ಸಾರಾಂಶ
ವಿದ್ಯಾರ್ಥಿಗಳಿಗೆ ಸಂಘದ ಚಟುವಟಿಕೆಗಳ ಬಗ್ಗೆ, ನಿತ್ಯ ಜೀವನದಲ್ಲಿ ವಿಜ್ಞಾನ ಕಲಿಕೆ, ಪಾಠಗಳನ್ನು ಕಲಿಯುವ ಬಗ್ಗೆ ವಿಜ್ಞಾನ ಅರಿವ
ಮೈಸೂರು
ದೀಪಾನಗರದ ದೀಪಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸಂಘವನ್ನು ಮೈಸೂರು ಸೈನ್ಸ್ ಫೌಂಡೇಶನ್ ನ ನಿರ್ದೇಶಕಿ ಮಂಜುಳ ಎಚ್. ಶಾಸ್ತ್ರಿ ಉದ್ಘಾಟಿಸಿದರು.ನಂತರ ಅವರು, ವಿದ್ಯಾರ್ಥಿಗಳಿಗೆ ಸಂಘದ ಚಟುವಟಿಕೆಗಳ ಬಗ್ಗೆ, ನಿತ್ಯ ಜೀವನದಲ್ಲಿ ವಿಜ್ಞಾನ ಕಲಿಕೆ, ಪಾಠಗಳನ್ನು ಕಲಿಯುವ ಬಗ್ಗೆ ವಿಜ್ಞಾನ ಅರಿವನ್ನು ಹೆಚ್ಚಿಸುಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಅಧ್ಯಕ್ಷ ಎಂ. ರಾಮಪ್ಪ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸ್ವಚ್ಛತೆಗೆ ಆದ್ಯತೆ ನೀಡಿ ಶಿಕ್ಷಣ ಮತ್ತು ಆರೋಗ್ಯ ಎರಡನ್ನೂ ವೃದ್ದಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ದೀಪಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಣಿತ ಎರ್ಮಾಳ್, ದೀಪಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಿಲ್ಪ ಜಗದೀಶ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಾಬು ಮತ್ತು ಶಿಕ್ಷಕರು ಇದ್ದರು.