಮತ್ತೊಂದೆಡೆ ಬಿಳಿ ಅಂಗಿ, ಬಿಳಿ ಪಂಚೆ ಮತ್ತು ಕೇಸರಿ ಶಲ್ಯೆಯಲ್ಲಿ ರಾಮಘೋಷ ಕೂಗುತ್ತ ಬರುವ ಭಕ್ತರನ್ನು ರಸ್ತೆಯಲ್ಲಿ ಹಾಕಿರುವ ಬಣ್ಣ ಬಣ್ಣದ ರಂಗೋಲಿ ಸ್ವಾಗತಿಸಿತು. ಮಹಿಳೆಯರು ಶ್ರೀರಾಮನ ಭಾವಚಿತ್ರಕ್ಕೆ ಭಕ್ತಿಯಿಂದ ನಮಸ್ಕರಿಸಿದರು.ಇದೇ ವೇಳೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ವೇಳೆ ಗ್ರಾಮದಲ್ಲಿಯೂ ಸಹ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶ್ರೀರಾಮ ಜಪತಪ ಹಾಗೂ ಪೂಜಾ ಕೈಂಕರ್ಯ ಕೈಗೊಳ್ಳಲಾಗುವುದು ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುವುದು ಎಂದು ಶ್ರೀರಾಮ ಭಕ್ತ ಮಂಡಳಿಯ ಹನುಮಂತ ವಾಲ್ಮೀಕಿ, ಕಿರಣ ಜೋತೆಪ್ಪನವರ ಹಾಗೂ ಮಹೇಶ ಕೋಣನಕೇರಿ ತಿಳಿಸಿದರು.ಈ ವೇಳೆ ಗ್ರಾಮದ ಹಿರಿಯರಾದ ವೈ.ಪಿ. ಪಾಟೀಲ್, ಪಿ.ಜಿ. ಪಾಟೀಲ್, ಅರ್ಜುನ ಶಿಗನಳ್ಳಿ, ಪೀರಣ್ಣ ನ್ಯಾಸರ್ಗಿ, ಪರಶುರಾಮ ತಹಶೀಲ್ದಾರ, ವೈ.ಪಿ. ಭುಜಂಗಿ, ಫಕೀರಪ್ಪ ಕೋಣನಕೇರಿ, ಗೋಪಾಲ ಪಾಟೀಲ್, ಶೇಖಣ್ಣ ಗರಗದ, ಪರಶುರಾಮ ಕುರಿಯವರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಯುವಕರು ಭಾಗಿಯಾಗಿದ್ದರು.