ಸಾರಾಂಶ
ರೈತರು ಬೆಳೆದ ದವಸ ಧಾನ್ಯಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಅತಿ ಅವಶ್ಯವಿದ್ದರಿಂದ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 16ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಂದೀಶ ಗೋಡೆಮ್ಮಿ ಹೇಳಿದರು.
ಸವಣೂರು:ರೈತರು ಬೆಳೆದ ದವಸ ಧಾನ್ಯಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಅತಿ ಅವಶ್ಯವಿದ್ದರಿಂದ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 16ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಂದೀಶ ಗೋಡೆಮ್ಮಿ ಹೇಳಿದರು.ತಾಲೂಕಿನ ತೊಂಡೂರ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಸುಮರು 16 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಗೋದಾಮು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ರೈತರ ದವಸ ಧಾನ್ಯಗಳನ್ನು ಮನೆಯ ಅಂಗಳದಲ್ಲಿ ತಂದು ಹಾಕುವುದರಿಂದ ವರುಣನ ಆರ್ಟಭಟಕ್ಕೆ ದವಸ ಧಾನ್ಯಗಳು ಸಂಪೂರ್ಣವಾಗಿ ನಾಶವಾಗುತ್ತಿರುವುದನ್ನು ಮನಗಂಡು ಗ್ರಾಪಂ ಅಧ್ಯಕ್ಷರು ಸರ್ವ ಸದಸ್ಯರ ಒಪ್ಪಿಗೆಯನ್ನು ಪಡೆದು 16 ಲಕ್ಷವನ್ನು ಉದ್ಯೋಗ ಖಾತ್ರಿಯಲ್ಲಿ ಹಣವನ್ನು ಮೀಸಲಿರಿಸಿ ಬೃಹದಾಕಾರದ ಗೋದಾಮು ನಿರ್ಮಿಸಿ ರೈತರಿಗೆ ಅನುಕೂಲವಾಗಲು ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಜೈತುನಭೀ ಕರ್ಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಕುಮಾರಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ದಾದಾಪೀರ ಕರ್ಜಗಿ, ಗಿರೀಶ ಅಂಗಡಿ, ಸುಭಾಸ ಮರಡೂರ, ಲಕ್ಷ್ಮವ್ವ ಬಂಡಿವಡ್ಡರ, ಕವಿತಾ ಮಾಳಪ್ಪನವರ, ಪ್ರಮುಖರಾದ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ನವೀನ ಬಂಡಿವಡ್ಡರ, ಶಂಕ್ರಪ್ಪ ಹೊಸಮನಿ, ರಮೇಶ ಹೊನ್ನನಾಯ್ಕರ, ಸಂಜೀವ ಹೊಸಮನಿ ಹಾಗೂ ಗ್ರಾಮಸ್ಥರು ಇದ್ದರು.ಸ್ವಾಗತ ಹಾಗೂ ವಂದಾನಾರ್ಪಣೆಯನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ಭೋಜರಾಜ ಲಮಾಣಿ ನಿರ್ವಹಿಸಿದರು.
;Resize=(128,128))
;Resize=(128,128))