ಸಾರಾಂಶ
ಗೋಕಾಕ ರವಿವಾರ ಪೇಟೆಯ ರಾಠೋಡ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಬೋರಗಾಂವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 42ನೇ ಶಾಖೆಯನ್ನು ಗಣ್ಯರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಸಹಕಾರಿ ಸಂಸ್ಥೆಯ ಶ್ರೇಯಸ್ಸು ಸಂಸ್ಥೆಯ ಆಡಳಿತ ಮಂಡಳಿ ಒಗ್ಗಟ್ಟನ್ನು ಅವಲಂಬಿಭಿಸಿದೆ. ಬೋರಗಾಂವ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ತನ್ನ 42ನೇ ಶಾಖೆ ಇಲ್ಲಿ ಆರಂಭಿಸಿ ಗೋಕಾಕ ಮತ್ತು ಸುತ್ತಮುತ್ತಲಿನ ಜನರ ಸೇವೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ಮುಖಂಡ, ಹಿರಿಯ ಸಹಕಾರಿ ಅಶೋಕ ಪೂಜಾರಿ ಆಶಿಸಿದರು.ಇಲ್ಲಿನ ರವಿವಾರ ಪೇಟೆಯ ರಾಠೋಡ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಬೋರಗಾಂವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 42ನೇ ಶಾಖೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ನೂತನ ಸಹಕಾರಿ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತಾತ್ಯಾಸೋ ರಾಜಗೊಂಡಾ ಪಾಟೀಲ ಮಾತನಾಡಿ, ಸಹಕಾರಿ ರಂಗದಲ್ಲಿ ಹೊಂದಿರುವ ಸುದೀರ್ಘ ಅನುಭವವನ್ನು ಅಳತೆಗಿಟ್ಟು ಮಲ್ಟಿ-ಸ್ಟೇಟ್ ಅನುಮತಿ ಹೊಂದಿರುವ ನೂತನ ಶಾಖೆಯಿಂದ ಸಾರ್ವಜನಿಕರು, ಗ್ರಾಹಕರು ನೆಟ್ ಬ್ಯಾಂಕಿಂಗ್ ಸೇವೆಯಲ್ಲದೇ ವ್ಯಾಪಾರ- ವಹಿವಾಟು ಸಾಲ, ಬಂಗಾರ ಅಡಮಾನ ಸಾಲ, ನಿರವೇಶನ ಖರೀದಿಗೆ ಸಾಲ, ಮನೆ ನಿರ್ಮಾಣಕ್ಕೆ ಸಾಲ, ವಾಹನ ಖರೀದಿಗೆ ಸಾಲ ಹೀಗೆ ಇನ್ನೂ ಅನೇಕ ಬಗೆಯ ಸಾಲಸೌಲಭ್ಯ ಮತ್ತು ಠೇವುಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುತ್ತದೆ ಎಂದು ಗ್ರಾಹಕರ ಸೇವಾ ಸೌಕರ್ಯಗಳನ್ನು ವಿವರಿಸಿದರು.ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕರಾದ ಡಾ.ಸಂಜಯ ಹೊಸಮಠ ಮತ್ತು ತಮ್ಮಣ್ಣಾ ಕೆಂಚರಡ್ಡಿ, ಬೋರಗಾಂವ ಸೊಸೈಟಿ ನಿರ್ದೇಶಕರಾದ ಅಣ್ಣಾಸಾಹೇಬ ತಾವದಾರಿ, ಮಹಾದೇವ ಗುಣಕಿ, ಬಾಬಾಸಾಹೇಬ ಕರೋಲೆ, ಬಜರಂಗ ಶಿರಗುರಿ, ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರೋಹಣ ಪಾರ್ಖೇ, ಶಾಖಾ ಪ್ರಬಂಧಕ ಉದಯಕುಮಾರ ದಾನವಾಡೆ ಉಪಸ್ಥಿತರಿದ್ದರು.