ಕೊಟ್ಟಮುಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

| Published : Aug 17 2025, 03:30 AM IST

ಸಾರಾಂಶ

79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಟ್ಟಮುಡಿಯ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಯ ಬಳಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಹೊದವಾಡ ಗ್ರಾಮದ ಕೊಟ್ಟಮುಡಿಯ ಕೆ ಎಂ ಜೆ, ಎಸ್ ವೈ ಎಸ್, ಎಸ್ ಎಸ್ ಎಫ್ ಶಾಖೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊಟ್ಟಮುಡಿಯ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಯ ಬಳಿ ಆಚರಿಸಲಾಯಿತು.

ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಂಸ ಹೆಚ್ ಎ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯ ಮೊಯಿದು , ಎಸ್ ವೈ ಎಸ್ ಕೊಟ್ಟಮುಡಿ ಶಾಖೆ ಉಪಾಧ್ಯಕ್ಷ ಮೈಸಿ ಕತ್ತಣೀರ, ಕಾರ್ಯದರ್ಶಿ ರಫೀಕ್ ಅಝ್ಹರಿ, ದ ಅವಾ ಕಾರ್ಯ ದರ್ಶಿ ಹಮೀದ್ ವಲಿಪುರ , ಕೊಡಗು ಜಿಲ್ಲಾ ಇಸಾಬ ಕಾರ್ಯದರ್ಶಿ ಬಷೀರ್, ಮಡಿಕೇರಿ ಝೋನ್ ಇಸಾಬ, ಕಾರ್ಯದರ್ಶಿ ಅಶ್ಕರ್ ಸಖಾಫಿ , ಕೆ ಎಂ ಜೆ ಉಪಾಧ್ಯಕ್ಷರಾದ ಆರ್ ಎಂ ಹಸೈನಾರ್, ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿ ಹಂಸ ಕೆ ಎ, ಮುಹಮ್ಮದ್, ಕೆ.ಎ,ಮೂಸಾನ್, ಮಮ್ಮು, ಹಸೈನಾರ್ ವಲಿಪುರ, ಹಂಸ ಬೀಟಿಬಾಣೆ, ಶುಹೈಬ್ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.