ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

| Published : Aug 31 2025, 02:00 AM IST

ಸಾರಾಂಶ

ಶಿರಸಿ ನಗರದ ಗಣೇಶನಗರದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆರಂಭಿಸಲಾದ ಶಿರಸಿ ತಾಲೂಕು ಸಂಘದ ನೂತನ ಕಾರ್ಯಾಲಯವನ್ನು ವಿಧ್ಯುಕ್ತವಾಗಿ ಗಣ್ಯರು ಉದ್ಘಾಟಿಸಿದರು.

ಶಿರಸಿ: ಇಲ್ಲಿನ ಗಣೇಶನಗರದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆರಂಭಿಸಲಾದ ಶಿರಸಿ ತಾಲೂಕು ಸಂಘದ ನೂತನ ಕಾರ್ಯಾಲಯವನ್ನು ವಿಧ್ಯುಕ್ತವಾಗಿ ಗಣ್ಯರು ಉದ್ಘಾಟಿಸಿದರು.

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ, ಭೂತೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಶೆಟ್ಟಿ, ಚೇತನಾ ಮುದ್ರಣಾಲಯದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸಾದ ಹೆಗಡೆ ಇನ್ನಿತರ ಗಣ್ಯರು ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು.

ಜಿ. ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ೨೦೦೪ರಲ್ಲಿ ಪತ್ರಿಕಾ ಸಂಘವು ಸ್ವಂತ ನಿವೇಶನ ಹೊಂದಬೇಕು ಎಂಬ ಕನಸು ಕಂಡ ಫಲವಾಗಿ ೨೦ ವರ್ಷಗಳಲ್ಲಿ ಭವ್ಯ ಕಟ್ಟಡ ಹೊಂದಿದ್ದೇವೆ ಎಂದರು.

ಭೂತೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಮೊಗೇರ ಅವರು, ಪತ್ರಕರ್ತರ ಕ್ಷೇಮ ನಿಧಿಗೆ ₹೨೧ ಸಾವಿರ ದೇಣಿಗೆ ಘೋಷಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಶೆಟ್ಟಿ ಮಾತನಾಡಿದರು.

ಶಿರಸಿ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಅಧ್ಯಕ್ಷತೆ ವಹಿಸಿದ್ದರು. ಚೇತನಾ ಸಹಕಾರಿ ಮುದ್ರಣಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ ಹೆಗಡೆ ಕಡಬಾಳ, ಮಾರಿಕಾಂಬಾ ಡಿಜಿಟಲ್ ಟಿವಿ ಮುಖ್ಯಸ್ಥ ನಾಗರಾಜ ಶೆಟ್ಟಿ, ಜಿಲ್ಲಾ ಪತ್ರಿಕಾ ಮಂಡಳಿಯ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು. ಪ್ರಿಂಟರ್‌ ದೇಣಿಗೆ: ಭೂತೇಶ್ವರ ಪತ್ತಿನ ಸಹಕಾರಿ ಸಂಘದ ವತಿಯಿಂದ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪ್ರಿಂಟರ್ ದೇಣಿಗೆಯಾಗಿ ಹಸ್ತಾಂತರಿಸಿದರು. ಇದೇ ವೇಳೆ ತಾಲೂಕು ಸಂಘದ ಕ್ಷೇಮನಿಧಿಗೆ ಶ್ರೀಧರ ಮೊಗೇರ್ ಅವರು ₹೨೧ ಸಾವಿರ ನೀಡಿದರು.