-ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ
---ಕನ್ನಡಪ್ರಭ ವಾರ್ತೆ ಹುಣಸಗಿ
ಸ್ವಾತಂತ್ರೋತ್ಸವ ಪ್ರತಿ ಭಾರತೀಯನ ಅಸ್ಮಿತೆ, ಅದೊಂದು ಭಾವನಾತ್ಮಕ ಹಬ್ಬ. ಇದರಲ್ಲಿ ಪ್ರತಿಯೊಬ್ಬರು ಭಾಗವಹಿಸುವುದು ಕರ್ತವ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಹೇಳಿದರು.ಅವರು ಪತ್ತಿನ ಸಹಕಾರ ಸಂಘ, ಹುಣಸಗಿ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಂದೇಮಾತರಂ ಗೀತೆಗೆ 150 ವರ್ಷ ತುಂಬಿದ ಕಾರಣ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಾರ್ಯಕ್ರಮದಲ್ಲಿ ಹೇಳುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು ಐತಿಹಾಸಿಕ ಎಂದರು. ಸ್ವತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸಬೇಕಾಗಿದೆ. ಜೊತೆಗೆ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು, ನಾವು ಸ್ವಾತಂತ್ರವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಬಾಪೂಗೌಡ ವಂದಲಿ, ವಿಜಯಲಕ್ಷ್ಮೀ ದೇಸಾಯಿ, ಲಲಿತಾ ವೈಲಿ, ಕಮಲಾ ಗದ್ದಗಿ, ಶಾಂತಗೌಡ ಅರಕೇರಿ, ಚಂದ್ರಶೇಖರ ದೇಸಾಯಿ, ಗುರುಲಿಂಗಣ್ಣ ಸಜ್ಜನ್, ಪದ್ಮಾವತಿ ಕುಲ್ಕರ್ಣಿ, ಅಮರೇಶ ವೈಲಿ, ಶರಣಬಸವ ಪಾಟೀಲ್, ನಾಗರಾಜ್ ಬಿರಾದಾರ ಮುಂತಾದವರಿದ್ದರು. ಮುಖ್ಯ ಕಾರ್ಯ ನಿರ್ವಾಹಕರಾದ ಮಹಾಂತೇಶ ಮುರಾಳ್ ಪೂಜೆ ನೆರವೇರಿಸಿದರು. ಲೆಕ್ಕಿಗ ಪ್ರಭು ನೂಲಿನ್ ನಿರೂಪಿಸಿ, ವೀರೇಶ್ ದೇಸಾಯಿ ಸ್ವಾಗತಿಸಿ, ಹರೀಶ್ ಹಂದಿಗನೂರ್ ವಂದಿಸಿದರು.ಫೋಟೊ
ಹುಣಸಗಿ ಪಟ್ಟಣ ಪತ್ತಿನ ಸಹಕಾರ ಸಂಘ ನಿ,ಹುಣಸಗಿ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.