ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮರ ಹೇಗೆ ನಿಸ್ವಾರ್ಥವಾಗಿರುತ್ತದೆಯೋ ಹಾಗೇ ನಾವು ಸಹ ನಿಸ್ವಾರ್ಥ ಗುಣ ಮೈಗೂಡಿಸಿಕೊಂಡರೇ ಇಡೀ ಸಮಾಜಕ್ಕೆ ಉತ್ತಮ ಕೊಡುಗೆ ಸಲ್ಲಿಸಲು ಸಾಧ್ಯ ಎಂದು ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅರಣ್ಯ ಇಲಾಖೆ, ಜನನಿ ಪೂರ್ವ ಪ್ರಾಥಮಿಕ ಶಾಲೆ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಪತ್ರಿಕೆ ಶನಿವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಒಳ್ಳೆಯ ಗುಣ ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ನಮ್ಮದಾಗುತ್ತದೆ ಎಂದರು.ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಮಾಡುವ ಕಾಳಜಿ ಪ್ರತಿಯೊಬ್ಬರಲ್ಲಿಯೂ ಬರುವಂತಾಗಬೇಕು. ಅಂದಾಗ ಮಾತ್ರ ಉತ್ತಮ ಪರಿಸರ ಸಿಗುವ ಜೊತೆಗೆ ವನ್ಯ ಸಂಪತ್ತು ಬೆಳೆಸಲು ಪೂರಕವಾಗುತ್ತದೆ. ಪರಿಸರ ಸಂರಕ್ಷಣೆ ಮಾಡುವ ಕಾಳಜಿ ಎಲ್ಲರಲ್ಲಿಯೂ ಬರುವಂತಾಗಬೇಕು ಎಂದು ತಿಳಿಸಿದರು. ಅರಣ್ಯ ಇಲಾಖೆಯ ತಾಲೂಕಾಧಿಕಾರಿ ಪ್ರಶಾಂತ ಗಾಣಿಗೇರ ಮಾತನಾಡಿ, ನಾಗರಿಕತೆ ಇತಿಹಾಸವನ್ನು ಅವಲೋಕನ ಮಾಡಿದಾಗ ಮನುಷ್ಯ ನಿಸರ್ಗ ದೇವರಿಗೆ ಮೊದಲ ಪೂಜೆ ಮಾಡಿದ್ದನ್ನು ನೋಡುತ್ತೇವೆ. ನಿಸರ್ಗದಲ್ಲಿ ದೇವರು ಇದ್ದಾನೆಂದು ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಪ್ರವಚನಯುದ್ದಕ್ಕೂ ಹೇಳುತ್ತಿದ್ದರು. ಇದು ನಿಸರ್ಗ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ಹಸಿರೇ ಉಸಿರು ಎಂಬುವುದರಲ್ಲಿ ನಮ್ಮ ಉಸಿರು ಹಸಿರಿನ ಮೇಲೆ ನಿಂತಿದೆ ತಿಳಿದುಕೊಳ್ಳಬಹುದು. ಅರಣ್ಯ ಹಾಗೂ ವನ್ಯ ಸಂಪತ್ತು ಸಂರಕ್ಷಣೆ ಮಾಡುವಲ್ಲಿ ಎಲ್ಲರ ಪಾತ್ರವಿದೆ. ಇದು ಮೂಲಭೂತ ಕರ್ತವ್ಯವಾಗದೇ ಇದು ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ಹುಟ್ಟುಹಬ್ಬದ ನೆಪದಲ್ಲಿ ಕೇಕ್ ಕತ್ತರಿಸುವ ಬದಲಾಗಿ ಗಿಡ ಬೆಳೆಸುವ ಸಂಸ್ಕ್ರತಿ ಬರಬೇಕಾಗಿದೆ. ಅಂದಾಗ ಪರಿಸರ ಬೆಳೆಯಲು ಪೂರಕವಾಗುತ್ತದೆ ಎಂದರು.