ಇತಿಹಾಸ ಪ್ರಸಿದ್ಧ ದ್ರೌಪತಾಂಭ ದೇವಾಲಯ ಉದ್ಘಾಟನೆ

| Published : May 02 2024, 12:15 AM IST

ಇತಿಹಾಸ ಪ್ರಸಿದ್ಧ ದ್ರೌಪತಾಂಭ ದೇವಾಲಯ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ತಾಲೂಕಿನ ದೊಡ್ಡಹುಲ್ಲೂರು ಗ್ರಾಪಂ ವ್ಯಾಪ್ತಿಯ ಲಾಲ್ ಬಾಗ್ ದಾಸರಹಳ್ಳಿಯಲ್ಲಿ ಶ್ರೀ ಸೀತರಾಮಾಂಜನೇಯ, ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ, ಶ್ರೀಕೃಷ್ಣಧರ್ಮರಾಯಸ್ವಾಮಿ ಸಮೇತ ಶ್ರೀ ದ್ರೌಪತಾಂಭ ದೇವಾಲಯ 250 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ದಾನಿಗಳ ನೆರವಿನಿಂದ ೩ ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಂಡಿದ್ದು ಮೇ1ರಿಂದ ಮೇ 3ರವರೆಗೆ ಪೂಜಾ ವಿಧಿವಿಧಾನಗಳೊಂದಿಗೆ ಸಂಪ್ರೋಕ್ಷಣಾ ಕಾರ್ಯಕ್ರಮ ನಡೆಯಲಿದೆ.

ಹೊಸಕೋಟೆ: ತಾಲೂಕಿನ ದೊಡ್ಡಹುಲ್ಲೂರು ಗ್ರಾಪಂ ವ್ಯಾಪ್ತಿಯ ಲಾಲ್ ಬಾಗ್ ದಾಸರಹಳ್ಳಿಯಲ್ಲಿ ಶ್ರೀ ಸೀತರಾಮಾಂಜನೇಯ, ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ, ಶ್ರೀಕೃಷ್ಣಧರ್ಮರಾಯಸ್ವಾಮಿ ಸಮೇತ ಶ್ರೀ ದ್ರೌಪತಾಂಭ ದೇವಾಲಯ 250 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ದಾನಿಗಳ ನೆರವಿನಿಂದ ೩ ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಂಡಿದ್ದು ಮೇ1ರಿಂದ ಮೇ 3ರವರೆಗೆ ಪೂಜಾ ವಿಧಿವಿಧಾನಗಳೊಂದಿಗೆ ಸಂಪ್ರೋಕ್ಷಣಾ ಕಾರ್ಯಕ್ರಮ ನಡೆಯಲಿದೆ.

ದೇವಾಲಯದ ಪ್ರಧಾನ ಅರ್ಚಕ ಶ್ರೀ ಜನಾರ್ಧನಾಚಾರ್ಯ ಮಾತನಾಡಿ, ದೇವಾಲಯದಲ್ಲಿ ಸೀತಾರಾಮ, ಲಕ್ಷ್ಮೀವೆಂಕಟೇಶ್ವರ, ಶ್ರೀನಿವಾಸ, ಶ್ರೀಕೃಷ್ಣ, ಸಮೇತ ದ್ರೌಪತಾಂಭ ದೇವಿ ಸೇರಿ 5 ಗರ್ಭಗುಡಿ ಹಾಗೂ 4 ಮುಖ್ಯ ದ್ವಾರಗಳಿದ್ದು ದೇವಾಲಯದ ಪೂರ್ವಾಭಿಮುಖದಲ್ಲಿರುವ ಮೂಲ ಆಂಜನೇಯಸ್ವಾಮಿ ಗುಡಿಯನ್ನು ಉಳಿಸಿಕೊಂಡು ಕುಂಭಾಭಿಷೇಕ ಮಾಡಲಾಗುತ್ತಿದೆ ಎಂದರು.

ಗ್ರಾಮ ಮುಖಂಡ ಶ್ರೀಧರ್ ಮಾತನಾಡಿ, ಇತಿಹಾಸ ಪ್ರಸಿದ್ಧ ದ್ರೌಪತಾಂಭ ದೇವಿ ಭಕ್ತರ ಕಷ್ಟ ನಿವಾರಣೆ ಮಾಡುವ ಆರಾಧ್ಯ ದೈವವಾಗಿದ್ದು ಭಕ್ತರ ನೆರವಿನಿಂದಲೆ ೩ ಕೋಟಿ ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ದೇವತಾ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ದೇವಾಲಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಸದ್ಗುರು ಶ್ರೀ ಗುರುದೇವ ದತ್ತ ಅವಧೂತ ಸ್ವರೂಪ ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಸ್ವಾಮೀಜಿ, ಶಿವನಾಪುರ ವಹ್ನಿಕುಲ ಕ್ಷತ್ರಿಯರ ಗಯರುಪೀಠ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಪ್ರಣವಾನಂದ ಪುರಿ ಸ್ವಾಮೀಜಿ, ಬೆಂಗಳೂರಿನ ಮಲ್ಲೇಶ್ವರಂ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜಿಯರ್ ಆಗಮಿಸಲಿದ್ದಾರೆಂದು ಹೇಳಿದರು.

ತಲಕಾಯಲಬೆಟ್ಟದ ಆಗಮಿಕ ಶ್ರೀ ಪಾಂವರಾತ್ರಾಗಮ ವಿದ್ಯನ್ಮಣೆ ಹಾಗೂ ಶ್ರೀಯತಿ ಭಟ್ಟಾಚಾರ್ಯ ಅವರಿಂದ ವಾಸ್ತುಪೂಜೆ, ವಾಸ್ತುಹೋಮ, ಕಳಸ ಪ್ರತಿಷ್ಠಾಪನೆ, ಧ್ವಜಕುಂಭಾರಾಧನೆ, ಯಾಗಶಾಲಾ ಪೂಜೆ, ಮೂರ್ತಿ ದೇವತಾ ಹೋಮ, ವಿಮಾನ ದೇವತಾ ಹೋಮ, ಪಂಚಸೂಕ್ತ ಹೋಮ, ಪರಿವಾರ ದೇವತಾ ಹೋಮ, ಪ್ರಾಣ ಪತ್ರಿಷ್ಠೆ ಹೋಮ, ಮೂರ್ತಿ ಹೋಮ, ಕುಂಭಾಭಿಷೇಕ ದರ್ಪಣ, ಕೂಷ್ಮಾಂಡಬಲಿ, ಅಷ್ಟಾವದಾನ ಸೇವೆ ಸೇರಿದಂತೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಧಾನ ಅರ್ಚಕ ಜನಾರ್ಧನಾಚಾರ್ಯ ತಿಳಿಸಿದರು.ಫೋಟೋ: 1 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಲಾಲ್‌ಬಾಗ್ ದಾಸರಹಳ್ಳಿಯಲ್ಲಿ ಜೀರ್ಣೋದ್ದಾರಗೊಂಡಿರುವ ಸೀತಾರಾಮ, ಲಕ್ಷ್ಮೀವೆಂಕಟೇಶ್ವರ, ಶ್ರೀನಿವಾಸ, ಶ್ರೀಕೃಷ್ಣ ಸಮೇತ ದ್ರೌಪತಾಂಭ ದೇವಿ ದೇವಾಲಯ ಉದ್ಘಾಟನೆ ಕುರಿತು ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಫೋಟೋ: 1 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಲಾಲ್ ಬಾಗ್ ದಾಸರಹಳ್ಳಿಯಲ್ಲಿ ಉದ್ಘಾಟನೆಗೆ ಸಿದ್ದಗೊಂಡಿರುವ ಸೀತಾರಾಮ, ಲಕ್ಷ್ಮೀವೆಂಕಟೇಶ್ವರ, ಶ್ರೀಕೃಷ್ಣ, ಸಮೇತ ದ್ರೌಪತಾಂಭ ದೇವಿ ದೇವಾಲಯ.