ಸಾರಾಂಶ
ಪಾಕ್ ಆಕ್ರಮಿತ ಕಾಶ್ಮೀರ ಮಾತ್ರ ಅಲ್ಲ ಭಾರತದ ತಂಟೆಗೆ ಬಂದಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಹೊಡೆಯುತ್ತೇವೆ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಬೀತು ಮಾಡಿದೆ. ಸ್ವತಃ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್‌ನ ಕುಟುಂಬವನ್ನೇ ನಾಶ ಮಾಡಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಪೆಹಲ್ಗಾಮ್‌ನಲ್ಲಿ ಭಾರತದ ಅಮಾಯಕರ ನರಮೇಧ ನಡೆಸಿದ ಉಗ್ರರ ಮನೆಗೆ ನುಗ್ಗಿ ಹೊಡೆದ ನಮ್ಮ ಯೋಧರ ಪರಾಕ್ರಮ ಮತ್ತು ಪಾಕಿಸ್ತಾನದ ಕುಕೃತ್ಯ ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.ಪಾಕ್ ಆಕ್ರಮಿತ ಕಾಶ್ಮೀರ ಮಾತ್ರ ಅಲ್ಲ ಭಾರತದ ತಂಟೆಗೆ ಬಂದಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಹೊಡೆಯುತ್ತೇವೆ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಬೀತು ಮಾಡಿದೆ. ಸ್ವತಃ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್‌ನ ಕುಟುಂಬವನ್ನೇ ನಾಶ ಮಾಡಿದೆ. ಮುಂದೆ ಉಗ್ರರ ಈ ಮೂಲ ನೆಲೆಯನ್ನೇ ಒಡೆದು ಹಾಕಲು ಭಾರತ ಸಿದ್ಧ, ಕೇವಲ ಡಿಫೆನ್ಸ್ ಮಾತ್ರ ಅಲ್ಲ ಅಫೆನ್ಸಿವ್ ಆಗಿ ಕೂಡ ಪ್ರತಿಕ್ರಿಯೆ ನೀಡುತ್ತದೆ ಎಂದು ಭಾರತ ಸಂದೇಶ ನೀಡಿದೆ ಎಂದವರು ಹೇಳಿದ್ದಾರೆ.2001ರ ಪಾರ್ಲಿಮೆಂಟ್ ಮೇಲಿನ ದಾಳಿ, 2002ರ ದೆಹಲಿಯ ಅಕ್ಷರಧಾಮದ ಮೇಲೆ ದಾಳಿ, 2008ರ ಮುಂಬೈ ದಾಳಿ, 2016ರ ಉರಿ ದಾಳಿ, 2019ರ ಪುಲ್ವಾಮಾ ದಾಳಿ, ಈಗ ಪೆಹಲ್ಗಾಮ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸ್ಟ್ರೈಕ್‌ಗೆ ಪಾಕ್ ಈಗಾಗಲೇ ಅರ್ಧ ತತ್ತರಿಸಿದೆ. ಉರಿ ದಾಳಿಗೆ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿಗೆ ಬಾಲಕೋಟ್ ಸ್ಟ್ರೈಕ್, ಈಗ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿ ಭಾರತೀಯ ತಾಯಂದಿರ ಸಿಂದೂರ ಅಳಿಸಿದವರ ನೆಲದಲ್ಲಿಯೇ ರಕ್ತದೋಕುಳಿ ಹರಿಸಿ ಪೆಹಲ್ಗಾಮ್‌ನಲ್ಲಿ ಮಡಿದವರಿಗೆ ನ್ಯಾಯ ದೊರಕಿಸುವ ಕಾರ್ಯ ನಮ್ಮ ಹೆಮ್ಮೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಮಾಡಿದೆ. ಅವರಿಗೆ ಅಭಿನಂದನೆಗಳು ಎಂದು ಶ್ರೀನಿಧಿ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.