ಸಾರಾಂಶ
ಆಪರೇಶನ್ ಸಿಂದೂರ್ ಮೂಲಕ ಸೈನ್ಯ ಸಿಂದೂರದ ಮಹತ್ವ ಸಾರಿದೆ. ಪತಿ ಕೊಂದು ಹೋಗಿ ಮೋದಿಗೆ ಹೇಳು ಎಂದವರಿಗೆ ತಕ್ಕ ಉತ್ತರ ನೀಡಿದೆ.
ಹುಬ್ಬಳ್ಳಿ: ಪಹಲ್ಗಾಂನಲ್ಲಿ ಹಿಂದೂಗಳ ಹತ್ಯೆಗೆ ಆಪರೇಶನ್ ಸಿಂದೂರ್ ಮೂಲಕ ಕೇಂದ್ರ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಿದೆ. ಕೇವಲ 26 ನಿಮಿಷಗಳಲ್ಲಿ ಉಗ್ರ ತಾಣ ಧ್ವಂಸಗೊಳಿಸಿರುವುದನ್ನು ನೋಡಿ ಪಾಕಿಸ್ತಾನವು ನಮ್ಮ ದೇಶದ ಶಕ್ತಿ ಅರಿತುಕೊಳ್ಳಲಿ. ಭಾರತ ಮನಸ್ಸು ಮಾಡಿದರೆ ವಿಶ್ವದಲ್ಲಿ ಪಾಕಿಸ್ತಾನ ಹುಡುಕುವ ಪರಿಸ್ಥಿತಿ ಬರುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಶನ್ ಸಿಂದೂರ್ ಮೂಲಕ ಸೈನ್ಯ ಸಿಂದೂರದ ಮಹತ್ವ ಸಾರಿದೆ. ಪತಿ ಕೊಂದು ಹೋಗಿ ಮೋದಿಗೆ ಹೇಳು ಎಂದವರಿಗೆ ತಕ್ಕ ಉತ್ತರ ನೀಡಿದೆ. ಪಹಲ್ಗಾಂ ದಾಳಿಯನ್ನು ಅಂತಾರಾಷ್ಟ್ರೀಯ ಸಮುದಾಯಗಳು ತೀವ್ರವಾಗಿ ಖಂಡಿಸಿದ್ದವು. ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ಸಮಯೋಚಿತ ದಾಳಿ ಮಾಡಲು ಸೈನಿಕರು ಹಾಗೂ ಅವರಿಗೆ ಪ್ರೇರಣೆ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.ದೇಶದ ಭದ್ರತೆ ವಿಷಯದಲ್ಲಿ ಇನ್ನಾದರೂ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುವುದನ್ನು ತಕ್ಷಣ ನಿಲ್ಲಿಸಲಿ. ಯಾವುದೇ ಜಾತಿ ಮತ-ಭೇದ, ರಾಜಕೀಯವನ್ನು ಬದಿಗಿಟ್ಟು ದೇಶದ 140 ಕೋಟಿ ಜನರ ಹಿತದೃಷ್ಟಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.