ಸಾರಾಂಶ
ಸೊರಬ ಪಟ್ಟಣದಲ್ಲಿ ಮಾತೃಶ್ರೀ ನವೋದಯ ಮತ್ತು ಮೊರಾರ್ಜಿ ಕೋಚಿಂಗ್ ಸೆಂಟರ್‌ನಲ್ಲಿ ಪರೀಕ್ಷಾ ತರಬೇತಿ ಪಡೆದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೌರವಿಸಿ, ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸೊರಬ
ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರಯುತ ಗುಣಗಳನ್ನು ಬಿತ್ತಿದಾಗ ದೇಶದ ಅದರ್ಶಮಯ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಶಂಕರ್ ಶೇಟ್ ಹೇಳಿದರು.ಪಟ್ಟಣದ ಚಾಮರಾಜಪೇಟೆಯ ಮಾತೃಶ್ರೀ ನವೋದಯ ಮತ್ತು ಮೊರಾರ್ಜಿ ಕೋಚಿಂಗ್ ಸೆಂಟರ್‌ನಲ್ಲಿ ಪರೀಕ್ಷಾ ತರಬೇತಿ ಪಡೆದು ಆಯ್ಕೆಯಾಗಿ ಸಾಧನಗೈದ ವಿದ್ಯಾರ್ಥಿ ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರಂತರ ಅಧ್ಯಯನ ಕಠಿಣ ಪರಿಶ್ರಮವನ್ನು ಅಳವಡಿಸಿಕೊಂಡಾಗ ಮತ್ತು ಸಾಧನೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಹಾಗೂ ಪೋಷಕರ ಮೇಲಿದೆ. ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಿದಾಗ ಮಕ್ಕಳಲ್ಲಿ ಸಾಧಿಸುವ ಛಲ ಇಮ್ಮಡಿಗೊಳ್ಳುತ್ತದೆ. ಪುಸ್ತಕ ಮತ್ತು ಆಹಾರ ಒಂದಕ್ಕೊಂದು ಪೂರಕ ಎಂದರು.ಮಾತೃಶ್ರೀ ಸಂಸ್ಥೆಯ ಮುಖ್ಯಸ್ಥ ಹಾಗೂ ಶಿಕ್ಷಕ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಾತೃಶ್ರೀ ಸಂಸ್ಥೆ ಹಲವು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ನಗರ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಏಕೈಕ ಉದ್ದೇಶದಿಂದ ನವೋದಯ ಮತ್ತು ಮೊರಾರ್ಜಿ ಪರೀಕ್ಷೆ ಬರೆಯುಲು ತರಬೇತಿ ಸಂಸ್ಥೆ ಯನ್ನು ಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪೋಷಕರಾದ ಸೋಮೇಶ್, ವಿಶ್ವನಾಥ್ ಬಿಳಾಗಿ, ಸತೀಶ್, ಪುಟ್ಟರಾಜ್, ಪುಷ್ಪಾ, ಅಶೋಕ್, ಧರ್ಮೇಂದ್ರ, ಗಂಧರ್ವ ಸೇರಿದಂತೆ ಮೊದಲಾದವರಿದ್ದರು. ಕುಮಾರಿ ಮಾನ್ಯ ಪ್ರಾರ್ಥಿಸಿದರು. ರಾಜೇಂದ್ರ ಸ್ವಾಗತಿಸಿ, ಮಹೇಶ್ ಖಾರ್ವಿ ನಿರೂಪಿಸಿ, ವಿನಯ್ ವಂದಿಸಿದರು.