ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

| Published : Aug 26 2024, 01:39 AM IST

ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ. ೨೭ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಬಹುಮತ ಹೊಂದಿದ್ದು, ಉಪಾಧ್ಯಕ್ಷ ಸ್ಥಾನ ವೀಣಾ ಗುಡಿ ಅವರಿಗೆ ಖಚಿತವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಪುರುಷರೋ, ಮಹಿಳೆಯರೋ ಎಂಬ ಚರ್ಚೆ ನಡುವೆ ಮಮತಾ ಆರೆಗೊಪ್ಪ, ರಾಧಿಕಾ ದೇಶಪಾಂಡೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒತ್ತಡ ಹೆಚ್ಚಿದರೆ ಇರುವ ೧೨ ತಿಂಗಳ ಅವಧಿಯನ್ನು ಎರಡು ಅವಧಿ ಮಾಡುವ ಅನಿವಾರ್ಯತೆಯತ್ತ ಹೈಕಮಾಂಡ್ ಯೋಚಿಸುತ್ತಿದೆ.

ಮಾರುತಿ ಶಿಡ್ಲಾಪುರಕನ್ನಡಪ್ರಭ ವಾರ್ತೆ ಹಾನಗಲ್ಲ ಹಾನಗಲ್ಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ. ೨೭ರಂದು ಚುನಾವಣೆ ನಡೆಯಲಿದೆ.

ಕಾಂಗ್ರೆಸ್‌ ಬಹುಮತ ಹೊಂದಿದ್ದು, ಉಪಾಧ್ಯಕ್ಷ ಸ್ಥಾನ ವೀಣಾ ಗುಡಿ ಅವರಿಗೆ ಖಚಿತವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಪುರುಷರೋ, ಮಹಿಳೆಯರೋ ಎಂಬ ಚರ್ಚೆ ನಡುವೆ ಮಮತಾ ಆರೆಗೊಪ್ಪ, ರಾಧಿಕಾ ದೇಶಪಾಂಡೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒತ್ತಡ ಹೆಚ್ಚಿದರೆ ಇರುವ ೧೨ ತಿಂಗಳ ಅವಧಿಯನ್ನು ಎರಡು ಅವಧಿ ಮಾಡುವ ಅನಿವಾರ್ಯತೆಯತ್ತ ಹೈಕಮಾಂಡ್ ಯೋಚಿಸುತ್ತಿದೆ.

ಹಾನಗಲ್ಲ ಪುರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಬ ವರ್ಗ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ನ ೧೮, ಬಿಜೆಪಿಯ ೪ ಹಾಗೂ ಒಂದು ಪಕ್ಷೇತರ ಸೇರಿದಂತೆ ಒಟ್ಟು ೨೩ ಸದಸ್ಯರಿದ್ದಾರೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ರಾಧಿಕಾ ದೇಶಪಾಂಡೆ ಅವರ ಹೆಸರು ಮುನ್ನಲೆಯಲ್ಲಿತ್ತು. ಈಗ ಮಮತಾ ಆರೇಗೊಪ್ಪ ಪ್ರಬಲ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದು, ನಿರ್ಣಯ ಹೈಕಮಾಂಡ್ ಅಂಗಳ ಸೇರಿದೆ. ಈ ನಡುವೆ ಉಪಾಧ್ಯಕ್ಷ ಸ್ಥಾನ ಮಹಿಳೆ ಇರುವುದರಿಂದ ಹಾಗೂ ಈ ಮೀಸಲಾತಿಗೆ ಒಬ್ಬಳೇ ಮಹಿಳೆ ವೀಣಾ ಗುಡಿ ನಿಶ್ಚಿತ ಇರುವುದರಿಂದ ಪುರುಷರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಯೋಗ್ಯ ಎಂಬ ವಾದ ಪುರಸಭಾ ಸದಸ್ಯರಲ್ಲಿ ಚರ್ಚೆಯಾಗುತ್ತಿದೆ.ಪುರುಷ ಸದಸ್ಯರಲ್ಲಿ ವಿರೂಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ, ಮಹೇಶ ಪವಾಡಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿದ್ದಾರೆ. ಇದರೊಂದಿಗೆ ಹಿರಿಯ ಸದಸ್ಯ ಹಾಗೂ ಹಿಂದೆ ಪುರಸಭೆ ಅಧ್ಯಕ್ಷರಾಗಿರುವ ಎಸ್.ಕೆ. ಪೀರಜಾದೆ ಅವರ ಹೆಸರು ಅನುಭವದ ಆಧಾರದಲ್ಲಿ ಮುನ್ನಡೆಯಲ್ಲಿದೆ.ಕಾಂಗ್ರೆಸ್ ಬಹುಮತವಿದ್ದರೂ ಈಗಾಗಲೇ ಎಲ್ಲ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ.

ಎರಡು ಅವಧಿ: ಈಗ ಮಹಿಳೆಯರಲ್ಲಿ ರಾಧಿಕಾ ದೇಶಪಾಂಡೆ ಹಾಗೂ ಮಮತಾ ಆರೆಗೊಪ್ಪ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿ ಪೈಪೋಟಿಯಲ್ಲಿದ್ದು, ಅನಿವಾರ್ಯವಾದರೆ ಇರುವ ೧೨ ತಿಂಗಳನ್ನು ಎರಡು ಅವಧಿ ಮಾಡಬೇಕಾದ ಅನಿವಾರ್ಯತೆಯೂ ಹೈಕಮಾಂಡಗಿದೆ.ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೇನೆ. ಎರಡನೇ ಬಾರಿ ಸದಸ್ಯಳಾಗಿದ್ದೇನೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನೇ ಪರಿಗಣಿಸಬೇಕು. ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ ಪುರಸಭೆ ಸದಸ್ಯೆ ಮಮತಾ ಆರೆಗೊಪ್ಪ ಹೇಳುತ್ತಾರೆ. ಹಾನಗಲ್ಲ ಪುರಸಭೆಯಲ್ಲಿ ಕಾಂಗ್ರೆಸ್ ಬಹುಮತವಿದೆ. ಹಿರಿಯರ ಸಮಿತಿಗೆ ಅಧ್ಯಕ್ಷರ ಆಯ್ಕೆಯ ಜವಾಬ್ದಾರಿ ನೀಡಲಾಗಿದೆ. ಅವರು ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ಎಲ್ಲರಿಗೂ ಒಪ್ಪಿತವಾಗುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಶಾಸಕ ಶ್ರೀನಿವಾಸ ಮಾನೆ ಹೇಳಿದರು.