ಸಾರಾಂಶ
- ಗೆಜ್ಜೆಗೊಂಡನಹಳ್ಳಿಯಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ಸಾಯಿನಾಥ ಮಂದಿರ
ಕನ್ನಡಪ್ರಭ ವಾರ್ತೆ, ಅಜ್ಜಂಪುರ ಒಂದು ಕಾಲದಲ್ಲಿ ಹೊರ ರಾಷ್ಟ್ರಗಳ ಅನಾದರಣೆಗೆ ಒಳಗಾಗಿದ್ದ ಭಾರತ ಬದಲಾದ ಕಾಲದಲ್ಲಿ ಜಾಗತಿಕ ರಾಷ್ಟ್ರಗಳಿಗೆ ಸಾಲ ನೀಡುವಷ್ಟು ಬೆಳೆದಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.ಗೆಜ್ಜೆಗೊಂಡನಹಳ್ಳಿಯಲ್ಲಿ ಶಿರಡಿ ಸಾಯಿಬಾಬಾ ನೂತನ ಮಂದಿರ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಬಂದಾಗ ವಿದ್ಯಾವಂತರು ಕಡಿಮೆ ಇದ್ದರೂ ಅಪರಾಧದ ಸಂಖ್ಯೆ ಕಡಿಮೆ ಇತ್ತು. ಈಗ ಶೇ. 97 ರಷ್ಟು ವಿದ್ಯಾವಂತರು ಇದ್ದರೂ ಅಪರಾಧ ಪ್ರಕರಣಗಳು ಅಧಿಕವಾಗಿವೆ ಎಂದು ವಿಷಾದಿಸಿದರು.
ಇಂದು ದೇವಸ್ಥಾನ ಕಟ್ಟಿದರೆ ಆ ಊರಲ್ಲಿ ಜಾತಿ- ಧರ್ಮ ಎಂಬ ಭೇದ ಭಾವ ಇರುವುದಿಲ್ಲ. ಅಂತ ಒಂದು ಕಾರ್ಯವನ್ನು ಅಪೂರ್ವ ಸಹೋದರರಾದ ಡಾ. ಚಂದ್ರಶೇಖರ್, ಉದ್ಯಮಿ ಪ್ರಕಾಶ್ ಓಂಕಾರ ಮೂರ್ತಿ ಮಾಡಿದ್ದಾರೆ. ಇಂಥವರ ಆದರ್ಶಗಳು ಅನುಕರಣೀಯ ಎಂದರು.ಡಾ. ಚಂದ್ರಶೇಖರ್ ಮಾತನಾಡಿ ಕಳೆದ 20 ವರ್ಷಗಳಿಂದ ನಮ್ಮ ತಂದೆ ತಾಯಿ ಹೆಸರಿನಲ್ಲಿ ಧಾರ್ಮಿಕ ಕಾರ್ಯ, ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ನಮಗೆ ನಮ್ಮ ಊರಿನಲ್ಲಿ ಗುಡಿ ಗೌಡ್ರು ಗ್ರಾಮಸ್ಥರು ಸಹಕಾರ ನೀಡಿರುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಗೋಪಾಲರಾಯ ಕೆರೆಗೆ ಸಂಸದರ ನಿಧಿಯಿಂದ ಪೈಪುಗಳನ್ನು ಅಳವಡಿಸಲು ಹಣ ನೀಡಿದ್ದು ಇದಕ್ಕೆ ತರೀಕೆರೆ ಶಾಸಕರು ಸಹಕಾರ ನೀಡಿದ್ದಾರೆ. ವಾಣಿವಿಲಾಸ ಸಾಗರ ಅಣೆಕಟ್ಟಿನ ತರ ಅಣೆಕಟ್ಟೆ ನಿರ್ಮಾಣ ಮಾಡುವಂತೆ ಜನರ ಪರವಾಗಿ ಕೇಳಿ ಕೊಂಡರು. ಮಾಜಿ ಶಾಸಕ ಡಿ. ಎಸ್. ಸುರೇಶ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಈ ಗ್ರಾಮದ ಅಪೂರ್ವ ಸಹೋದರರ ದಾನದ ಕಾರ್ಯ ಶೈಕ್ಷಣಿಕ ಸಹಾಯ ವೈದ್ಯಕೀಯ ನೆರವು ಗ್ರಾಮದ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ. ಎಂದು ತಿಳಿಸಿದರು.ಸಂಸದರ ಅನುದಾನದಡಿ ಗೋಪಾಲರಾಯ ಕೆರೆಯನ್ನು ವಾಣಿವಿಲಾಸ ಸಾಗರದಂತೆ ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸುವಂತೆ ಯೋಜನೆ ರೂಪಿಸಲಾಗಿದೆ ಎಂದರು. ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಮಠಾಧೀಶರಾದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ, ಜ್ಞಾನಪ್ರಭು ಸಿದ್ದರಾಮಯ್ಯ ಕೇಂದ್ರ ಸ್ವಾಮಿ, ನಂದೀಶ್ವರ ಶಿವಾಚಾರ್ಯ ಸ್ವಾಮಿ, ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ ಸಂದೇಶ ನೀಡಿದರು, ಬಿ, ರಂಗಸ್ವಾಮಿ, ಮೆಡಿಕಲ್ ಶಿವಾನಂದ್, ಎಂ. ಕೃಷ್ಣಮೂರ್ತಿ , ಕೆ. ಗಿರೀಶ್ ಚೌಹಾಣ್ ಹಾಗೂ ಭರತ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಎರೆಹೊಸೂರಿನ ಮಾಜಿ ಸೈನಿಕ ಜಯಣ್ಣರು ರೈಲಿನಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಬೇಕೆಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಮನವಿ ಅರ್ಪಿಸಿದರು. ಗೆಜ್ಜೆಗೊಂಡನಹಳ್ಳಿ ಗ್ರಾಮದ ನವೀನ್ ಕಾರ್ಯಕ್ರಮ ನಿರೂಪಣೆ ಮಾಡಿದರು.;Resize=(128,128))
;Resize=(128,128))
;Resize=(128,128))