ದೀಪಾವಳಿ ಹಬ್ಬಕ್ಕೆ ಮಣ್ಣಿನ ದೀಪಗಳಿಗೆ ಹೆಚ್ಚಿದ ಬೇಡಿಕೆ

| Published : Oct 20 2025, 01:02 AM IST

ದೀಪಾವಳಿ ಹಬ್ಬಕ್ಕೆ ಮಣ್ಣಿನ ದೀಪಗಳಿಗೆ ಹೆಚ್ಚಿದ ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೇಡಿಮಣ್ಣಿನಿಂದ ತಯಾರಿಸಿದ ಬಣ್ಣದ ಹಣತೆ ಹಾಗೂ ದೀಪಾಲಂಕಾರ ವಸ್ತುಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ್ದು, ಖರೀದಿ ಜೋರಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿ ನಿಷೇಧ ಮಾಡಿದ್ದರಿಂದ ಹೆಣ್ಣು ಮಕ್ಕಳು ಕೇವಲ ಮಣ್ಣಿನ ಹಣತೆ ಹಚ್ಚಿ ದೀಪಾವಳಿ ಆಚರಿಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಎಲ್ಲೆಡೆ ಮಣ್ಣಿನ ದೀಪಕ್ಕೆ ಬೇಡಿಕೆ ಬಂದಿದೆ.

ಪಟ್ಟಣದ ಅಂಗಡಿಗಳಲ್ಲಿ ಮಣ್ಣಿನಿಂದ ತಯಾರಿಸಿದ ತರಹೇವಾರಿ ದೀಪಗಳು, ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಸಿದ್ದಗೊಂಡಿವೆ. ದೀಪಗಳ ವ್ಯಾಪಾರ ಭರ್ಜರಿಯಾಗಿ ನಡೆಯುವ ನಿರೀಕ್ಷೆ ವರ್ತಕರದ್ದಾಗಿದೆ.

ಹೊರರಾಜ್ಯದಿಂದ ಬಂದ ದೀಪಗಳು:ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಭರಾಟೆ ಜೋರಾಗಿರುವ ವೇಳೆಯಲ್ಲಿ ಜೇಡಿಮಣ್ಣಿನಿಂದ ತಯಾರಿಸಿದ ದೀಪಗಳು ಆಕರ್ಷಣೆ ಮಾಡುತ್ತಿವೆ. ರಾಜಸ್ಥಾನದ ಜೋಧ್‍ಪುರದಿಂದ ದೀಪಾಲಂಕಾರ ವಸ್ತುಗಳನ್ನು ತಂದು ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ವಿವಿಧ ಬಗೆಯ ದೀಪಗಳು:

ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ವಿನ್ಯಾಸದಿಂದ ತಯಾರಿಸಿದ ದೀಪಗಳನ್ನು ಮಾರಾಟಕ್ಕೆ ಇಡಲಾಗಿದೆ. ತೆಂಗಿನ ಕಾಯಿ ಮಾದರಿ, ತುಳಸಿಕಟ್ಟೆ, ವೃಂದಾವನ, ತಟ್ಟೆಯಲ್ಲಿ ಹಣತೆ, ಗಾಳಿ ಬಂದಾಗ ಆರಿ ಹೋಗದಂತೆ ಪುರಾತನ ಮಾದರಿಯ ಲ್ಯಾಂಪ್ ರೀತಿಯಲ್ಲಿ ದೀಪಗಳನ್ನು ಮಾರಾಟಕ್ಕೆ ಇಡಲಾಗಿದೆ.

ಕೈಗೆಟುಕುವ ದರ:

ಮಣ್ಣಿನ ದೀಪಗಳ ಜೊತೆಗೆ ಪಿಂಗಾಣಿ ದೀಪಗಳು, ದೀಪಾವಳಿ ಹಬ್ಬಕ್ಕೆ ಅಗತ್ಯ ಇರುವ ಮನೆಯ ಅಲಂಕಾರಿಕ ವಸ್ತುಗಳು 25 ರೂ.ನಿಂದ ಪ್ರಾರಂಭವಾಗಿ 150 ರು.ಗಳಲ್ಲಿ ದೊರೆಯುತ್ತಿವೆ. ಮಧ್ಯಮ ವರ್ಗದವರು, ಅನುಕೂಲಸ್ಥರು ಈಗಾಗಲೇ ಮಣ್ಣಿನ ವಸ್ತು ಖರೀದಿಸಲು ಮುಂದಾಗಿದ್ದಾರೆ.

ಕೋಟ್...............

ಸರ್ಕಾರ ಪರಿಸರ ಮಾಲಿನ್ಯ ಮಾಡುವ ಪಟಾಕಿ ನಿಷೇಧ ಮಾಡಿ ಹಸಿರು ಪಟಾಕಿಗಳನ್ನು ಹಚ್ಚುವಂತೆ ಆದೇಶಿಸಿರುವುದು ಸ್ವಾಗತಾರ್ಹ. ಈ ಬಾರಿ ಮಕ್ಕಳಿಗೆ ಪಟಾಕಿ ಬದಲಾಗಿ ಮಣ್ಣಿನ ಹಣತೆ ಬೆಳಗಿಸಿ, ಮನೆ ಮುಂದೆ ಅಲಂಕಾರ ಮಾಡಿಸಿ, ಸಂಭ್ರಮದಿಂದ ದೀಪಾವಳಿ ಆಚರಿಸುತ್ತೇವೆ.

-ನಳಿನಾ, ಗೃಹಿಣಿ

ಕೋಟ್.............

ದೀಪಾವಳಿ ಹಬ್ಬದಂದು ಜೇಡಿ ಮಣ್ಣಿನಿಂದ ತಯಾರಿಸಿದ್ದ ಬಣ್ಣ ಬಣ್ಣದ ಹಣತೆಗಳು ಮಾರುಕಟ್ಟೆಯಲ್ಲಿ ಆಕರ್ಷಣೆ ಮಾಡುತ್ತಿವೆ. ಸ್ವದೇಶಿ ದೀಪ ಖರೀದಿಸಿ ಕುಂಬಾರಿಕೆ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು.

-ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಹಿಂದೂ ಜಾಗರಣಾ ವೇದಿಕೆ

ಪೋಟೋ 1 & 2 :

ಮಾರಾಟಕ್ಕೆ ಸಿದ್ದವಾಗಿರುವ ಮಣ್ಣಿನ ದೀಪಗಳು.