ನುಗ್ಗೇಹಳ್ಳಿ ನಾಡಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ

| Published : Aug 20 2025, 01:30 AM IST

ನುಗ್ಗೇಹಳ್ಳಿ ನಾಡಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಉಪತಹಸೀಲ್ದಾರ್ ಪೂರ್ಣಿಮಾ, ವ್ಯಾಪಾರಕ್ಕೋಸ್ಕರ ಬಂದ ಬ್ರಿಟೀಷರು ನಮ್ಮ ದೇಶವನ್ನು ಆಳಿದರು. ಅವರಿಂದ ಸ್ವಾತಂತ್ರ್ಯ ಪಡೆಯಲು ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಬಾಲಗಂಗಾಧರ್ ನಾಥ ತಿಲಕ್, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಮುಂತಾದ ಹಲವಾರು ನಾಯಕರು ಹೋರಾಟ ನಡೆಸಿದರು. ಅವರನ್ನು ನೆನೆಯುವ ಮೂಲಕ ಗಣ್ಯರನ್ನು ಗೌರವಿಸಬೇಕು. ದೇಶದ ಶಾಂತಿ ನೆಮ್ಮದಿಗೋಸ್ಕರ ಎಲ್ಲಾ ಜನಾಂಗದವರಿಗೂ ಸಮಾನತೆಯ ನ್ಯಾಯ ಒದಗಿಸುವ ಮೂಲಕ ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಇಲ್ಲಿನ ನಾಡಕಚೇರಿ ಆವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಉಪ ತಹಸೀಲ್ದಾರ್ ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿದರು.

ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಉಪತಹಸೀಲ್ದಾರ್ ಪೂರ್ಣಿಮಾ, ವ್ಯಾಪಾರಕ್ಕೋಸ್ಕರ ಬಂದ ಬ್ರಿಟೀಷರು ನಮ್ಮ ದೇಶವನ್ನು ಆಳಿದರು. ಅವರಿಂದ ಸ್ವಾತಂತ್ರ್ಯ ಪಡೆಯಲು ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಬಾಲಗಂಗಾಧರ್ ನಾಥ ತಿಲಕ್, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಮುಂತಾದ ಹಲವಾರು ನಾಯಕರು ಹೋರಾಟ ನಡೆಸಿದರು. ಅವರನ್ನು ನೆನೆಯುವ ಮೂಲಕ ಗಣ್ಯರನ್ನು ಗೌರವಿಸಬೇಕು. ದೇಶದ ಶಾಂತಿ ನೆಮ್ಮದಿಗೋಸ್ಕರ ಎಲ್ಲಾ ಜನಾಂಗದವರಿಗೂ ಸಮಾನತೆಯ ನ್ಯಾಯ ಒದಗಿಸುವ ಮೂಲಕ ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆರ್‌ಐ ಲತೇಶ್ ಕುಮಾರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಚ್‌ ಎಂ ನಟರಾಜ್, ಮುಖಂಡರಾದ ಬೆಳಗಳ್ಳಿ ಪುಟ್ಟಸ್ವಾಮಿ, ತೋಟಿ ನಾಗರಾಜ್, ಜಾವೇದ್, ಚಂದ್ರು, ಪಿಡಿಒ ಶಿವರಾಂ, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್, ಗೌಡಾಕಿ ಮಂಜುನಾಥ, ಮಂಜುನಾಥ್ ಸ್ವಾಮಿ, ಡೇರಿ ಮಂಜಣ್ಣ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಕುಮಾರ್, ಚಂದ್ರಭೂಷಣ್, ಅಕ್ಷಯ್ ಕುಮಾರ್, ಅಲೆಕ್ಸಾಂಡರ್, ಬಸಮ್ಮ, ಶಿವರತ್ನ, ಇತರರು ಹಾಜರಿದ್ದರು.