ಜಗತ್ತಿನಲ್ಲಿ ಮಧುಮೇಹದ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿ

| Published : Nov 17 2024, 01:16 AM IST / Updated: Nov 17 2024, 01:15 PM IST

ಜಗತ್ತಿನಲ್ಲಿ ಮಧುಮೇಹದ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಲ್ಲಿ ಮಧುಮೇಹದ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಡಾ.ನಾಗೇಶ್ ಕಳವಳ ವ್ಯಕ್ತಪಡಿಸಿದರು.

  ಚನ್ನರಾಯಪಟ್ಟಣ : ಜಗತ್ತಿನಲ್ಲಿ ಮಧುಮೇಹದ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಡಾ.ನಾಗೇಶ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ನಾಗೇಶ್ ಆಸ್ಪತ್ರೆ ಹಾಗೂ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಮಧುಮೇಹ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಧುಮೇಹ 2009 ರಲ್ಲಿ ಶೇಕಡ 7.1 ರಷ್ಟಿತ್ತು. 2019  ವೇಳೆಗೆ ಅದು ಶೇ 8.9ಕ್ಕೆ ಏರಿತ್ತು. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ವರದಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 20 ರಿಂದ 77 ವರ್ಷ ವಯಸ್ಸಿನ 7.7 ಕೋಟಿ ಜನ ಮಧುಮೇಹದ ಸಮಸ್ಯೆ ಹೊಂದಿದ್ದಾರೆ. 2045 ರ ವೇಳೆಗೆ ಇದು 13.42  ಕೋಟಿಗೆ ಏರಿಕೆಯಾಗಲಿದೆ. ಮಧುಮೇಹ ಮತ್ತು ಅದರಿಂದ ಸಂಭವಿಸುವ ಇತರ ಸಮಸ್ಯೆಗಳ ಅಸಮರ್ಪಕ ನಿರ್ವಹಣೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಎಡವುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚಿನ ಜನರ ಆರೋಗ್ಯ ಅಪಾಯಕ್ಕೆ ಸಿಲುಕುತ್ತಿರುವುದಾಗಿ ಅಧ್ಯಯನ ವರದಿಗಳು ಹೇಳುತ್ತಿವೆ ಎಂದರು.

ಒತ್ತಡದ ಜೀವನದಲ್ಲಿ ಮಧುಮೇಹದಂತಹ ಸಮಸ್ಯೆಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಸಮಯ ಮೀಸಲಿಡುವುದನ್ನು ಮರೆಯುವಂತಿಲ್ಲ. ಮಧುಮೇಹವು ಸೂಕ್ಷ್ಮ ರಕ್ತನಾಳಗಳು ಮತ್ತು ದೊಡ್ಡ ರಕ್ತನಾಳಗಳ ಮೇಲೆ ಹಾನಿ ಉಂಟು ಮಾಡುತ್ತದೆ. ಸೂಕ್ಷ್ಮ ರಕ್ತನಾಳಗಳ ಮೇಲಿನ ಹಾನಿಯು ನರರೋಗ, ಮೂತ್ರಕೋಶ ಸಂಬಂಧಿ ರೋಗ ಮತ್ತು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ದೊಡ್ಡ ರಕ್ತನಾಳಗಳ ಮೇಲೆ ಮಧುಮೇಹವು ಉಂಟುಮಾಡುವ ಪರಿಣಾಮಗಳು ಹೃದಯಾಘಾತವೂ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುತ್ತವೆ ಎಂದರು.ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಮಧುಮೇಹದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಮಧುಮೇಹ ತಡೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಘೋಷಣಾ ಫಲಕಗಳನ್ನು ಹಿಡಿದು ಪಟ್ಟಣದ ಬೀದಿಗಳಲ್ಲಿ ಸಾಗಿ ಜನರನ್ನು ಜಾಗೃತಿಗೊಳಿಸಿದರು.

ಕಾರ್ಯಕ್ರಮದಲ್ಲಿ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತಿ ನಾಗೇಶ್, ಪ್ರಾಂಶುಪಾಲೆ ಆರ್‌.ಜೆ.ವಿದ್ಯಾರಾಣಿ, ಆಸ್ಪತ್ರೆಯ ವ್ಯವಸ್ಥಾಪಕ ಎನ್.ಜಿ.ಕೇಶವಮೂರ್ತಿ, ಆಡಳಿತ ವಿಭಾಗದ ಸಿಬ್ಬಂದಿ ಉಮೇಶ್, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

 ತಹಸೀಲ್ದಾರ್‌ ವಿ.ಎಸ್.ನವೀನ್ ಕುಮಾರ್, ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿನ ಅತಿಯಾದ ಏರಿಕೆಯಿಂದ ಮಧುಮೇಹ ಬರುತ್ತದೆ. ಇದು ಮನುಷ್ಯರನ್ನು ದೀರ್ಘಕಾಲ, ನಿರಂತರವಾಗಿ ತೀವ್ರತರವಾಗಿ ಕಾಡುವ ಸಮಸ್ಯೆಯಾಗಿದ್ದು, ಬಹು ಅಂಗಾಂಗಗಳಿಗೆ ಹಾನಿ ಮಾಡುವ ಅಪಾಯವನ್ನು ಹೊಂದಿದೆ. ದೇಶದ ಜನರಲ್ಲಿ ಈ ಕುರಿತು ಅರಿವಿನ ಕೊರತೆ ಇದೆ. ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆ ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಅರಿವು ಮೂಡಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.