ಸ್ಥಳೀಯ ಗುತ್ತಿಗೆದಾರರಿಗೆ ಪ್ರೋತ್ಸಾಹ: ರಾಮನಾಥ ಶಾನಭಾಗ

| Published : Nov 11 2025, 02:45 AM IST

ಸ್ಥಳೀಯ ಗುತ್ತಿಗೆದಾರರಿಗೆ ಪ್ರೋತ್ಸಾಹ: ರಾಮನಾಥ ಶಾನಭಾಗ
Share this Article
  • FB
  • TW
  • Linkdin
  • Email

ಸಾರಾಂಶ

ಐವತ್ತು ಲಕ್ಷದೊಳಗಿನ ಕಾಮಗಾರಿ ಗುತ್ತಿಗೆ ಪಡೆಯಲು ಹೊರ ತಾಲೂಕಿನ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸದೇ ಸ್ಥಳೀಯ ಗುತ್ತಿಗೆದಾರರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ನಿರ್ಧಾರವನ್ನು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಸರ್ವ ಸಾಧಾರಣಾ ಸಭೆ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಐವತ್ತು ಲಕ್ಷದೊಳಗಿನ ಕಾಮಗಾರಿ ಗುತ್ತಿಗೆ ಪಡೆಯಲು ಹೊರ ತಾಲೂಕಿನ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸದೇ ಸ್ಥಳೀಯ ಗುತ್ತಿಗೆದಾರರನ್ನು ಪ್ರೋತ್ಸಾಹಿಸಿ ಬೆಂಬಲಿಸುವ ನಿರ್ಧಾರವನ್ನು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಸರ್ವ ಸಾಧಾರಣಾ ಸಭೆ ಕೈಗೊಳ್ಳಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮನಾಥ (ಧೀರೂ) ಶಾನಭಾಗ ತಿಳಿಸಿದರು.

ನಗರದ ತೋಟಗಾರ್ಸ್‌ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯ ಶಿರಸಿ ಲೊಕೋಪಯೋಗಿ ವಿಭಾಗದಲ್ಲಿ ₹118 ಕೋಟಿಯಲ್ಲಿ 78 ಕೋಟಿ ಬಾಕಿ ಇದ್ದು, ಕಾರವಾರ ಲೊಕೋಪಯೋಗಿ ವಿಭಾಗದಲ್ಲಿ ₹105 ಕೋಟಿಯಲ್ಲಿ 67 ಕೋಟಿ ಬಾಕಿ ಇದೆ. ಹಳೆಯ ಪಾವತಿ ಜತೆ ಹೊಸ ಕಾಮಗಾರಿಗಳ ಹಣವೂ ಬಿಡುಗಡೆಯಾಗುತ್ತಿದೆ. ₹50‌ ಲಕ್ಷಕ್ಕಿಂತ ಅಧಿಕ ಮೊತ್ತದ ಟೆಂಡರ್‌ಗಳಲ್ಲಿ ಹೊರ ತಾಲೂಕು ಗುತ್ತಿಗೆದಾರರು ಭಾಗವಹಿಸಬಹುದು ಎಂದು ನಿರ್ಧರಿಸಿದ್ದೇವೆ. ಲೋಕೋಪಯೋಗಿ ಇಲಾಖೆಯ ಸಚಿವರ ಸಹಕಾರದ ಕಾರಣದಿಂದ ಬಾಕಿ ಹಣ ಪಾವತಿ ಆಗುತ್ತಿದೆ. ಆದರೆ, ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕ ಕಮಿಷನ್ ಪಡೆಯುವ ಆರೋಪವಿದೆ. ಇದನ್ನು ಸಚಿವರ ಗಮನಕ್ಕೆ ತರುತ್ತೇವೆ. ಕಳೆದ 20 ವರ್ಷಗಳಿಗೂ ಅಧಿಕ ಕಾಲದಿಂದ ಕಾಮಗಾರಿಗಳನ್ನು ನಿರ್ಮಿತಿ, ಲ್ಯಾಂಡ್ ಆರ್ಮಿಗೆ ಅಧಿಕ ಸಂಖ್ಯೆಯಲ್ಲಿ ವಹಿಸುವದನ್ನು ಆಕ್ಷೇಪಿಸುತ್ತಿದ್ದರೂ ಇನ್ನೂ ನಿಂತಿಲ್ಲ. ಇನ್ನೊಮ್ಮೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಉಪಾಧ್ಯಕ್ಷ ರಮೇಶ ದುಭಾಶಿ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಹಿರೇಮಠ ಮಾತನಾಡಿದರು.