ನಾವು ಹಣ, ಒಡವೆ, ಮನೆ ಮಾತ್ರ ಸಂಪತ್ತು ಎಂಬುವುದನ್ನು ಭಾವಿಸದೇ ಅರಣ್ಯ,ವನ್ಯ ಸಂಪತ್ತು ಇದೆ ಎಂಬುವುದನ್ನು ಅರಿತುಕೊಳ್ಳಬೇಕು. ಚಿತ್ತಾ ಎಂಬ ಸಂತತಿ ನಾಶವಾಗಿದೆ. ಇಂದು ಇದನ್ನು ನಾವೆಲ್ಲರೂ ಚಿತ್ರದಲ್ಲಿ ಮಾತ್ರ ನೋಡುವಂತಾಗಿದೆ. ಚಿತ್ತಾ ಸಂತತಿ ಬೆಳೆಸಲು ನಬೀಬಿಯಾದಿಂದ 10 ಚಿತ್ತಾ ಬಳುವಳಿಯಾಗಿ ಪಡೆದುಕೊಂಡು ಇದರ ಸಂತತಿ ಬೆಳೆಸಲಾಗುತ್ತಿದೆ. ವನ್ಯಜೀವಿಗಳು ಪ್ರಕೃತಿಗೆ ಬಹಳ ಮುಖ್ಯವಾಗಿದೆ ಎಂದರು.ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ, ಮಕ್ಕಳು ಚಿತ್ರಕಲೆಯಲ್ಲಿ ಭಾಗವಹಿಸಿದರೆ ಅವರಲ್ಲಿ ಸೃಜನಶೀಲತೆ, ವಿಚಾರಶಕ್ತಿ, ಜ್ಞಾಪಕ ಶಕ್ತಿ ಬರುವ ಜೊತೆಗೆ ದಣಿವು ನಿವಾರಣೆ ಆಗುತ್ತದೆ. ಇಂತಹ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಒಳ್ಳೆಯ ಬೆಳವಣಿಗೆಯಾಗುವ ಜೊತೆಗೆ ಜ್ಞಾನಸಂಪತ್ತು ಅಭಿವೃದ್ಧಿ ಪಡಿಸಿಕೊಳ್ಳುವಂತಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಅನಂತ ಪಾಕಿ, ಜನನಿ ಪೂರ್ವ ಪ್ರಾಥಮಿಕ ಶಾಲೆಯ ಉಪಾಧ್ಯಕ್ಷ ಸಾಹೇಬಗೌಡ ದೊಡಮನಿ(ಯಾಳವಾರ), ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆಯ ಅಧ್ಯಕ್ಷ ಉಮೇಶ ಕವಲಗಿ, ಬಸವೇಶ್ವರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ರಮೇಶ ಪೂಜಾರಿ, ಮಹಾಂತೇಶ ಝಳಕಿ ಇತರರು ಇದ್ದರು.
ಕನ್ನಡಪ್ರಭದ ತಾಲೂಕು ಹಿರಿಯ ವರದಿಗಾರ ಬಸವರಾಜ ನಂದಿಹಾಳ ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಪ್ರಕಾಶ ಮನಹಳ್ಳಿ ನಿರೂಪಿಸಿದರು. ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ಎಸ್.ಸಿ.ಹೂಗಾರ, ಕೃಷ್ಣಾ ಬಡಿಗೇರ,ಜಿ.ಸಿ.ಸಬರದ ಕಾರ್ಯನಿರ್ವಹಿಸಿದರು. ಬಹುಮಾತ ವಿಜೇತರು:
8ನೇ ತರಗತಿ ವಿಭಾಗದಲ್ಲಿ ಸ್ಥಳೀಯ ನಂದಿ ಪ್ರೌಢಶಾಲೆಯ ವಿದ್ಯಾರ್ಥಿ ಗುರನಾಥ ಲಮಾಣಿ ಪ್ರಥಮ, ಬಸವ ಆಂಗ್ಲ ಮಾಧ್ಯಮ ಶಾಲೆಯ ಸಾಕ್ಷಿ ಹಡಪದ ದ್ವಿತೀಯ, ಬಸವೇಶ್ವರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಶ್ರೀನಿಧಿ ಹೂಗಾರ ತೃತೀಯ.9ನೇ ತರಗತಿ ವಿಭಾಗದಲ್ಲಿ ಉಕ್ಕಲಿಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿನಾಯಕ ಪ್ರಥಮ, ಬಸವೇಶ್ವರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಸ್ನೇಹಾ ಚಿಂಚೋಳಿ ದ್ವಿತೀಯ, ಬಸವ ಆಂಗ್ಲ ಮಾಧ್ಯಮ ಶಾಲೆಯ ಅನನ್ಯ ಬಗಲಿ ತೃತೀಯ.
