ಕೊಪ್ಪಳದಲ್ಲಿ ದೇವದಾಸಿಯರ ಪ್ರತಿಭಟನೆ

| Published : Nov 11 2025, 02:30 AM IST

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ಸದಸ್ಯರು ಸೋಮವಾರ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗಣತಿಯಲ್ಲಿ ಈಗಾಗಲೆ ಗಣತಿ ಪಟ್ಟಿಯಲ್ಲಿರುವ ದೇವದಾಸಿಯರು ಹಾಗೂ ಕುಟುಂಬದ ಸದಸ್ಯರ ಮರು ಸಮೀಕ್ಷೆಗೆ ವಿಶೇಷವಾಗಿ ಕ್ರಮ ವಹಿಸಲಾಗಿದೆ. ಇದುವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿಯರು ಹಾಗೂ ಅವರ ಕುಟುಂಬದ ಸಾವಿರಾರು ಸದಸ್ಯರು, ಈ ದೌರ್ಜನ್ಯದ ದೇವದಾಸಿ ಪದ್ಧತಿಗೆ ಹಾಗೂ ಜಾತಿ ಅಸಮಾನತೆ ಮತ್ತು ಅಸ್ಪೃಶ್ಯತೆ ಆಚರಣೆಯ ಅಪಮಾನಗಳ ತೀವ್ರ ಶೋಷಣೆಗೆ ಗುರಿಯಾಗಿದ್ದರು. ಅವರಿಗೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ, ಅವರನ್ನು ಗಣಿತಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇವದಾಸಿ ಪದ್ಧತಿ ನಿಷೇಧ ಕಾಯ್ದೆ - ೧೯೮೨ರಲ್ಲಿ ಅಂಗೀಕರಿಸಿ ಜಾರಿಯಾಗಿರುವುದರಿಂದ ಆನಂತರ ಹುಟ್ಟಿದವರನ್ನು ಗಣತಿ ಸೇರಿಸಲಾಗದು ಎಂದು ಸಮೀಕ್ಷೆ ನಡೆಸುವವರು ಹೇಳುತ್ತಾರೆ. ಹೀಗಾಗಿ ಗಣತಿ ಪಟ್ಟಿಯಲ್ಲಿಲ್ಲದ ಮಹಿಳೆಯರ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ದೇವದಾಸಿ ಪದ್ಧತಿಯನ್ನು ಈ ಹಿಂದೆ ಬ್ರಿಟಿಷರ ಕಾಲದಲ್ಲೆ ನಿಷೇಧಿಸಲಾಗಿತ್ತು. ಹಾಗಿದ್ದಾಗಲೂ ಎರಡು ಬಾರಿ ದೇವದಾಸಿಯರ ಗಣತಿ ನಡೆಸಿ ಪುನರ್ವಸತಿ ಕಲ್ಪಿಸಲಾಗಿದೆ. ಈಗಲೂ ಕೈಬಿಟ್ಟು ಹೋಗಿರುವವರನ್ನು ಸೇರಿಸುವಂತೆ ಆಗ್ರಹಿಸಿದ್ದಾರೆ.

ಜಿ. ಹುಲಿಗಮ್ಮ, ಮಂಜುನಾಥ ಡಗ್ಗಿ, ಸುಂಕಪ್ಪ ಗದಗ ಮೊದಲಾದವರು ಇದ್ದರು.