ಸ್ವಾತಂತ್ರ್ಯ ದಿನಾಚರಣೆ: ಬಿಜೆಪಿಯಿಂದ ವಿವಿಧ ಕಾರ್ಯಕ್ರಮ

| Published : Aug 10 2024, 01:31 AM IST

ಸಾರಾಂಶ

ಯುವ ಪೀಳಿಗೆಗೆ ದೇಶಪ್ರೇಮವನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಮನೆಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರು ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ.೧೧ರಿಂದ ೧೫ರ ವರೆಗೆ ಜಿಲ್ಲೆಯ ವಿವಿಧೆಡೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಕೊಡಗಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಶ್ರೇಮ ಬಿಜೆಪಿಯ ಸಿದ್ಧಾಂತವಾಗಿದೆ. ಯುವ ಪೀಳಿಗೆಗೆ ದೇಶಪ್ರೇಮವನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಮನೆಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರು ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಮಡಿಕೇರಿ ನಗರ, ಸೋಮವಾರಪೇಟೆ ಮಂಡಲ, ವಿರಾಜಪೇಟೆ ಮಂಡಲ ಮತ್ತು ಮಡಿಕೇರಿ ಗ್ರಾಮಾಂತರ ಮಂಡಲದಲ್ಲಿ ೧೧ರಿಂದ ೧೫ರ ವರೆಗೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಆ.೧೧, ೧೨, ೧೩ರಂದು ನಾಲ್ಕು ಮಂಡಲಗಳಲ್ಲಿ ಏಕಕಾಲದಲ್ಲಿ ಬೈಕ್ ಜಾಥಾ ಕಾರ್ಯಕ್ರಮ ನಡೆಯಲಿದೆ. ಆ.೧೨, ೧೩, ೧೪ರಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವೀರಾ ಸೇನಾನಿಗಳ ಪುತ್ಥಳಿಗಳನ್ನು ಸ್ವಚ್ಛಗೊಳಿಸಿ ಪುಷ್ಪನಮನ ಸಲ್ಲಿಸಲಾಗುವುದು. ಇದೇ ಸಂದರ್ಭ ಸ್ವಾತ್ವಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನು ಸನ್ಮಾನಿಸಲಾಗುವುದು. ಅಖಂಡ ಭಾರತವನ್ನು ವಿಭಜಿಸಿದ ಕರಾಳ ದಿನವಾದ ಆ.೧೪ರಂದು ಸಂವಾದ, ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.ಆಡಳಿತಕ್ಕೂ ಮುನ್ನ ಬಿಜೆಪಿ ಶೇ.೪೦ರಷ್ಟು ಭ್ರಷ್ಟಚಾರದಲ್ಲಿ ತೊಡಗಿದೆ ಎಂದು ಹೇಳುತ್ತ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ೧೦೦ಕ್ಕೆ ೧೦೦ರಷ್ಟು ಭ್ರಷ್ಟಚಾರದಲ್ಲಿ ತೊಡಗಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೂಡ ಹಗರಣ, ವಾಲ್ಮಿಕಿ ನಿಗಮದ ಹಗರಣವಾಗಿದೆ. ಇದರ ನಡುವೆ ಬೆಲೆ ಏರಿಕೆ ಬಿಸಿ ಬಡಜನರಿಂದ ಶ್ರೀಮಂತರಿಗೂ ತಟ್ಟುತ್ತಿದೆ ಎಂದು ಆರೋಪಿಸಿದ ಅವರು, ಆ.೧೦ರಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾವೇಶಕ್ಕೆ ಜಿಲ್ಲೆಯಿಂದ ೨-೩ ಸಾವಿರ ಕಾರ್ಯಕರ್ತರು ತೆರಳಿದ್ದೇವೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಸಿಎನ್‌ಡಿ ಲ್ಯಾಂಡ್‌ನ್ನು ಸರ್ಕಾರ ರಕ್ಷಿತಾರಣ್ಯ ಮಾಡಲು ಹೊರಡಿಸಿರುವ ಆದೇಶವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ ವಸತಿ ಹೀನರು ಸಿಎನ್‌ಡಿ ಲ್ಯಾಂಡ್‌ನಲ್ಲಿ ತೋಟ, ಮನೆಗಳನ್ನು ಕಟ್ಟಿಕೊಂಡು ನೆಮ್ಮಿಂದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇದನ್ನು ರಕ್ಷಿತಾರಣ್ಯ ಮಾಡಲು ಹೊರಟರೇ ಎಲ್ಲರು ಬೀದಿಪಾಲಾಗುತ್ತಾರೆ. ಅಲ್ಲದೇ, ಕಾಡುಪ್ರಾಣಿಗಳ ಹಾವಳಿ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಅರಣ್ಯ ಇಲ್ಲದ ಜಿಲ್ಲೆಯಲ್ಲಿ ಇಂತಹ ಯೋಜನೆ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ಈ ಆದೇಶವನ್ನು ಕೈಬಿಡದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ಪ್ರದಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ತಳೂರು ಕಿಶೂರ್, ಪ್ರಮುಖರಾದ ಜಗದೀಶ್ ರೈ, ಕವನ್ ಕಾವೇರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.