ಮುಂದಿನ ದಿನಗಳಲ್ಲಿ ರೈತರಿಗೆ ಹಾಲಿನ ದರವು ಹೆಚ್ಚಾಗಲಿದೆ. ಹೈನುಗಾರರು ಗುಣಮಟ್ಟದ ಹಾಲು ಪೂರೈಕೆ ಮಾಡಿದ್ದಲ್ಲಿ ಸ್ಥಳೀಯ ಡೇರಿಗಳು ಕೂಡ ಅಭಿವೃದ್ಧಿ ಕಾಣುವ ಜೊತೆಗೆ ಲಾಭಾಂಶ ಕಾಣಬಹುದು. ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಸಂಘವನ್ನು ಅಭಿವೃದ್ಧಿ ಪಡಿಸಬಹುದು.
ಕನ್ನಡಪ್ರಭ ವಾರ್ತೆ ಭಾರತೀನಗರ
ತಿರುಪತಿಗೆ ನಂದಿನಿ ತುಪ್ಪ ಬಳಕೆ ಮಾಡುವುದರಿಂದ ಜಿಲ್ಲಾ ಹಾಲು ಒಕ್ಕೂಟಕ್ಕೆ ಬೇಡಿಕೆ ಬಂದಿದೆ. ರೈತರು ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಕಾಣಬಹುದು ಎಂದು ಮನ್ಮುಲ್ ನಿರ್ದೇಶಕಿ ಎಂ.ರೂಪ ತಿಳಿಸಿದರು.ಹುಣ್ಣನದೊಡ್ಡಿ ಡೇರಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ದೆಹಲಿ ಮಾರುಕಟ್ಟೆಗೆ ಮಂಡ್ಯ ಹಾಲು ಒಕ್ಕೂಟದಿಂದ ಹಾಲು ರವಾನೆಯಾಗುತ್ತದೆ. ಇದರಿಂದ ಹಾಲಿನ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ನಂದಿನಿ ಏಜೆನ್ಸಿಗೂ ಕೂಡ ಬಹಳ ಬೇಡಿಕೆ ಸಿಕ್ಕಿದೆ ಎಂದರು.
ಮುಂದಿನ ದಿನಗಳಲ್ಲಿ ರೈತರಿಗೆ ಹಾಲಿನ ದರವು ಹೆಚ್ಚಾಗಲಿದೆ. ಹೈನುಗಾರರು ಗುಣಮಟ್ಟದ ಹಾಲು ಪೂರೈಕೆ ಮಾಡಿದ್ದಲ್ಲಿ ಸ್ಥಳೀಯ ಡೇರಿಗಳು ಕೂಡ ಅಭಿವೃದ್ಧಿ ಕಾಣುವ ಜೊತೆಗೆ ಲಾಭಾಂಶ ಕಾಣಬಹುದು ಎಂದರು.ಸಂಘದ ಅಧ್ಯಕ್ಷೆ ಸಿ.ಕೆ.ಸುನಂದ ದೊಡ್ಡಯ್ಯ ಮಾತನಾಡಿ, ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಸಂಘವನ್ನು ಅಭಿವೃದ್ಧಿ ಪಡಿಸಬಹುದು ಎಂದರು.
ಸಂಘದ ಸಿಇಒ ಎಚ್.ಸಿ.ಹೇಮಾವತಿ ವಾರ್ಷಿಕ ವರದಿ ಮಂಡಿಸಿದರು. ನಂತರ ಮನ್ಮುಲ್ ನಿರ್ದೇಶಕಿ ರೂಪ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಜೀವನ್‌ಕುಮಾರ್, ವಿಸ್ತರಣಾಧಿಕಾರಿ ಅಪ್‌ಶಾದ್, ಸಂಘದ ಉಪಾಧ್ಯಕ್ಷೆ ಜಯಮ್ಮಸಿದ್ದಪ್ಪ, ನಿರ್ದೇಕರಾದ ರತ್ನಮ್ಮ, ಶಾಂತಮ್ಮ, ಪುಟ್ಟಸಿದ್ದಮ್ಮ, ಪ್ರೇಮ, ನಂದಿನಿ, ಶಿವಮ್ಮ, ಚಿಕ್ಕತಾಯಮ್ಮ, ಶಶಿಕಲಾ, ಭಾಗ್ಯಮ್ಮ, ಸಿಬ್ಬಂದಿ ಸುನೀತ ಸೇರಿದಂತೆ ಹಲವರಿದ್ದರು.