ಎಚ್‌ಬಿಸಿ ಇಇ ಆಗಿ ಹುಣಸಿಕಟ್ಟಿ ಅಧಿಕಾರ ಸ್ವೀಕಾರ

| Published : Jun 02 2024, 01:46 AM IST

ಸಾರಾಂಶ

ಇಇ ಎಸ್.ಜಿ.ಶ್ರೀನಾಥ ಅವರು ನಿವೃತ್ತ ಹೊಂದಿದ ಪ್ರಯುಕ್ತ ತೆರವಾದ ಈ ಸ್ಥಾನಕ್ಕೆ ಹಿಪ್ಪರಗಿ ಬ್ಯಾರೇಜ್ ಅಥಣಿ ವಿಭಾಗೀಯ ಕಚೇರಿಯ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರ(ಇಇ)ರಾಗಿ ಪ್ರವೀಣ ಹುಣಸಿಕಟ್ಟಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರವೀಣ ಹುಣಸಿಕಟ್ಟಿ ಅಧಿಕಾರ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಬಾಗಿ, ಎಇಇ ರಾಜೇಂದ್ರ ರೋಡಗಿ, ವೃತ್ತ ಕಚೇರಿಯ ತಾಂತ್ರಿಕ ಸಹಾಯಕ ದೀಪಕ ಕಾಂಬಳೆ, ಎಇ ಅಂಬಣ್ಣ, ಗುತ್ತಿಗೆದಾರರಾದ ಮಹೇಶ ಮಟಗಾರ, ಯಲ್ಲಪ್ಪ ಡಪರಿ, ನರಸಿಂಹ ಚಿಪ್ಪರಗಿ, ಶಿವಾನಂದ ಸುಟ್ಟಟ್ಟಿ, ರಾಜಮನೆ, ರವಿ ರಾಠೋಡ, ರಫೀಕ್ ತರಡೆ, ಸಂಜೀವ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.ಪ್ರವೀಣ ಹುಣಸಿಕಟ್ಟಿ ಅವರು ರಾಜ್ಯದ ಅತ್ಯಂತ ಪ್ರಭಾವಿ ದಿನಪತ್ರಿಕೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರತಿಷ್ಠಿತ ಸುವರ್ಣ ಕನ್ನಡಿಗ 2024 ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಈ ಅಧಿಕಾರವಧಿಯಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದ್ದು ಆಡಳಿತಾವಧಿಯಲ್ಲಿ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ಈ ಮೂಲಕ ಜನಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಲಾಗುವುದು. ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಲಾಗುವುದು.

- ಪ್ರವೀಣ ಹುಣಸಿಕಟ್ಟಿ,

ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರರು.