ಸ್ಕೌಟ್ಸ್​ ಚಟುವಟಿಕೆಯಲ್ಲಿ ಯೋಗ, ಧ್ಯಾನ ಸೇರ್ಪಡೆ: ಪಿ.ಜಿ.ಆರ್. ಸಿಂದ್ಯಾ

| Published : Aug 26 2025, 02:00 AM IST

ಸ್ಕೌಟ್ಸ್​ ಚಟುವಟಿಕೆಯಲ್ಲಿ ಯೋಗ, ಧ್ಯಾನ ಸೇರ್ಪಡೆ: ಪಿ.ಜಿ.ಆರ್. ಸಿಂದ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಬೋರ್ಡ್​ ಹೈಸ್ಕೂಲಿನಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಭಾರತ್​ ಸೌಟ್ಸ್​ ಮತ್ತು ಗೈಡ್ಸ್​ ಆಶ್ರಯದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪಪೂ, ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ ಮತ್ತು ಉಪನ್ಯಾಸಕಿಯರಿಗೆ ರೋವರಿಂಗ್​ ಮತ್ತು ರೇಂಜರಿಂಗ್​ ಪ್ರಾರಂಭಿಕ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸ್ಕೌಟ್ಸ್​ ಚಟುವಟಿಕೆಗಳಲ್ಲಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಸೇರ್ಪಡೆಗೊಳಿಸವ ಚಿಂತನೆ ಇದೆ. ಇದರಿಂದ ಮಕ್ಕಳ ಜ್ಞಾಪನಾ ಸಾಮರ್ಥ್ಯವೂ ವೃದ್ಧಿಸಲಿದೆ ಎಂದು ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್​. ಸಿಂಧ್ಯಾ ಹೇಳಿದರು.ಅವರು ನಗರದ ಬೋರ್ಡ್​ ಹೈಸ್ಕೂಲಿನಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಭಾರತ್​ ಸೌಟ್ಸ್​ ಮತ್ತು ಗೈಡ್ಸ್​ ಆಶ್ರಯದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪಪೂ, ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕ ಮತ್ತು ಉಪನ್ಯಾಸಕಿಯರಿಗೆ ರೋವರಿಂಗ್​ ಮತ್ತು ರೇಂಜರಿಂಗ್​ ಪ್ರಾರಂಭಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.ರೋವರ್ಸ್​ ಮತ್ತು ರೇಂಜರ್ಸ್​ಗಳಿಗೆ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯ. ಶಿಸ್ತು ಇಲ್ಲದೇ ದೇಶದ ಪ್ರಗತಿ ಸಾಧ್ಯವಿಲ್ಲ. ಕಮ್ಯುನಿಷ್ಟ್​ ರಾಷ್ಟ್ರಗಳಲ್ಲಿ ಜನರು ಶಿಸ್ತು ಮತ್ತು ಸಮಯಪ್ರಜ್ಞೆ ಅಳವಡಿಸಿಕೊಂಡಿದ್ದರಿಂದ ಆರ್ಥಿಕವಾಗಿ ಪ್ರಬಲರಾಗಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಂಟನಾ ಆಯುಕ್ತ ಎಂ. ಪ್ರಭಾಕರ ಭಟ್​, ಡಿಡಿಪಿಯು ಮಾರುತಿ, ಪಪೂ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ವರ್ಗೀಸ್​ ಪಿ., ಜಿಲ್ಲಾ ಸ್ಕೌಟ್ಸ್​ ಆಯುಕ್ತ ಜನಾರ್ದನ ಕೊಡವೂರು, ಗೈಡ್ಸ್​ ಆಯುಕ್ತೆ ಜ್ಯೋತಿ ಪೈ, ಖಜಾಂಚಿ ಹರಿಪ್ರಸಾದ್​ ರೈ, ಶಿಬಿರ ನಾಯಕ ಗುರುಮೂರ್ತಿ, ಜಿಲ್ಲಾ ಕಾರ್ಯದರ್ಶಿ ಆನಂದ್​ ಅಡಿಗ, ರಾಜ್ಯ ಸಂಘಟನಾ ಸಹ ಕಾರ್ಯದರ್ಶಿ ಸುಮನ್ ಶೇಖರ್, ಕಾಲೇಜು ಪ್ರಾಂಶುಪಾಲೆ ಲೀಲಾವತಿ ಮೊದಲಾದವರು ಉಪಸ್ಥಿತರಿದ್ದರು. ಉದಯ ಭಾಸ್ಕರ್ ಶೆಟ್ಟಿ ನಿರೂಪಿಸಿದರು. ಹರೀಶ್ ವಂದಿಸಿದರು.