ಗಂಗಾ ಪೂಜೆ, ಗಣಪತಿ ಪೂಜೆ, ಆಗೋದಾಕ ಪೂಜೆ, ಮಂಗಳವಾದ್ಯ ಹಾಗೂ ವೀರಗಾಸೆ ತಂಡದ ಸಡಗರದೊಂದಿಗೆ ಗ್ರಾಮ ಪ್ರದಕ್ಷಿಣೆ ಮಾಡಿ ಶುಭಲಗ್ನದಲ್ಲಿ ಮಂದಿರ ಪ್ರವೇಶ, ನವಗ್ರಹ ಹೋಮ, ಸರ್ವದೇವತಾ ಹೋಮ ಹಾಗೂ ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಜರುಗಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀರಾಮಮಂದಿರದ ಉದ್ಘಾಟನೆ ಭಕ್ತಿ ಭಾವದಿಂದ ಮತ್ತು ಸಂಪ್ರದಾಯಬದ್ಧ ವಿಧಿ ವಿಧಾನಗಳೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಗಂಗಾ ಪೂಜೆ, ಗಣಪತಿ ಪೂಜೆ, ಆಗೋದಾಕ ಪೂಜೆ, ಮಂಗಳವಾದ್ಯ ಹಾಗೂ ವೀರಗಾಸೆ ತಂಡದ ಸಡಗರದೊಂದಿಗೆ ಗ್ರಾಮ ಪ್ರದಕ್ಷಿಣೆ ಮಾಡಿ ಶುಭಲಗ್ನದಲ್ಲಿ ಮಂದಿರ ಪ್ರವೇಶ, ನವಗ್ರಹ ಹೋಮ, ಸರ್ವದೇವತಾ ಹೋಮ ಹಾಗೂ ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಜರುಗಿತು. ದೇವರ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ವಿಜಯ ಕಾಲಂಕರ, ಮಹಾ ಮಂಗಳಾರತಿ ನೆರವೇರಿತು.

ಭಕ್ತರಿಗೆ ಮಧ್ಯಾಹ್ನದಿಂದ ಸಂಜೆವರೆಗೂ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ವೇಳೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ಎಲ್ಲಾ ದಾನಿಗಳಿಗೂ ರಾಮ ಮಂದಿರದ ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ಎಂ.ಶೆಟ್ಟಹಳ್ಳಿ ಗ್ರಾಮ ಅಭಿವೃದ್ಧಿ ಸಮಿತಿಯ ತಮ್ಮಣ್ಣ, ಸಮಿತಿ ಮಾರ್ಗದರ್ಶಕರು, ಗ್ರಾಮ ಸಮಿತಿ ಪದಾಧಿಕಾರಿಗಳು, ಯಜಮಾನರು, ಯುವಕರು, ಮಹಿಳಾ ಸಂಘದ ಸದಸ್ಯರು ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮದ ಅನೇಕ ಗಣ್ಯರು, ಮಾಣಿಕ್ಯನಹಳ್ಳಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಹನುಮ ಮಾಲಾಧಾರಿಗಳಿಂದ ಬೈಕ್ ರ್‍ಯಾಲಿ

ಪಾಂಡವಪುರ: ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಪಟ್ಟಣದಿಂದ ನೂರಾರು ಮಂದಿ ಹನುಮ ಮಾಲಾಧಾರಿಗಳು ಬೈಕ್ ರ್‍ಯಾಲಿಯಲ್ಲಿ ತೆರಳಿದರು.

ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಹನುಮ ಮಾಲಾಧಾರಿಗಳು ಬೈಕ್ ರ್‍ಯಾಲಿ ಪಟ್ಟಣದ ಐದು ದೀಪದ ವೃತ್ತದಿಂದ ಆರಂಭವಾಗಿ ಹರಳಹಳ್ಳಿ, ಕೆನ್ನಾಳು, ರೈಲ್ವೆ ನಿಲ್ದಾಣ, ದರಸಗುಪ್ಪೆ, ಕಿರಂಗೂರು, ಕರಿಘಟ್ಟ, ಗಂಜಾಂನ ಶ್ರೀ ನಿಮಿಷಾಂಭದ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ತಲುಪಿತು.

ಈ ವೇಳೆ ಹನುಮ ಮಾಲಾಧಾರಿಗಳು ‘ಜೈಶ್ರೀರಾಮ್, ಜೈ ಹನುಮಾನ್, ಹನುಮನ ಪಾದದ ಮೇಲಾಣೆ ಮಂದಿರವನ್ನೇ ಕಟ್ಟುವೆವು’ ಎಂಬ ಘೋಷಣೆ ಕೂಗಿದರು. ವ್ಯಕ್ತಿಯೊಬ್ಬ ಆಂಜನೇಯನ ಗಧೆ ಹಿಡಿದು ಗಮನ ಸೆಳೆದರು. ರ್‍ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ನೀಲನಹಳ್ಳಿ ಧನಂಜಯ, ಮಾಜಿ ಅಧ್ಯಕ್ಷ ಎಲ್.ಅಶೋಕ್, ಮುಖಂಡರಾದ ಎಚ್.ಎನ್.ಮಂಜುನಾಥ್, ಹಿರೇಮರಳಿ ಶೀನಪ್ಪ, ರಾಧಕೃಷ್ಣ, ವಿ.ಸಿ.ಕಾಲೋನಿ ಶ್ರೀನಿವಾಸ್ ಇತರರು ಇದ್ದರು.