ಸಂತೆಕಟ್ಟೆ ಮೌಂಟ್‌ ರೋಸರಿ ಆಂಗ್ಲ ಮಾಧ್ಯಮ ಶಾಲಾ ಸಂಸತ್ತು ಉದ್ಘಾಟನೆ

| Published : Jun 17 2024, 01:35 AM IST

ಸಂತೆಕಟ್ಟೆ ಮೌಂಟ್‌ ರೋಸರಿ ಆಂಗ್ಲ ಮಾಧ್ಯಮ ಶಾಲಾ ಸಂಸತ್ತು ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಾಲಾ ಸಂಸತ್ತು ಉದ್ಘಾಟನೆಗೊಂಡಿತು. ಕೆಎಂಸಿ ಮಣಿಪಾಲ ಇಲ್ಲಿನ ದಂತ ವೈದ್ಯೆ ಹಾಗೂ ಶಾಲೆಯ ಹಳೇ ವಿದ್ಯಾರ್ಥಿನಿ ಡಾ.ದಿಶಾ ಕರ್ಕೆರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಎಲ್ಲರನ್ನು ಒಟ್ಟುಗೂಡಿಸಿ ಸಮಾನ ಉದ್ದೇಶಕ್ಕಾಗಿ ಅವಿರತ ಶ್ರಮಿಸುವುದೇ ಉತ್ತಮ ನಾಯಕನ ಲಕ್ಷಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಾಯಕತ್ವ ಗುಣಗಳೊಂದಿಗೆ ಬೆಳೆಯಲು ಶಾಲಾ ಸಂಸತ್ತು ಉತ್ತಮ ವೇದಿಕೆಯಾಗಿದೆ ಎಂದು ಕೆಎಂಸಿ ಮಣಿಪಾಲ ಇಲ್ಲಿನ ದಂತ ವೈದ್ಯೆ ಹಾಗೂ ಶಾಲೆಯ ಹಳೇ ವಿದ್ಯಾರ್ಥಿನಿ ಡಾ.ದಿಶಾ ಕರ್ಕೆರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಇಲ್ಲಿನ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿದರು.

ಶಾಲಾ ಸಂಚಾಲಕ ಫಾ.ಡಾ.ರೋಕ್ ಡಿಸೋಜ ಅವರು ಶಾಲಾ ನಾಯಕಿ ಅಕ್ಷತಾ ಉಪನಾಯಕ ನೀಲ್ ಡಿಸೋಜ ಇವರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಸ್ವೀಕರಿಸಿದ ಹುದ್ದೆಗೆ ಚ್ಯುತಿ ಬಾರದಂತೆ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿ ನಾಯಕರಾಗಿ ಬೆಳೆಯಬೇಕೆಂದು ಕರೆ ಕೊಟ್ಟರು.

ಅಕ್ಷತಾಳ ಸಚಿವ ಸಂಪುಟದ 32 ಮಂತ್ರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಪ್ರತಿಜ್ಞಾ ವಿಧಿಭೋದಿಸಿ ಶುಭ ಹಾರೈಸಿದರು.

ಈ ಶೈಕಣಿಕ ವರ್ಷದಲ್ಲಿ ವಿವಿಧ ಪಠ್ಯೇತರ ಚಟುವಟಿಕೆಗಳು, ವಿವಿಧ ಕ್ಲಬ್ಸ್‌ಗಳಿಗೆ ಚಿಟ್ಟೆಯ ಚಿತ್ತಾರ ಬಿಡಿಸಿ ಚಾಲನೆ ನೀಡಲಾಯಿತು. ಶಾಲಾ ಸಂಸತ್ತಿನ ನಿರ್ದೆಶಕಿ ಶಿಕ್ಷಕಿ ನ್ಯಾನ್ಸಿ ಡಿಸೋಜ, ಮುಖ್ಯ ಅತಿಥಿ ಡಾ| ದಿಶಾ ಇವರ ಮಾತೃಶ್ರೀ ರೂಪ ಕರ್ಕೆರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನಾಯಕತ್ವ ಸಂದೇಶ ನೀಡುವ ಪ್ರಹಸನ ಮತ್ತು ನೃತ್ಯಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ಸ್ವೆನ್ ಮತ್ತು ವರ್ಷ ನಿರೂಪಿಸಿದರು. ಪೂಜಾ ಸ್ವಾಗತಿಸಿದರು. ಪ್ರಥ್ವಿರಾಜ್ ವಂದಿಸಿದರು.