ಸಾರಾಂಶ
ಇನ್ನರ್ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಸಂಸ್ಥೆಯಿಂದ ಸ್ಥಾಪಿಸಲಾಗಿರುವ ಸಂಚಾರಿ ದಿಕ್ಸೂಚಿ ಫಲಕವನ್ನು ನಗರಸಭಾಧ್ಯಕ್ಷ ಎಂ. ಚಂದ್ರೇಗೌಡ ಅವರು ಇತ್ತೀಚೆಗೆ ಅನಾವರಣಗೊಳಿಸಿದರು. ಚಿಕ್ಕಮಗಳೂರು, ಮಂಗಳೂರು ಹಳೇಬೀಡು ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ದಿಕ್ಸೂಚಿ ಫಲಕವನ್ನು ಅಳವಡಿಸಿದ್ದು ಇದಕ್ಕೆ ಸಹಕಾರ ನೀಡಿದ ನಗರಸಭೆ ಹಾಗೂ ದಾನಿಗಳನ್ನು ಇದೇ ವೇಳೆ ಸ್ಮರಿಸಿದ್ದರು.
ಕನ್ನಡಪ್ರಭ ವಾರ್ತೆ ಹಾಸನ
ಇನ್ನರ್ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಸಂಸ್ಥೆಯಿಂದ ಸ್ಥಾಪಿಸಲಾಗಿರುವ ಸಂಚಾರಿ ದಿಕ್ಸೂಚಿ ಫಲಕವನ್ನು ನಗರಸಭಾಧ್ಯಕ್ಷ ಎಂ. ಚಂದ್ರೇಗೌಡ ಅವರು ಇತ್ತೀಚೆಗೆ ಅನಾವರಣಗೊಳಿಸಿದರು. ನಗರದ ಸಾಲಗಾಮೆ ರಿಂಗ್ ರಸ್ತೆ ಸರ್ಕಲ್‌ನಲ್ಲಿ ಅಳವಡಿಸಿರುವ ದಿಕ್ಸೂಚಿ ಫಲಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂದ್ರೇಗೌಡರು, ಇನ್ನರ್ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಸಂಸ್ಥೆಯು ಅಧ್ಯಕ್ಷರಾದ ತನುಜಾ ಅವರ ನೇತೃತ್ವದಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಹತ್ತಾರು ಮಹಿಳೆಯರು ಸೇರಿ ಇನ್ನರ್ ವ್ಹೀಲ್ ಸಂಸ್ಥೆಯನ್ನು ಉತ್ತಮ ರೀತಿ ನಡೆಸುತ್ತಿದ್ದಾರೆ. ಮುಂದೆಯೂ ಸಹ ಒಳ್ಳೆಯ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು. ಇತ್ತೀಚಿಗೆ ಸಂಸ್ಥೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷಣಗಳನ್ನು ಇದೇ ವೇಳೆ ಮಲುಕು ಹಾಕಿದರು.ಸಂಸ್ಥೆಯ ಅಧ್ಯಕ್ಷ ತನುಜ ಮಾತನಾಡಿ, ಚಿಕ್ಕಮಗಳೂರು, ಮಂಗಳೂರು ಹಳೇಬೀಡು ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವವರಿಗೆ ಅನುಕೂಲವಾಗುವ ದೃಷ್ಟಿಯಿಂದ ದಿಕ್ಸೂಚಿ ಫಲಕವನ್ನು ಅಳವಡಿಸಿದ್ದು ಇದಕ್ಕೆ ಸಹಕಾರ ನೀಡಿದ ನಗರಸಭೆ ಹಾಗೂ ದಾನಿಗಳನ್ನು ಇದೇ ವೇಳೆ ಸ್ಮರಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರತಿ, ಗೌರವ ಸದಸ್ಯೆ ಪೂಜಾ ರಘುನಂದನ್, ಕಾರ್ಯದರ್ಶಿ ವನಿತಾ ಸೇರಿದಂತೆ ಸಂಸ್ಥೆಯ ಅನೇಕ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.