ಸಾರಾಂಶ
ಬಡ ರೋಗಿಗಳ ಹಾಗೂ ಆರ್ಥಿಕವಾಗಿ ಅಶಕ್ತರಾಗಿರುವ ಎಲ್ಲಾ ವರ್ಗದ ಜನರಿಗಾಗಿ ಆರಂಭಿಸಿರುವ ಆಸ್ಪತ್ರೆ ನಾಲ್ಕು ಮಹಡಿಗಳನ್ನು ಹೊಂದಿದ್ದು, ತುರ್ತು ಚಿಕಿತ್ಸೆಯಿಂದ ಹಿಡಿದು, ಎಲ್ಲಾ ರೀತಿಯ ಸ್ಪೆಷಾಲಿಟಿ ಸೇವೆಗಳನ್ನು ಒಳಗೊಂಡಿದೆ.
ಸಾರ್ವಜನಿಕರ ಸೇವೆಗೆ ಸಿದ್ಧಗೊಂಡ ಆಸ್ಪತ್ರೆ । ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟನೆ
ಕನ್ನಡಪ್ರಭ ವಾರ್ತೆ ತುಮಕೂರುಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಅಧೀನದಲ್ಲಿ ಪ್ರಾರಂಭಿಸಿರುವ ನೂತನ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.ಬಡ ರೋಗಿಗಳ ಹಾಗೂ ಆರ್ಥಿಕವಾಗಿ ಅಶಕ್ತರಾಗಿರುವ ಎಲ್ಲಾ ವರ್ಗದ ಜನರಿಗಾಗಿ ಆರಂಭಿಸಿರುವ ಆಸ್ಪತ್ರೆ ನಾಲ್ಕು ಮಹಡಿಗಳನ್ನು ಹೊಂದಿದ್ದು, ತುರ್ತು ಚಿಕಿತ್ಸೆಯಿಂದ ಹಿಡಿದು, ಎಲ್ಲಾ ರೀತಿಯ ಸ್ಪೆಷಾಲಿಟಿ ಸೇವೆಗಳನ್ನು ಒಳಗೊಂಡಿದೆ.ವೈದ್ಯರ ಸಂದರ್ಶನಕ್ಕಾಗಿ ವಿಶಾಲವಾದ ಒಪಿಡಿ ವ್ಯವಸ್ಥೆ ಕಲ್ಪಿಸಲಾಗಿದ್ದು, ರೋಗಿಗಳ ಅನುಕೂಲಕ್ಕೆ ತಕ್ಕಂತೆ ವಿಶಾಲ ಮಹಿಳಾ ಹಾಗೂ ಪುರುಷರ ವಾರ್ಡ್ ಗಳನ್ನು ಒಳಗೊಂಡಿದೆ, ಸ್ಪೆಷಾಲಿಟಿ ವಿಭಾಗಕ್ಕೆ ಸಂಬಂಧಿಸಿದ ಆಪರೇಷನ್ ಥಿಯೇಟರ್ ಗಳನ್ನು ಒಳಗೊಂಡಿದೆ. ರಕ್ತನಿಧಿ ಕೇಂದ್ರ, ಪ್ರಯೋಗಾಲಯ ಹಾಗೂ ಫಾರ‍್ಮಸಿ ಒಳಗೊಂಡಿದ್ದು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.ನೂತನ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ, ಸಂಸದ ಜಿ ಎಸ್ ಬಸವರಾಜು, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್, ಮೆಡಿಕಲ್ ಕಾಲೇಜು ಪ್ರಾಚಾರ್ಯೆ ಡಾ.ಶಾಲಿನಿ,ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್, ಬಿಜೆಪಿ ಮುಖಂಡ ಸೊಗಡು ಶಿವಣ್ಣ, ಎಸ್ಪಿ ಅಶೋಕ್ ಕುಮಾರ್, ಕೇಂದ್ರವಲಯ ಐಜಿಪಿ ರವಿಕಾಂತೇಗೌಡ ಸೇರಿದಂತೆ ಆಸ್ಪತ್ರೆ ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು