ಸಾರಾಂಶ
ಗದಗ: ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ ಯೂನಿಯನ್ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಎದುರು ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.೨೦೦೪ ಜ. ೧ರ ಆನಂತರ ನೇಮಕಾತಿಯಾದ ಎಲ್ಲ ರೈಲ್ವೆ ಕಾರ್ಮಿಕರಿಗೆ ಹೊಸ ಪೆನ್ಸನ್ ಪದ್ಧತಿಯನ್ನು ರದ್ದು ಮಾಡಿ ಹಳೆಯ ಪೆನ್ಶನ್ ಪದ್ಧತಿ ಜಾರಿ ಮಾಡಬೇಕೆಂದು ಒತ್ತಾಯಿಸಲಾಯಿತು.ಈ ವೇಳೆ ಸೌತ್ ವೆಸ್ಟನ್ ರೈಲ್ವೆ ಮಜ್ದೂರ ಯೂನಿಯನ್ ಕಾರ್ಯದರ್ಶಿ ನೂರಅಹ್ಮದ ಮಾತನಾಡಿ, ಈ ಹೊಸ ಪಿಂಚಣಿ ಯೋಜನೆಯಿಂದ ನಮ್ಮ ರೈಲ್ವೆ ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತಿದೆ. ನಿವೃತ್ತಿಯಾದ ಮೇಲೆ ನಮ್ಮ ಜೀವನ ಕಷ್ಟಕರವಾಗುತ್ತದೆ. ಅಲ್ಲದೇ ನಮ್ಮ ಆರೋಗ್ಯಕ್ಕಾಗಿ ನಮ್ಮ ಕುಟುಂದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಈ ಹೊಸ ಪಿಂಚಣಿಯಿಂದ ಬಹಳ ತೊಂದರೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಯೂನಿಯನ್ ಉಪಾಧ್ಯಕ್ಷ ಮಂಜುನಾಥ ಬಾಗಲಕೋಟಿ ಮಾತನಾಡಿ, ಹಳೆಯ ಪಿಂಚಣಿ ಯೋಜನೆಯಲ್ಲಿ ನಿವೃತ್ತಿದಾರರಿಗೆ ಆರ್ಥಿಕ ಸುರಕ್ಷತೆ ಇತ್ತು. ಹೊಸ ಪಿಂಚಣಿ ಯೋಜನೆಯಿಂದ ನಿವೃತ್ತರಿಗೆ ಆರ್ಥಿಕವಾಗಿ ಬಹಳ ಸಂಕಷ್ಟವಾಗುತ್ತದೆ. ನಿವೃತ್ತಿದಾರರ ಕುಟುಂಬಕ್ಕೆ ಜೀವನ ನಡೆಸಲು ಸಾಧ್ಯವಾಗವಾದಂತಹ ಪರಿಸ್ಥಿತಿ ಇದೆ. ಕಾರಣ ಹೊಸ ಪಿಂಚಣಿ ಯೋಜನೆಯನ್ನು ಕೈ ಬಿಟ್ಟು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವವರಿಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.ಸತ್ಯಾಗ್ರಹದಲ್ಲಿ ನಿವೃತ್ತ ನೌಕರದಾರರಾದ ದೀಪಕ ಗಾಗಡೆ, ಎಂ.ಎಂ. ಬಾಗಲಕೋಟ, ಸುರೇಶ ಎಚ್. ಮುಧೋಳ, ಯು. ಬಾಬು ರಂಜನ, ಅರ್ಶೀದ್ ವಾಡನಕಟ್ಟಿ, ರಾಮಕೃಷ್ಣ ಕೊರವಾರ, ಅರವಿಂದ ಕುಮಾರ, ನವೀನಕುಮಾರ ಬಾಗಲಕೋಟೆ, ಉಮೇಶ ಕುರಿ, ವಿಶ್ವನಾಥ ಎಚ್., ಅನ್ನಪೂರ್ಣಾ ಕಟ್ಟಿಮನಿ, ಜಯಶ್ರೀ ತುರಕಾಣಿ, ಜಯಶ್ರೀ ಗಾಜಿ ಹಾಗೂ ನೂರಾರು ನೌಕರರು ಉಪಸ್ಥಿತರಿದ್ದರು.