ಈ ಪೋರ್ಟಲ್(www.jobbridgenode.com) ಉದ್ಯೋಗದಾತರು ಮತ್ತು ಉದ್ಯೋಗಾರ್ಥಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಗದಗ: ಕರ್ನಾಟಕದ ಯುವಜನರ ಸಬಲೀಕರಣಕ್ಕಾಗಿ ಸೋಲಿಡಾರಿಟಿ ಯುತ್ ಮೂವ್ಮೆಂಟ್ ಜಾಬ್ ಬ್ರಿಡ್ಜ್ ನೋಡ್ ವೆಬ್ ಪೋರ್ಟಲ್ ಅನ್ನು ಅನಾವರಣಗೊಳಿಸಿದೆ. ಇದು ಯುವ ಉದ್ಯೋಗಾರ್ಥಿಗಳನ್ನು ವಿಶ್ವಾಸಾರ್ಹ ಉದ್ಯೋಗದಾತರು ಮತ್ತು ಮಾರ್ಗದರ್ಶಕರೊಂದಿಗೆ ಸಂಪರ್ಕಿಸುವ ಸಮಗ್ರ ಡಿಜಿಟಲ್ ವೇದಿಕೆಯಾಗಿದೆ. ಇದರ ಪ್ರಚಾರಾರ್ಥವಾಗಿ ಆ. 1ರಿಂದ 15ರ ವರೆಗೆ ರಾಜ್ಯಾದ್ಯಂತ ಉದ್ಘಾಟನಾ ಅಭಿಯಾನ ನಡೆಸಲಾಗುತ್ತಿದೆ ಎಂದು ಮಹಮ್ಮದ್ ಯೂಸೂಫ್ ಮುಲ್ಲಾ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರುದ್ಯೋಗ ಸಮಸ್ಯೆ ಮತ್ತು ಕೆಲಸ ಕೊಡಿಸುವ ನೆಪದಲ್ಲಿ ಯುವಕರ ಮೇಲೆ ವಂಚನೆ, ದೌರ್ಜನ್ಯಗಳಾಗುತ್ತಿದೆ. ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ನಿರುದ್ಯೋಗವು ಯುವಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಅದೇ ಸಮಯದಲ್ಲಿ, ಉದ್ಯೋಗದ ಆಮಿಷವೊಡ್ಡಿ ಯುವಕರನ್ನು ವಂಚಿಸುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ಸವಾಲುಗಳನ್ನು ಎದುರಿಸಲು ಜಾಬ್ ಬ್ರಿಡ್ಜ್ ಯೋಜನೆಯು ದೀರ್ಘಾವಧಿಯ ಪರಿಹಾರವಾಗಿದ್ದು, ವಿಶ್ವಾಸಾರ್ಹ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನಿಟ್ಟುಕೊಂಡಿದೆ ಎಂದರು.ಈ ಪೋರ್ಟಲ್(www.jobbridgenode.com) ಉದ್ಯೋಗದಾತರು ಮತ್ತು ಉದ್ಯೋಗಾರ್ಥಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೇವಲ ಉದ್ಯೋಗದ ವಿವರಗಳನ್ನು ನೀಡದೆ, ಮಾರ್ಗದರ್ಶನ, ಅಗತ್ಯಾಧಾರಿತ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಮಾರ್ಗದರ್ಶನವನ್ನು ಒದಗಿಸಿ ಪ್ರತಿಯೊಬ್ಬ ಅಭ್ಯರ್ಥಿಯನ್ನು ಉದ್ಯೋಗಕ್ಕೆ ಸಿದ್ಧಗೊಳಿಸುತ್ತದೆ. ಯುವಕರು ಮತ್ತು ಉದ್ಯೋಗದಾತರು ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಕರೆ ನೀಡುತ್ತೇವೆ ಎಂದರು.
ಜಾಬ್ ಬ್ರಿಡ್ಜ್ ನೋಡ್ ಮತ್ತು ಅಭಿಯಾನದ ಕುರಿತು ಹೆಚ್ಚಿನ ಮಾಹಿತಿಗಾಗಿ, ಯುವಕರು 6366234200 ನಲ್ಲಿ ತಂಡವನ್ನು ಸಂಪರ್ಕಿಸಬಹುದು ಅಥವಾ info. jobbridge@solidaritykarnataka.com ಗೆ ಇಮೇಲ್ ಕಳುಹಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ರಿಯಾಜ್ ಅಹ್ಮದ್ ಶೇಖ್, ಮೆಹಬೂಬ್ ರೋಣದ, ಜಾವೇದ್ ಉಮಚಗಿ, ಅಕ್ಬರ್ ಅತ್ತಾರ, ಜಹೀರ್ ಅಹ್ಮದ್, ತಾಹೀರ್ ಡಂಬಳ, ಖಾಸೀನ್ ದರ್ಗದ್, ಮುನ್ನಾ ಕಲ್ಮನಿ, ಇಮಾಮ್ ಮೊರಬದ, ಸಾಧಿಕ್ ಧಾರವಾಡ ಉಪಸ್ಥಿತರಿದ್ದರು.