ಭಾರತ ವಿಶ್ವಗುರು ಪಥದತ್ತ ಸಾಗುತ್ತಿರುವುದು ಅಭಿವೃದ್ಧಿಯ ಸಂಕೇತ: ಮಮತಾ ಹೊಸಗೌಡ್ರ

| Published : Jan 27 2025, 12:49 AM IST

ಭಾರತ ವಿಶ್ವಗುರು ಪಥದತ್ತ ಸಾಗುತ್ತಿರುವುದು ಅಭಿವೃದ್ಧಿಯ ಸಂಕೇತ: ಮಮತಾ ಹೊಸಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರ ನಾಯಕರು ಕೈಗೊಂಡ ಪ್ರಥಮ ಮಹಾತ್ಕಾರ್ಯವೆಂದರೆ ನಮ್ಮ ದೇಶಕ್ಕೊಂದು ಸಂವಿಧಾನ ರಚನೆ ಮಾಡಿದ್ದು, ದೇಶದ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರ ಹೇಳಿದರು.

ಸವಣೂರು: ಭಾರತ ವಿಶ್ವಗುರು ಪಥದತ್ತ ಸಾಗುತ್ತಿರುವುದು ರಾಷ್ಟ್ರದ ಅಭಿವೃದ್ಧಿ ಚಿತ್ರಣವಾಗಿದೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ರಾಷ್ಟ್ರ ನಾಯಕರು ಕೈಗೊಂಡ ಪ್ರಥಮ ಮಹಾತ್ಕಾರ್ಯವೆಂದರೆ ನಮ್ಮ ದೇಶಕ್ಕೊಂದು ಸಂವಿಧಾನ ರಚನೆ ಮಾಡಿದ್ದು, ದೇಶದ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಅದಕ್ಕಾಗಿ ಅವರನ್ನು ನಾವು ''''''''ಸಂವಿಧಾನಶಿಲ್ಪ'''''''' ಎಂದು ಹೆಮ್ಮೆಯಿಂದ ಕರೆಯುತ್ತೇವೆ ಎಂದು ಹೇಳಿದರು. ದೇಶದ ಕಾನೂನು ಸರ್ವ ಶ್ರೇಷ್ಠವಾಗಿದೆ. ಸರ್ವರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಂವಿಧಾನ ಒದಗಿಸಿದೆ. ನಮ್ಮ ಸಂವಿಧಾನದ ಪ್ರಕಾರ ದೇಶದ ಆಡಳಿತವನ್ನು ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ನಾವು ಸಂಘಟಿಸಿಕೊಂಡಿದ್ದೇವೆ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮ ಬಾಳು ನಮ್ಮ ಸಂವಿಧಾನದ ಆಶಯವಾಗಿದೆ. ಭಾರತ ಸಂವಿಧಾನವು ಅನೇಕ ಕಾರಣಗಳಿಗಾಗಿ ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವ ವ್ಯಕ್ತಿ ಸ್ವಾತಂತ್ರ‍್ಯ ಮತ್ತು ಸಾಮಾಜಿಕ ಸ್ವಾತಂತ್ರ‍್ಯಗಳು ಮತ್ತು ಅವುಗಳ ಅಂತರಾತ್ಮದಿಂದ ಹೊರಮೂಡಿರುವ ಸಾಮಾಜಿಕ ನ್ಯಾಯ ಸಿದ್ಧಾಂತ ಸಂವಿಧಾನದ ಆದರ್ಶಕ್ಕೆ ನಾಂದಿಯಾಗಿದೆ. ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸುಧಾರಣೆಗಾಗಿ ಸಮಾಜವಾದಿ ನೀತಿ ಮತ್ತು ಜಾತ್ಯತೀತ ಸಿದ್ಧಾಂತವು ಭಾರತೀಯರ ಔದಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ತಹಸೀಲ್ದಾರ್ ಭರತರಾಜ್ ಕೆ.ಎನ್. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸುಭಾಸ ಮಜ್ಜಗಿ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಜೀಶಾನಖಾನ್ ಪಠಾಣ, ಪಿಐ ಆನಂದ ಒನಕುದ್ರೆ ಹಾಗೂ ಇತರರು ಪಾಲ್ಗೊಂಡಿದ್ದರು.

ಬಿಇಒ ಎಂ.ಎಫ್. ಬಾರ್ಕಿ ಕಾರ್ಯಕ್ರಮ ನಿರ್ವಹಿಸಿದರು.