10ನೇ ತರಗತಿ ವಿಭಾಗದಲ್ಲಿ ಬಸವೇಶ್ವರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಈಶ್ವರಿ ಬೋರವತ ಪ್ರಥಮ, ಉಕ್ಕಲಿಯ ಇಂಗ್ಲಿಷ್ಮಾಧ್ಯಮ ಪ್ರೌಢಶಾಲೆಯ ಶ್ರೇಯಾ ಇಂಗನಾಳ ದ್ವಿತೀಯ, ಹೂವಿನಹಿಪ್ಪರಗಿಯ ಪರಿವರ್ತನೆ ವಿದ್ಯಾಮಂದಿರದಲ ವೈಷ್ಣವಿ ತೃತೀಯ ಸ್ಥಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳ ಸಮಾಧಾನಕ ಬಹುಮಾನ ವಿತರಿಸಲಾಯಿತು.ಚಿತ್ರ ಬಿಡಿಸುವ ಮಕ್ಕಳು ಇಡೀ ಪರಿಸರ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಪರಿಸರ, ವನ್ಯಸಂಪತ್ತು ಸಂರಕ್ಷಣೆಯಲ್ಲಿ ಎಲ್ಲರ ಪಾತ್ರ ಮುಖ್ಯವಾಗಿದೆ. ಈ ದಿಶೆಯಲ್ಲಿ ಈಚೆಗೆ ನಮ್ಮನ್ನು ಅಗಲಿದ ಸಾಲುಮರದ ತಿಮ್ಮಕ್ಕ ಪರಿಸರಕ್ಕೆ ನೀಡಿದ ಕೊಡುಗೆ ಮರೆಯುವಂತಿಲ್ಲ. ಅರಣ್ಯ ಇಲಾಖೆ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಕನ್ನಡಪ್ರಭ ವನ್ಯಜೀವಿಗಳ ಸಂರಕ್ಷಣೆ ಅಭಿಯಾನ ಅಂಗವಾಗಿ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿರುವುದು ಶ್ಲಾಘನೀಯ.
-ಸಿದ್ದಲಿಂಗ ಸ್ವಾಮೀಜಿ, ವಿರಕ್ತಮಠ ಬಸವನಬಾಗೇವಾಡಿ.ಇಂದು ವನ್ಯಜೀವಿಗಳ ಸ್ಥಳವನ್ನು ನಾವು ಆಕ್ರಮಿಸಿಕೊಳ್ಳುತ್ತಿರುವ ಪರಿಣಾಮ ಅವರು ನಾವು ವಾಸಿಸುವ ಸ್ಥಳ ಆಕ್ರಮಿಸುವಂತಾಗಿದೆ. ವನ್ಯಜೀವಿಗಳ ಸಂರಕ್ಷಣೆಯಾಗದೇ ಹೋದರೆ ಮುಂಬರುವ ಜನಾಂಗಕ್ಕೆ ಕೇವಲ ಚಿತ್ರದಲ್ಲಿ ತೋರಿಸುವ ಪ್ರಸಂಗ ಬರುತ್ತದೆ. ಇಂತಹ ದುಃಸ್ಥಿತಿಗೆ ಹೋಗಬಾರದು ಎಂದರೇ ವನ್ಯ ಜೀವಿಗಳ ಸಂರಕ್ಷಣೆ ಗಮನಹರಿಸಬೇಕಿದೆ.-ಪ್ರಶಾಂತ ಗಾಣಿಗೇರ,
ಅರಣ್ಯ ಇಲಾಖೆಯ ತಾಲೂಕಾಧಿಕಾರಿ.ಇಂದು ದೆಹಲಿಯಲ್ಲಿ ಕಲುಷಿತ ವಾತಾವರಣ ಉಂಟಾದ ಪರಿಣಾಮ ಶಾಲಾ ಮಕ್ಕಳನ್ನು ಆಟಕ್ಕೆ ಆಡಲು ಅವಕಾಶ ಇಲ್ಲದೇ ಇರುವ ದುಃಸ್ಥಿತಿ ಬಂದಿದೆ. ಇದು ನಾವು ಪರಿಸರವನ್ನು ಎಷ್ಟು ಕಲುಷಿತಗೊಳಿಸುತ್ತಿದ್ದೇವೆ ಎಂಬುವುದಕ್ಕೆ ತಾಜಾ ಉದಾಹರಣೆಯಾಗಿ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಪರಿಸರ, ಅರಣ್ಯ, ವನ್ಯ ಸಂಪತ್ತು ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಸಮಾಜಕ್ಕೆ ಸುದ್ದಿ ಕೊಡುವ ಜೊತೆಗೆ ಇಂತಹ ಅಭಿಯಾನವನ್ನು ಕನ್ನಡಪ್ರಭವು ಹಮ್ಮಿಕೊಂಡಿರುವುದು ಶ್ಲಾಘನೀಯ.-ವಸಂತ ರಾಠೋಡ, ಕ್ಷೇತ್ರಶಿಕ್ಷಣಾಧಿಕಾರಿ.;Resize=(128,128))
;Resize=(128,128))
;Resize=(128,128))
;Resize=(128,128))