ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರಜಯ ಕರ್ನಾಟಕ ಸಂಘಟನೆ, ರಾಯಲ್ ಮೆಕಾನಿಕ್ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಂ.ಜೆ. ಕುಮಾರ್ ನಾಯಕ್ ಧ್ವಜಾರೋಹಣ ನೆರವೇರಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತ ಚಿಕ್ಕಮಳಲಿ ಮಹದೇವ್, ಬಿಟಿಎಂ ಕೊಪ್ಪಲು ಗ್ರಾಮದ ಶ್ರೀ ದೊಡ್ಡಮ್ಮತಾಯಿ ದೇವಾಲಯದ ಅರ್ಚಕ ಅಪ್ಪಾಜಿಗೌಡ, ಸೇನೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಮಾಜಿ ಯೋಧ ಸುಬ್ರಮಣಿ ನಾಯಕ್, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ನಿವೃತ್ತ ಶಿಕ್ಷಕರಾದ ನರಸಿಂಹಮೂರ್ತಿ, ನಾಗಣ್ಣಗೌಡ, ಕೃಷ್ಣ ನಾಯಕ್ , ನಾಗರಾಜ್, ಗೋವಿಂದೇಗೌಡ, ವಿರೂಪಾಕ್ಷ, ಆರೋಗ್ಯ ಇಲಾಖೆ ನಿವೃತ್ತ ನೌಕರ ಸೋಮಚಾರಿ, ಸೆಕ್ ಲೈನ್ ಮ್ಯಾನ್ ಶಿವಶಂಕರ್, ಬಿಸಿಎಂ ಇಲಾಖೆ ನಿವೃತ್ತ ನೌಕರ ರಾಮಸ್ವಾಮಿ, ಸರ್ಕಾರಿ ನಿವೃತ್ತ ನೌಕರರ ತಿಪ್ಪೇಸ್ವಾಮಿ ಹಾಗೂ ಪಾಪಣ್ಣನಾಯಕ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಜಯ ಕರ್ನಾಟಕ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ರೇವತಿ ಮಾತನಾಡಿದರುಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಂ.ಜೆ. ಕುಮಾರ್, ಪ್ರಧಾನ ಕಾರ್ಯದರ್ಶಿ ರುದ್ರೇಶ್, ರಾಯಲ್ ಮೆಕಾನಿಕ್ ಸಂಘದ ಅಧ್ಯಕ್ಷ ದಯಾನಂದ್, ಖಜಾಂಜಿ ಯೋಗೇಶ್ ಇದ್ದರು.