ಇಂದು ಮಡಿಕಟ್ಟೆಯಲ್ಲಿ ಬಟ್ಟೆ ತೊಳೆಯುವ ಯಂತ್ರ ಉದ್ಘಾಟನೆ

| Published : Mar 03 2025, 01:49 AM IST

ಇಂದು ಮಡಿಕಟ್ಟೆಯಲ್ಲಿ ಬಟ್ಟೆ ತೊಳೆಯುವ ಯಂತ್ರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಎನ್‌ಎಚ್‌ -48 ರಸ್ತೆಯ ಜಿಲ್ಲಾ ಪಂಚಾಯಿತಿ ಎದುರಿನ ಮಡಿಕಟ್ಟೆ ಆವರಣದಲ್ಲಿ ಜಿಲ್ಲಾ ಶ್ರೀ ಮಡಿವಾಳರ ಮಾಚಿದೇವ ಸಂಘ ಹಾಗೂ ಜಿಲ್ಲಾ ಮಹಿಳಾ ಮಡಿವಾಳರ ಮಾಚಿದೇವ ಸಂಘ ವತಿಯಿಂದ ಆಧುನಿಕ ಬಟ್ಟೆ ತೊಳೆಯುವ ಯಂತ್ರದ ಉದ್ಘಾಟನಾ ಸಮಾರಂಭ ಮಾ.3ರಂದು ನಡೆಯಲಿದೆ.

ದಾವಣಗೆರೆ: ನಗರದ ಎನ್‌ಎಚ್‌ -48 ರಸ್ತೆಯ ಜಿಲ್ಲಾ ಪಂಚಾಯಿತಿ ಎದುರಿನ ಮಡಿಕಟ್ಟೆ ಆವರಣದಲ್ಲಿ ಜಿಲ್ಲಾ ಶ್ರೀ ಮಡಿವಾಳರ ಮಾಚಿದೇವ ಸಂಘ ಹಾಗೂ ಜಿಲ್ಲಾ ಮಹಿಳಾ ಮಡಿವಾಳರ ಮಾಚಿದೇವ ಸಂಘ ವತಿಯಿಂದ ಆಧುನಿಕ ಬಟ್ಟೆ ತೊಳೆಯುವ ಯಂತ್ರದ ಉದ್ಘಾಟನಾ ಸಮಾರಂಭ ಮಾ.3ರಂದು ನಡೆಯಲಿದೆ.

ಬೆಳಗ್ಗೆ 7 ರಿಂದ 9 ಗಂಟೆವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಚಿತ್ರದುರ್ಗದ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ದೂಡಾದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಆಯುಕ್ತೆ ರೇಣುಕಾ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್, ಮಡಿವಾಳ ಮಾಚಿದೇವ ಸಮಾಜದ ಕಾರ್ಯಾಧ್ಯಕ್ಷ ಅವರಗೆರೆ ಎಚ್.ಜಿ.ಉಮೇಶ್, ನಿವೃತ್ತ ಎಂಜಿನಿಯರ್ ನಾಗರಾಜ್, ಲೋಕಿಕೆರೆ ನಾಗರಾಜ, ಶ್ರೀನಿವಾಸ ದಾಸಕರಿಯಪ್ಪ, ಬಿ.ಜಿ.ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ವಿನಾಯಕ ಪೈಲ್ವಾನ್, ಕೆ.ಚಮನ್ ಸಾಬ್, ಎಸ್.ಟಿ. ವೀರೇಶ್ ಆಗಮಿಸಲಿದ್ದು ಜಿಲ್ಲಾ ಮಡಿಕಟ್ಟೆಯ ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಗೀತಾ ನಾಗರಾಜ್, ಎ.ನಾಗರಾಜ್, ಡೈಮಂಡ್ ಮಂಜುನಾಥ್, ಜಿ.ವಿಜಯಕುಮಾರ್, ಆರ್.ಎನ್.ಧನಂಜಯ, ವಿರೂಪಾಕ್ಷಪ್ಪ ಮಂಜುನಾಥ್, ನಾಗರಾಜ, ಎಂ.ರುದ್ರೇಶ್, ಹುಲಿಕಟ್ಟೆ ರಾಮಚಂದ್ರಪ್ಪ, ಅನ್ನಪೂರ್ಣಮ್ಮ ಬಸವರಾಜಪ್ಪ, ಡಾ. ಎನ್.ಪರಶುರಾಮ, ಎಂ.ನಾಗರಾಜ್, ಅಂಜಿನಪ್ಪ ಪೂಜಾರ್, ಸಿ.ಗುಡ್ಡಪ್ಪ, ಎಚ್.ದುರ್ಗಪ್ಪ, ಅಜ್ಜಯ್ಯ, ಜಯಣ್ಣ, ದಿಳ್ಯೆಪ್ಪ, ಪಿ.ಮಂಜುನಾಥ್, ನಾಗಮ್ಮ, ಸುರೇಶ್ ಕೋಗುಂಡಿ, ಚಂದ್ರಣ್ಣ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.

- - - (ಸಾಂದರ್ಭಿಕ ಚಿತ್ರ)