ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ನಮ್ಮ ದೇಶವನ್ನು ಹಲವು ಸಾವಿರ ವರ್ಷಗಳಿಂದ ಸಾಧು ಸಂತರು ಧಾರ್ಮಿಕ ಚಿಂತನೆ ನಡೆಸಿ ಕಟ್ಟಿ ಬೆಳೆಸಿದ್ದಾರೆ. ಇಲ್ಲಿಯ ಧಾರ್ಮಿಕ ಸಾಂಸ್ಕೃತಿಕ ಚಿಂತನೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು.ಕರಾವಳಿ ಕೇಸರಿ ಸೇವಾ ಟ್ರಸ್ಟ್ ಬೆದ್ರ, ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ ೧೨ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ನಡೆದ ೪ನೇ ವರ್ಷದ ಶನೀಶ್ವರ ಪೂಜೆಯ ಧಾರ್ಮಿಕ ಸಭೆಯಲ್ಲಿ ಕರಾವಳಿ ಕೇಸರಿಯ ವತಿಯಿಂದ ನೀಡಲಾಗುವ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಉದ್ಯಮ ರತ್ನ ಪ್ರಶಸ್ತಿಯನ್ನು ಉದ್ಯಮಿ ರಂಜಿತ್ ಪೂಜಾರಿ ತೋಡಾರು ಅವರಿಗೆ ನೀಡಿ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಕರಾಟೆ ಪಟು ಮಾ. ಆರ್ಯನ್ ಶೆಟ್ಟಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಉಪನ್ಯಾಸಕ ಆದರ್ಶ್ ಗೋಖಲೆ ದಿಕ್ಸೂಚಿ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ನ್ಯಾಯವಾದಿ ಶರತ್ ಶೆಟ್ಟಿ, ಉದ್ಯಮಿಗಳಾದ ಸತ್ಯಪ್ರಕಾಶ್ ಹೆಗ್ಡೆ, ಸುರೇಂದ್ರ ಪೂಜಾರಿ ಕಂದಿರು, ಜಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರಾವಳಿ ಕೇಸರಿಯ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಅಧ್ಯಕ್ಷ ಸದಾನಂದ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಚಿದಾನಂದ ಪುತ್ರನ್ ವೇದಿಕೆಯಲ್ಲಿದ್ದರು.ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮ್‌ಕುಮಾರ್ ಮಾರ್ನಾಡ್, ಗಣೇಶ್ ಬಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಶಾಂತಾ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದಲ್ಲಿ ದರೆಗುಡ್ಡೆ ಶಾಲಾ ಅತಿಥಿ ಶಿಕ್ಷಕರೊಬ್ಬರಿಗೆ ಸಹಾಯಧನ, ಅನಾರೋಗ್ಯ ಪೀಡಿತ ಮತ್ತು ಅಶಕ್ತರಿಗೆ ಸಹಾಯಧನ ಹಸ್ತಾಂತರಿಸಲಾಯಿತು.
ದರೆಗುಡ್ಡೆ ವೇ.ಮೂ. ನಾಗರಾಜ ಭಟ್ ನೇತೃತ್ವದಲ್ಲಿ ಶನೀಶ್ವರ ಪೂಜೆ ನಡೆಯಿತು. ನಂತರ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಕಲಾವಿದರಿಂದ ನೃತ್ಯ ಸಿಂಚನ, ಸಪ್ತಸ್ವರ ಮೆಲೋಡಿಸ್ ವಾಮದಪದವು ಮತ್ತು ಕಟೀಲೇಶ್ವರೀ ಮೆಲೋಡಿಸ್ ಕೆಲ್ಲಪುತ್ತಿಗೆ ಇವರಿಂದ ಸಂಗೀತ ರಸಮಂಜರಿ ಹಾಗೂ ಮೋಕೆದ ಕಲಾವಿದೆರ್ ಜಾರ್ಕಳ ಮುಂಡ್ಲಿ ಇವರ ಸಾಮಾಜಿಕ ಹಾಸ್ಯಮಯ ನಾಟಕ ಅಜ್ಜಿಗ್ ರ‍್ಲಾ ಇಜ್ಜಿ ಪ್ರದರ್ಶನಗೊಂಡಿತು.