ಉಪಾಧ್ಯಕ್ಷ ಸತೀಶ ಗೌಡ, ಕೋಶಾಧ್ಯಕ್ಷ ಗಣೇಶ ದಾವಣಗೆರೆ, ತಾಂತ್ರಿಕ ಸಲಹೆಗಾರ ಜೀನರಾಜ ಕುಮಟಾ, ಸಹ ಕಾರ್ಯದರ್ಶಿ ಮಹಾದೇವ ಭಟ್‌, ಸುಧಾಕರ ರೆಡ್ಡಿ, ಛತ್ರಪತಿ ಮಾಳ್ಸೇಕರ, ಬಿ.ಎಲ್‌.ಲಮಾಣಿ, ವಸಂತ ಹನುಕಂತ, ನಾಗೇಶ ನಾಯ್ಕ ಮತ್ತಿತರರು ಇದ್ದರು.ಪದಾಧಿಕಾರಿಗಳ ಆಯ್ಕೆ

ಗೌರವಾಧ್ಯಕ್ಷರಾಗಿ ಎಂ.ವಿ. ಜೋಶಿ, ಅಧ್ಯಕ್ಷರಾಗಿ ರಾಮನಾಥ ಶಾನಭಾಗ, ಉಪಾಧ್ಯಕ್ಷರಾಗಿ ರಮೇಶ ದುಭಾಶಿ, ಸತೀಶ ಗೌಡ, ವಿಶೇಷ ಆಹ್ವಾನಿತರಾಗಿ ಶ್ಯಾಮಸುಂದರ ಭಟ್ಟ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಸ್‌. ಹಿರೇಮಠ, ಕೋಶಾಧ್ಯಕ್ಷರಾಗಿ ಗಣೇಶ ದಾವಣಗೆರೆ, ತಾಂತ್ರಿಕ ಸಲಹೆಗಾರರಾಗಿ ಜೀನರಾಜ ಕುಮಟಾ, ಸಹ ಕಾರ್ಯದರ್ಶಿಗಳಾಗಿ ಮಹಾದೇವ ಭಟ್‌, ಸುಧಾಕರ ರೆಡ್ಡಿ, ಛತ್ರಪತಿ ಮಾಳ್ಸೇಕರ, ಬಿ.ಎಲ್‌. ಲಮಾಣಿ, ರಾಘು ಮೂಲೆಮನೆ, ವಸಂತ ಹನುಕಂತ, ನಾಗೇಶ ನಾಯ್ಕ, ತಾಲೂಕಾ ಪ್ರತಿನಿಧಿಗಳಾಗಿ ಶಿರಸಿಯ ಪ್ರದೀಪ ಶೆಟ್ಟಿ, ತಬ್ರೇಜ್‌ ಶೇಖ್‌, ಸಿದ್ದಾಪುರದ ಗಣೇಶ ನಾಯ್ಕ, ಎನ್‌.ಕೆ. ನಾಯ್ಕ, ಯಲ್ಲಾಪುರದ ಮಂಜು ಮೊಗೇರ, ಕುಪ್ಪಯ್ಯ ಪೂಜಾರಿ, ಮಾಲತೇಶ ಶೇಟ್‌, ಮುಂಡಗೋಡದ ರಮೇಶ ಶೇಟ್‌, ಕೃಷ್ಣಾ ಹಿರೇಹಳ್ಳಿ, ಹಳಿಯಾಳದ ಅಶೋಕ ಘೋಟ್ನೇಕರ, ಟಿ.ಆ. ನಾಕಾಡೆ, ದಾಂಡೇಲಿಯ ಸುಬ್ರಹ್ಮಣ್ಯ ಪಡುಕೋನೆ, ದೇವಾನಂದ ಆರ್‌ಸಿ, ಭಟ್ಕಳದ ಟಿ.ಡಿ. ನಾಯ್ಕ, ಸತೀಶ ನಾಯ್ಕ, ಸಿ.ಎಚ್‌. ಮಹಮ್ಮದ ಅಶ್ರಫ್‌, ಹೊನ್ನಾವರದ ಎಸ್‌.ಕೆ. ನಾಯ್ಕರ, ನಾಗರಾಜ ನಾಯ್ಕ, ಕುಮಟಾದ ನಾಗೇಶ ನಾಯ್ಕ, ಲೋಕೇಶ ನಾಯ್ಕ, ಅಂಕೋಲಾದ ರಾಮದಾಸ ನಾಯ್ಕ, ವಿಕಾಸ ಶೆಟ್ಟಿ, ಕಾರವಾರದ ಮುರುಳಿ ಗೋವೆಕರ, ದೀಪಕ ನಾಯ್ಕ, ಜೋಯಿಡಾದ ಸುಧಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.