ಸ್ವಾತಂತ್ರ್ಯಾನಂತರ ಆಹಾರ ಧಾನ್ಯ, ಎಣ್ಣೆಕಾಳು ಬೀಜ, ಕಾಳು ಧಾನ್ಯ, ಮೊಟ್ಟೆ, ಹಾಲು, ತೋಟಗಾರಿಕಾ ಬೆಳೆಗಳು ಮುಂತಾದವುಗಳ ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ.
ಧಾರವಾಡ:
ಆಹಾರ ಉತ್ಪಾದನೆಯಲ್ಲಿ ಅತೀವ ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಭಾರತವು ಪ್ರಮುಖ ಆಹಾರ ಉತ್ಪಾದನಾ ದೇಶವಾಗಿ ಹೊರಹೊಮ್ಮಿದೆ ಎಂದು ಹೈದರಾಬಾದ್‌ನ ಅರೆ-ಶುಷ್ಕ ಬೆಳೆ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಹೇಳಿದರು.ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವಿವಿ ರೂವಾರಿ ಡಾ. ಎಸ್.ಡಬ್ಲೂ. ಮೆಣಸಿನಕಾಯಿ ಜನ್ಮದಿನಾಚರಣೆ ಸ್ಮರಣಾರ್ಥ ಆಹಾರದಿಂದ ಪೋಷಣೆ, ಆದಾಯ ಮತ್ತು ಪರಿಸರ ಭದ್ರತೆ ಹಾಗೂ ಮುಂದಿನ ತಲೆಮಾರಿನ ಕೃಷಿ ಕುರಿತು ಉಪನ್ಯಾಸ ನೀಡಿದ ಅವರು, ಸ್ವಾತಂತ್ರ್ಯಾನಂತರ ಆಹಾರ ಧಾನ್ಯ, ಎಣ್ಣೆಕಾಳು ಬೀಜ, ಕಾಳು ಧಾನ್ಯ, ಮೊಟ್ಟೆ, ಹಾಲು, ತೋಟಗಾರಿಕಾ ಬೆಳೆಗಳು ಮುಂತಾದವುಗಳ ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ ಎಂದರು.
ಭವಿಷ್ಯದಲ್ಲಿ ಕೃಷಿಯ ಸವಾಲು ಎದುರಿಸಲು ಕೃತಕ ಬುದ್ಧಿಮತ್ತೆ, ಜೀನೋಮ್ ಎಡಿಟಿಂಗ್, ಜೀನೋಮಿಕ್ಸ್, ಫೀನೋಮಿಕ್ಸ್, ಯಂತ್ರ ಅಧ್ಯಯನ, ರೋಬೋಟಿಕ್ಸ್, ಡ್ರೋನ್‌ಗಳು, ಬೃಹತ್ ದತ್ತಾಂಶ ವಿಶ್ಲೇಷಣೆ ಮುಂತಾದ ಮುಂದಿನ ತಲೆಮಾರಿನ ತಂತ್ರಜ್ಞಾನಗಳ ಮಹತ್ವದ ಪಾತ್ರವನ್ನು ಡಾ. ಪಾಠಕ್ ವಿವರಿಸಿದರು.ಅಧ್ಯಕ್ಷತೆ ವಹಿಸಿದ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಡಾ. ಎಸ್.ಡಬ್ಲ್ಯೂ. ಮೆಣಸಿನಕಾಯಿ ಕೃಷಿ ಮಹಾವಿದ್ಯಾಲಯದ ಆರಂಭಿಕ ವರ್ಷಗಳಲ್ಲಿ ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಆಕರ್ಷಣೆ ಮಾಡಿದ್ದು, ಅವರ ದೂರದೃಷ್ಟಿ ಮತ್ತು ಪರಿಶ್ರಮದ ಫಲವಾಗಿ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ ಎಂದರು.
ಫೌಂಡೇಶನ್ ಉಪಾಧ್ಯಕ್ಷ ಡಾ. ವಿ.ಬಿ. ಕುಲಿಗೋಡ ಸ್ವಾಗತಿಸಿದರು. ಡಾ. ಎಸ್.ಎ. ದೇಸಾಯಿ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರಿದ್ದರು.