ಮುಧೋಳದ ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಲೋಕಾರ್ಪಣೆ ನಾಳೆ

| Published : Nov 01 2025, 03:15 AM IST

ಮುಧೋಳದ ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಲೋಕಾರ್ಪಣೆ ನಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ ನಗರದ ಬ್ರಹ್ಮಗಡ್ಡಿ ಮಠದ ಹತ್ತಿರ (ಶಿವಾಜಿ ಸರ್ಕಲ್) ದಲ್ಲಿ ನೂತನವಾಗಿ ನಿರ್ಮಿಸಲಾದ ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದ ಉದ್ಘಾಟನೆ ನ. 2ರಂದು ಬೆಳಗ್ಗೆ 10.30ಕ್ಕೆ ನೆರವೇರಲಿದೆ.

ಮುಧೋಳ: ನಗರದ ಬ್ರಹ್ಮಗಡ್ಡಿ ಮಠದ ಹತ್ತಿರ (ಶಿವಾಜಿ ಸರ್ಕಲ್) ದಲ್ಲಿ ನೂತನವಾಗಿ ನಿರ್ಮಿಸ ಲಾದ ಹುಣಶಿಕಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದ ಉದ್ಘಾಟನೆ ನ. 2ರಂದು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ.

ಎರೆಹೊಸಹಳ್ಳಿಯ ಶ್ರೀ ವೇಮನಾನಂದ ಸ್ವಾಮೀಜಿ ಸಾನಿಧ್ಯವಹಿಸುವರು, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆ ವಹಿಸುವರು. ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ನೂತನ ಆಸ್ಪತ್ರೆಯ ಕಟ್ಟಡ ಉದ್ಘಾಟಿಸುವರು, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಮುರುಗೇಶ ನಿರಾಣಿ, ಶಾಸಕ ಪಿ.ಎಚ್.ಪೂಜಾರ ಮುಖ್ಯ ಅತಿಥಿ ಸ್ಥಾನವಹಿಸುವರು. ಬಾಗಲಕೋಟೆಯ ಖ್ಯಾತ ಚಿಕ್ಕಮಕ್ಕಳ ವೈದ್ಯ ಡಾ.

ಆರ್.ಟಿ. ಪಾಟೀಲ ಶಸ್ತ್ರಚಿಕಿತ್ಸಾ ಸಂಕೀರ್ಣ ಉದ್ಘಾಟಿಸುವರು. ಬಾಗಲಕೋಟೆ ಸೋರಗಾಂವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಎಲುವು ಕೀಲು ತಜ್ಞ ವೈದ್ಯ ಡಾ.ವಿ.ಆರ್. ಸೋರಗಾಂವಿ, ಮುಧೋಳ ಐ.ಎಂ.ಎ ಅಧ್ಯಕ್ಷ ಡಾ.ಕೆ.ಎಲ್.ಉದಪುಡಿ, ಮುಧೋಳ ಆರ್.ಎಮ್.ಜಿ ಪ.ಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ.ಪಿ.ಹುಣಶಿಕಟ್ಟಿ ಮತ್ತು ಕಲಾವತಿ ವೆಂ. ಹುಣಶಿಕಟ್ಟಿ ಅವರು ಐ.ಸಿ.ಯು ಘಟಕ ಉದ್ಘಾಟಿಸುವರೆಂದು ಆಸ್ಪತ್ರೆಯ ಅರ್ಥೋಪೆಡಿಕ್ ಸರ್ಜನ್ ಡಾ.ಕಿರಣ ವೆಂ. ಹುಣಶಿಕಟ್ಟಿ ಹಾಗೂ ಆಸ್ಪತ್ರೆಯ ಇ.ಎನ್.ಟಿ ಸರ್ಜನ್ ಡಾ.ಶ್ರುತಿ ಕಿರಣ ಹುಣಶಿಕಟ್ಟಿ ತಿಳಿಸಿದ್ದಾರೆ.