ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಬೀಳಗಿ ತಾಲೂಕಾ ಜೈ ಜವಾನ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ತಾಲೂಕಿನ ತೆಗ್ಗಿ ಗ್ರಾಮದ ವೀರಯೋಧ ದಿ.ಪಾಂಡು ಧೇನು ಲಮಾಣಿ ಇವರ ಮೂರ್ತಿ ಪ್ರತಿಷ್ಠಾಪನೆ ಸೆ.6ರಂದು ತೆಗ್ಗಿ ತಾಂಡಾದಲ್ಲಿ ನಡೆಯಲಿದೆ ಎಂದು ತಾಲೂಕು ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಮ್.ಎಸ್.ಕೋಮಾರದೇಸಾಯಿ ಹೇಳಿದರು.ಪಟ್ಟಣದ ಜೆಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ದಿವ್ಯ ಸಾನ್ನಿಧ್ಯ ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು, ಸೋಮದೇವರಟ್ಟಿಯ ಜಗನು ಮಹಾರಾಜರು ವಹಿಸುವರು. ಅಧ್ಯಕ್ಷತೆ ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ್ ವಹಿಸುವರು. ಉದ್ಘಾಟನೆಯನ್ನು ಶಾಸಕ ಜೆ.ಟಿ.ಪಾಟೀಲ್, ಮಾಜಿ ಸಚಿವ ಮುರುಗೇಶ್ ನಿರಾಣಿ ನೆರವೇರಿಸುವರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಮಾಜಿ ಸಚಿವ ಎಸ್.ಆರ್.ಪಾಟೀಲ್, ಮಾಜಿ ಲೋಕಸಭ ಸದಸ್ಯ ಡಾ.ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ, ಮಾಜಿ ಶಾಸಕ ದೇವಾನಂದ ಚವ್ಹಾಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ್ ಸರನಾಯಕ, ಜಿಪಂ ಸಿಇಒ ಶಶಿಧರ್ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್‌ಕುಮಾರ್ ದೇಸಾಯಿ, ಅಮರೇಶ್ ಪಮ್ಮಾರ, ತಹಸೀಲ್ದಾರ್ ಸುಹಾಸ್ ಇಂಗಳೆ, ಚಂದ್ರಕಾಂತ ಪವಾರ, ಉಪನ್ಯಾಸವನ್ನು ಡಾ.ಸಾಗರ ತೆಕ್ಕೆನ್ನವರ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಮಾಜಿ ಸೈನಿಕರಾದ ಜಗದೀಶ ಶೀತಲವಾಡಿ, ವಿಠ್ಠಲ್ ತೆಗ್ಗಿ, ಎಂ.ಎಂ ತಾಂಭೋಳೆ, ಲಕ್ಷತ್ಮಣ ಹರದೋಳಿ, ಮಲ್ಲಿಕಾರ್ಜುನ್ ಕೋಟಿ, ಸುರೇಶ್ ಉಪ್ಪಾರ್ ಇತರರು ಇದ್ದರು.