ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಸಾವಿರಾರು ಮಂದಿ ದೇಶಭಕ್ತರ ತ್ಯಾಗ, ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ನಾವ್ಯಾರು ಮರೆಯಬಾರದು. ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಇದು ದೇಶವನ್ನು ಶ್ರೇಷ್ಠಗೊಳಿಸುವ ದಿನವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ಹೇಳಿದರು.ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿದರು.
ಇದೇ ವೇಳೆ ನಿವೃತ್ತ ಸೈನಿಕ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತುಬಿಜೆಪಿ ಹಿರಿಯ ಮುಖಂಡರಾದ ಎನ್ ಆರ್.ಲಕ್ಷ್ಮಿಕಾಂತ್, ಎಂಎಸ್. ರಾಘವೇಂದ್ರ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಕೇಶವಮೂರ್ತಿ, ಸೋಮಣ್ಣ, ರತ್ನಮ್ಮ, ಗೋವಿಂದಪ್ಪ ಮುಂತಾದವರು ಇದ್ದರು.
ಗಂಗಾ ಸಮೂಹ ವಿದ್ಯಾಸಂಸ್ಥೆ:ನಗರದ ಗಂಗಾ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಸ್ರೋ ವಿಜ್ಞಾನಿ ರೂಪ ಎಂ.ವಿ ಯವರು ಧ್ವಜಾರೋಹಣ ಮಾಡಿ ಮಾತನಾಡಿ ನಾವು ಮೊದಲು ಇಸ್ರೋದ ಸಿಬ್ಬಂದಿಯಾಗಿ ನೇಮಕೊಂಡಾಗ ಕಲಿಯುವುದು ತುಂಬಾ ಇತ್ತು. ಎ.ಪಿ.ಜೆ ಅಬ್ದುಲ್ ಕಲಾಂರಂತಹ ಹಿರಿಯ ವಿಜ್ಞಾನಿಗಳಿಂದ ಉಪಗ್ರಹಗಳ ಉಡಾವಣೆಗೆ ಸಂಬಂಧಪಟ್ಟ ಅನೇಕ ತಂತ್ರಜ್ಞಾನದ ಕೌಶಲ್ಯಗಳನ್ನು ಕಲಿತಿದ್ದು ಅವಿಸ್ಮರಣೀಯ. ರೈತರಿಗಾಗಿ ದೂರದರ್ಶನ ಉಪಗ್ರಹ ಉಡಾವಣೆ ಮಾಡಿದ್ದನ್ನು ವಿಶೇಷವಾಗಿ ಈ ಸಮಯದಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ ಎಂದರು.
ಆಕರ್ಷಕ ಪಥಸಂಚಲನದ ನಂತರ ದೇಶಭಕ್ತಿ ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಓಬಯ್ಯ, ಬೆಂಗಳೂರಿನ ಈಸ್ಟ್ ವೆಸ್ಟ್ ಉಪನ್ಯಾಸಕ ವೆಂಕಟೇಶ್, ಸಂಸ್ಥೆಯ ಪ್ರಾಚಾರ್ಯರುಗಳು, ಬೋಧಕ ವರ್ಗ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಇದ್ದರು.
ಮದ್ದಿಹಳ್ಳಿ:ತಾಲೂಕಿನ ಮದ್ದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಶಿಕ್ಷಕರ ಸತೀಶ್, ಸಹ ಶಿಕ್ಷಕರಾದ ನಾಗೇಶ್, ಕರಿ ಬಸಮ್ಮ, ಅಂಗನವಾಡಿ ಶಿಕ್ಷಕಿ ಜಯಮ್ಮನಿವೃತ್ತ ಶಿಕ್ಷಕ ವೆಂಕಟರಮಣಪ್ಪ ರಂಗಸ್ವಾಮಿ, ಆನಂದ , ಎಸ್ ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ , ಕರಿಯಣ್ಣ ನಾಗರಾಜ್, ಶ್ರೀರಾಮ್ ಜಯಣ್ಣ ಮುಂತಾದವರು ಹಾಜರಿದ್ದರು.ಅಧಿರ ಇಂಟರ್ ನ್ಯಾಷನಲ್ ಸ್ಕೂಲ್:
ತಾಲೂಕಿನ ಬ್ಯಾಡರಹಳ್ಳಿಯ ಅಧಿರ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು, ಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು.ಮನವಿ ಟ್ರಸ್ಟ್:
ಸ್ವಾತಂತ್ರ್ಯ ದಿನದ ಅಂಗವಾಗಿ ಮನವಿ ಟ್ರಸ್ಟ್ ವತಿಯಿಂದ ವೇದಾವತಿ ನಗರದ ಸರ್ಕಾರಿ ಶಾಲೆಯ ಎಲ್ ಕೆಜಿ, ಯುಕೆಜಿಯ 50 ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಮನವಿ ಟ್ರಸ್ಟ್ ಅಧ್ಯಕ್ಷೆ ಮಾನಸ ಮಂಜುನಾಥ್, ಶಾಲೆಯ ಶಿಕ್ಷಕರು, ಮಕ್ಕಳು ಹಾಜರಿದ್ದರು.ಎಸ್ ಜೆ ಆರ್ ಪ್ರೌಢಶಾಲೆ:
ನಗರದ ಎಸ್ ಜೆ ಆರ್ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.ಶ್ರೀ ಶಿವಮುನಿ ಸ್ವಾಮೀಜಿ, ಡಾ.ಜೆ.ಆರ್.ಸುಜಾತಾ, ಡಿ ತಿಮ್ಮಣ್ಣ, ಚೇತನ್, ಶಬೀನಾ,ಕೆಂಚಪ್ಪ, ಅಶ್ವಿನಿ ಮುಂತಾದವರು ಹಾಜರಿದ್ದರು.